ದುಡ್ಡು ಕೊಟ್ಟು ನನ್ನ ವಿರುದ್ಧ ಟ್ರೋಲ್ ಮಾಡಿಸಿದ್ದಾರೆ: ನೊರಾ ಆರೋಪ
- ಕೆ.ಡಿ. ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ವಿವಾದ
- ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಕೆ.ಡಿ: ದಿ ಡೆವಿಲ್
- ನನಗೆ ಈ ಹಾಡಿನ ಬಗ್ಗೆ ಮಾಹಿತಿ ಇರಲಿಲ್ಲ : ನೊರಾ
- ದುಡ್ಡು ಕೊಟ್ಟು ನನ್ನ ವಿರುದ್ಧ ಟ್ರೋಲ್ ಮಾಡಿಸಿದ್ದಾರೆ: ನೊರಾ ಆರೋಪ
ಮುಂಬೈ: ಕೆಲ ತಿಂಗಳುಗಳ ಹಿಂದೆ ಜೋಗಿ ಪ್ರೇಮ್ ನಿರ್ದೇಶನದ ಕೆಡಿ: ದಿ ಡೆವಿಲ್ ಸಿನಿಮಾದ ಸರ್ಸೆ ನಿನ್ನ ಸೆರಗ ಸರ್ಸೆ ಹಾಡು ಭಾರಿ ವಿವಾದಕ್ಕೆ ಕಾರಣವಾಗಿ ಆ ಹಾಡನ್ನು ಯೂಟ್ಯೂಬ್ನಿಂದ ಬ್ಯಾನ್ ಕೂಡ ಮಾಡಲಾಗಿತ್ತು.
ಈಗ ಈ ಘಟನೆ ಬಗ್ಗೆ ಹಾಡಿಗೆ ಹೆಜ್ಜೆ ಹಾಕಿದ್ದ ನೊರಾ ಫತೇಹಿ (Nora Fatehi) ಪಾಡ್ಕಾಸ್ಟ್ವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದು, ಸಿನಿಮಾ ಸೆಟ್ನಲ್ಲಿ ಆಗಿದ್ದೇನು? ಹಾಡಿನ ಸಾಹಿತ್ಯದ ಬಗ್ಗೆ ತಮಗಿದ್ದ ಮಾಹಿತಿ ಏನು? ಹಾಗೂ ಆ ಹಾಡಿನ ನಂತರ ನಡೆದ ಟ್ರೋಲಿಂಗ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ನನಗೆ ಈ ಹಾಡಿನ ಬಗ್ಗೆ ಮಾಹಿತಿಯೇ ಇರಲಿಲ್ಲ!
ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ನೊರಾ ಫತೇಹಿ, ಮೊದಲನೇದಾಗಿ ನನಗೆ ಈ ಹಾಡಿನ ಹಿಂದಿ ವರ್ಷನ್ ಬಗ್ಗೆ ಮಾಹಿತಿ ಇರಲಿಲ್ಲ. ನಾನು ಡಾನ್ಸ್ ಮಾಡಿದ ಹಾಡು ಇದಾಗಿರಲಿಲ್ಲ. ಇದನ್ನು ನಾನು ವಿವಾದವಾದಗ ಕೂಡ ವಿಡಿಯೋ ಮಾಡಿ ಹಂಚಿಕೊಂಡಿದ್ದೆ. ಆದರೆ ಜನ ಅದನ್ನು ನಂಬುವುದಿಲ್ಲ, ಆದರೆ ನನ್ನ ಬಳಿ ಇದಕ್ಕೆಲ್ಲಾ ಸಾಕ್ಷಿಯಿದೆ ಎಂದಿದ್ದಾರೆ.
ಆದರೆ, ನಾನು ಇಷ್ಟು ವರ್ಷ ಚಿತ್ರರಂಗದಲ್ಲಿದ್ದು, ಚರ್ಮವನ್ನು ದಪ್ವಾಗಿಸಿಕೊಂಡಿದ್ದೆನೆ. ಹೀಗಾಗಿ ಈ ಕೊಂಕು ಮಾತುಗಳು ನನಗೆ ತಟ್ಟುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಹಾಡು ಸಂಪೂರ್ಣವಾದ ಹಾಡಾಗಿರಲಿಲ್ಲ. ಅದು ಕೃತಕ ಬುದ್ದಿಮತ್ತೆ ಸಹಾಯದಿಂದ ಸೃಷ್ಟಿಸಿದ ಕೆಲವೇ ನಿಮಿಷಗಳ ಕ್ಲಿಪ್ ಆಗಿತ್ತು. ಆದರೂ ಬೇಕಂತಲೇ ನನ್ನನ್ನು ಟಾರ್ಗೆಟ್ ಮಾಡಿಕೊಂಡು. ಈ ಹಾಡಿನ ಮೂಲಕ ನನ್ನ ತೇಜೋವಧೆ ಸಾಕಷ್ಟು ನಡೆಯಿತು, ಸಾಕಷ್ಟು ಟ್ರೋಲಿಂಗ್ ಕೂಡ ಮಾಡಲಾಯಿತು.
ನನಗೆ ಕನ್ನಡ ಬರುತ್ತಿರಲಿಲ್ಲ!
ಹಾಗೆಯೇ, ಈ ಸಿನಿಮಾ ಮೂಲ ಕನ್ನಡದಲ್ಲಿ ಕಂಡುಬಂದಿತ್ತು. ನನಗೆ ಆ ಭಾಷೆ ಬರುವುದಿಲ್ಲ, ಮತ್ತು ಈ ಹಾಡಿನ ಶೂಟಿಂಗ್ ನಾನು ವರ್ಷಗಳ ಹಿಂದೆ ಮಾಡಿದ್ದೆ, ಅದಕ್ಕೆ ನನ್ನ ಒಪ್ಪಿಗೆ ಸಹ ಇತ್ತು. ಏಕೆಂದರೆ ಈ ಹಾಡು ಸಿನಿಮಾಗೆ ಅಗತ್ಯವಾಗಿತ್ತು ಮತ್ತು ಸಂಜಯ್ ದತ್ ಅವರ ಜೊತೆ ಕಾಣಿಸಿಕೊಳ್ಳಲು ನಾನು ಹೇಗೆ ಇಲ್ಲ ಎನ್ನಲಿ? ಹೀಗಾಗಿ ನಿರ್ದೇಶಕರು ಹೇಗೆ ಹೇಳಿದರೋ ಹಾಗೆ ಮಾಡಿದೆ.
ಕನ್ನಡ ನನಗೆ ಬರುತ್ತಿರಲಿಲ್ಲ, ಆದರೆ ಹಾಡನ್ನು ಕೇಳಿಸಿಕೊಂಡಾಗ ನಾನು ಇದು ನಾಯಕ್ ನಹಿ ಕಳನಾಯಕ್ ಹೂ ಮೇ ಹಾಡಿನ ರೀತಿಯ ಹಾಡು ಎಂದು ಭಾವಿಸಿದ್ದೆ ಮತ್ತು ಒಪ್ಪಿಗೆ ನೀಡಿದ್ದೆ. ಆದರೆ ಹಿಂದೆ ಭಾಷಾಂತರಕ್ಕೆ ನನ್ನ ಬಳಿ ಯಾರೂ ಒಪ್ಪಿಗೆಯನ್ನು ಕೇಳಿಲ್ಲ ಹಾಗೂ ನಾನು ಒಪ್ಪಿಗೆ ಕೂಡ ನೀಡಿರಲಿಲ್ಲ ಎಂದು ನೊರಾ ಹೇಳಿದ್ದಾರೆ.
ಪ್ರೇಮ್ ಜೊತೆ ಮಾತನಾಡಿದ್ದೆ!
ಈ ಹಾಡಿನ ಹಿಂದಿ ವರ್ಷನ್ ಬಿಡುಗಡೆಯಾದಾಗ ನನಗೆ ಇದು ವಿವಾದವಾಗುತ್ತೆಂದು ತಿಳಿದಿತ್ತು. ನಾನು ನಿರ್ದೇಶಕ ಪ್ರೇಮ್ ಅವರಿಗೆ ಕರೆ ಮಾಡಿ ನನಗೆ ಇದು ಬ್ಯಾಕ್ಲಾಶ್ ಆಗುತ್ತೆ, ನನ್ನ ಹೆಸರು ಮತ್ತು ಗೌರವ ಹಾಳಾಗುತ್ತಿದೆ. ನಾನು ಈ ಸಿನಿಮಾವನ್ನು, ಇದರ ಹಾಡನ್ನು ಎಲ್ಲಿಯೂ ಸಹ ಪ್ರಚಾರ ಮಾಡಲ್ಲ ಎಂದು ಹೇಳಿದ್ದೆ ಮತ್ತು ನಾನು ಎಲ್ಲಿ ಕೂಡ ಪ್ರಚಾರ ಮಾಡಿಲ್ಲ ಎಂದು ನಟಿ ಹೇಳಿದ್ದಾರೆ, (ಏಜನ್ಸೀಸ್).