Isha Koppikar andhbhakt comment
- ದೇಶದ ಪ್ರೀತಿ, ಅಭಿವೃದ್ಧಿ ಬಯಸುವ ಅಂಧ ಭಕ್ತೆ ಎಂದ ನಟಿ ಇಶಾ ಕೊಪ್ಪಿಕರ್
- ಚೆನ್ನಾಗಿ ಹೇಳಿದ್ದೀರಿ ನಾನು ಕೂಡ ಸರಳವಾದ ಜೀವನ, ನನ್ನ ದೇಶ, ಜನರನ್ನು ಪ್ರೀತಿ ಮಾಡ್ತೇನೆ ಎಂದ ಕಂಗನಾ
- ಅಂಧ ಭಕ್ತಿ ಹೇಳಿಕೆಯಿಂದ ಟೀಕೆಗೆ ಒಳಗಾದ ಇಶಾ ಕೊಪ್ಪಿಕರ್ಗೆ ಕಂಗನಾ ಬೆಂಬಲ
Isha Koppikar andhbhakt comment:
ಸೂರ್ಯವಂಶ ಸಿನಿಮಾದಿಂದ ಕನ್ನಡಿಗರ ಮನಗೆದ್ದಿದ್ದ ಇಶಾ ಕೊಪ್ಪಿಕರ್ ಅವರು ಸದ್ಯ ಅಂಧ ಭಕ್ತಿ ಹೇಳಿಕೆ ಮೂಲಕ ಸದ್ದು ಮಾಡುತ್ತಿದ್ದಾರೆ. ದೇಶದ ಅಭಿವೃದ್ಧಿ, ಪ್ರೀತಿ ಬಯಸುವುದು ಭಕ್ತಿಯಾಗಿದ್ದರೆ ನಾನು ಅಂಧ ಭಕ್ತಳಾಗಿರಲು ಹೆಮ್ಮೆಪಡುತ್ತೇನೆ ಎಂದು ಹೇಳಿರುವ ಅವರ ವಿಡಿಯೋಗೆ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರು ಬೆಂಬಲ ಕೊಟ್ಟಿದ್ದಾರೆ.
ಇಶಾ ಕೊಪ್ಪಿಕರ್ ಹೇಳಿದ್ದು ಹೀಗೆ
ದೇಶಕ್ಕೆ ಆಳವಾದ ಪ್ರೀತಿ ಕೊಡಲು, ಏಳಿಗೆಯನ್ನು ಬಯಸುವುದನ್ನು, ಉತ್ತಮ ನಾಯಕನ ಆಳ್ವಿಕೆ ಬಯಸುವುದು ಕುರುಡು ಪ್ರೀತಿ ಎಂದು ನೀವು ಭಾವಿಸಿದರೆ ಸರಿ. ನಾನು ಅಂಧಭಕ್ತಳಾಗಿರಲು ಹೆಮ್ಮೆಪಡುತ್ತೇನೆ. ನನ್ನ ಭಕ್ತಿ ಯಾವುದೇ ರಾಜಕೀಯ ಪಕ್ಷಕ್ಕೆ ಅಲ್ಲ, ನನ್ನ ದೇಶಕ್ಕೆ, ನನ್ನ ಭಾರತಕ್ಕೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದರು.
ಕಂಗನಾ ಹೇಳಿದ್ದೇನು?
ಕಂಗನಾ ಅವರು ಇಶಾ ಅವರ ವಿಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡು ಹೀಗೆಂದು ಬರೆದುಕೊಂಡಿದ್ದಾರೆ. ವಾಹ್, ಚೆನ್ನಾಗಿ ವಿವರಿಸಿದ್ದೀರಿ. ನನ್ನ ವಿಷಯದಲ್ಲಿ - ಹೈಸ್ಕೂಲ್‌ನಲ್ಲಿ ಅಸೆಂಬ್ಲಿಯ ಸಮಯದಲ್ಲಿ ಮಕ್ಕಳ ತಲೆಗೆ ಕೋಲಿನಿಂದ ಹೊಡೆಯುತ್ತಿದ್ದ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿದೆ. 26/11 ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ನಿರ್ಭಯಾ ಕ್ರೌರ್ಯದ ವಿರುದ್ಧ ಪ್ರತಿಭಟನೆ ನಡೆಸಿದೆ. ನನ್ನ ಮಾರ್ಗದಲ್ಲಿ ಬಂದ ಯಾವುದೇ ಮಿತಿಗಳಿಗೆ ತಂದೆ-ತಾಯಿಯನ್ನು ದೂಷಿಸದೆ, ನಾನು ಗಳಿಸಿದ ಜೀವನದಲ್ಲೇ ಬದುಕುತ್ತಿದ್ದೇನೆ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ, ನನ್ನ ಜನರನ್ನು ಪ್ರೀತಿಸುತ್ತೇನೆ. ನಾನು ಸರಳವಾದ ಜೀವನವನ್ನು ಪ್ರೀತಿಸುತ್ತೇನೆ ಎಂದು ಕಂಗನಾ ಹೇಳಿದರು.
ಕಂಗನಾ ಅವರು ಇತ್ತೀಚೆಗೆ ಜೆನ್ ಜಿಗಳನ್ನು ಜನರೇಷನ್ ಗಟರ್ ಎಂದು ಕರೆದಿದ್ರು. ಇದರಿಂದ ಭಾರಿ ಟೀಕೆಗೆ ಒಳಗಾಗಿದ್ದರು. ನೆಟ್ಟಿಗರು ಅವರ ಹಳೆಯ ಪಾರ್ಟಿ ವಿಡಿಯೋಗಳನ್ನು ಕೆದಕಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದರು. ಈ ವಿದ್ಯಾಮಾನದ ನಂತರ ಎಚ್ಚೆತ್ತ ಅವರು, ಸಂಸತ್ ಆವರಣದಲ್ಲಿ ಮಾತನಾಡಿ, ಜೆನ್ ಜಿಗಳು ದೇಶದ ಬೆನ್ನೆಲುಬು, ಸಂಸ್ಕೃತಿ ನಮ್ಮ ಅಸ್ಮಿತೆ ಎಂದು ಉಲ್ಟಾ ಹೊಡೆದದಿದ್ದರು. ಎಲ್ಲರನ್ನು ದೂಷಿಸೋಕೆ ಸಾಧ್ಯವಿಲ್ಲ. ಕೆಲವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದೆ, ನಟಿ ಕಂಗನಾ ಹೇಳಿದ್ದರು, (ಏಜೆನ್ಸೀಸ್).