ಸಿನಿವಾಣಿ

ವಿಧಿವಶರಾದ ಹಿರಿಯ ನಟಿ ಜಯಂತಿ ಕುರಿತು ಭಾವುಕವಾಗಿ ಬರೆದುಕೊಂಡ ಮಾಜಿ ಸೊಸೆ ಅನುಪ್ರಭಾಕರ್!​

ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್​ ಹಿರಿಯ ನಟಿ ಜಯಂತಿ ಅವರಿಂದು ಕೊನೆಯುಸಿರೆಳೆದಿದ್ದಾರೆ. ಅಭಿನಯ ಶಾರದೆ ಅಗಲಿಕೆಗೆ ಚಿತ್ರರಂಗದ ಗಣ್ಯರು ಮತ್ತು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಜಯಂತಿ ಅವರ ಮಾಜಿ ಸೊಸೆ ಹಾಗೂ ನಟಿ ಅನುಪ್ರಭಾಕರ್​ ಭಾವುಕವಾಗಿ ಟ್ವೀಟ್​ ಮಾಡಿದ್ದಾರೆ.

ನಿಮ್ಮ ಜೊತೆ ಕಳೆದಂತ ಪ್ರತಿ ಕ್ಷಣ ಸದಾ ನನ್ನ ಮನಸು ಹಾಗು ಹೃದಯದಲ್ಲಿ ಇರುತ್ತದೆ Mom… ನಿಮ್ಮಿಂದ ಕಲಿತ ಜೀವನದ ಪಾಠಗಳು ನಾನು ಎಂದು ಮರೆಯೋದಿಲ್ಲ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಆ ವಿಷಯದ ಬಗ್ಗೆ ಎಷ್ಟೋ ಸಾರಿ ನನ್ನ ಹತ್ತಿರ ಮಾತಾಡಿದ್ರಿ..ಅಮ್ಮಮ್ಮ ಜೊತೆ ನೆಮ್ಮದಿಯಿಂದ ಇರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಅನುಪ್ರಭಾಕರ್​ ಟ್ವೀಟ್​ ಮಾಡಿದ್ದಾರೆ.

ಜಯಂತಿ ಅವರ ಪುತ್ರ ಕೃಷ್ಣ ಪ್ರಸಾದ್​ ಜತೆ ಮದುವೆ ಆಗಿದ್ದ ಅನುಪ್ರಭಾಕರ್​ ಬಳಿಕ ವಿಚ್ಛೇದನ ಪಡೆದ ನಟ ರಘುಮುಖರ್ಜಿ ಅವರನ್ನು ವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)