ಸಿನಿವಾಣಿ

PHOTOS: ಟ್ರೆಂಡಿಂಗ್​ನಲ್ಲಿದೆ ಬ್ಲ್ಯಾಕ್​ ಆ್ಯಂಡ್​ ವೈಟ್ ಚಾಲೆಂಜ್​; ಸ್ಯಾಂಡಲ್​ವುಡ್​ ನಟಿಯರೂ ಮಿಂಚಿಂಗ್​

ಟ್ವಿಟರ್, ಇನ್​ಸ್ಟಾಗ್ರಾಂನಲ್ಲಿ ಆಗಾಗ ಏನಾದರೊಂದು ಟ್ರೆಂಡ್​ ಆಗುತ್ತಿರುತ್ತದೆ. ಪ್ರಸ್ತುತ ವಿಚಾರಕ್ಕಾಗಿ ಹ್ಯಾಷ್​ಟ್ಯಾಗ್​ ಸೇರಿಸಿ ಒಗ್ಗಟ್ಟನ್ನು ಪ್ರದರ್ಶಿಸುವ ಪದ್ರಕ್ರಿಯೆ ಅಂತಲೂ ಇದನ್ನು ಕರೆಯಬಹುದು. ಇದೀಗ ಅದೇ ರೀತಿ ಬ್ಲಾಕ್​ ಆ್ಯಂಡ್​ ವೈಟ್​ ಫೋಟೋ ಹಂಚಿಕೊಳ್ಳುವ ಮೂಲಕ ಮಹಿಳೆಯರು ಹೊಸ ಅಭಿಯಾನ ಶುರು ಮಾಡಿದ್ದಾರೆ. ವಿದೇಶದಿಂದ ಶುರುವಾದ ಈ ಕ್ಯಾಂಪೇನ್​ ಇದೀಗ ಸ್ಯಾಂಡಲ್​ವುಡ್​ ನಟಿಯರನ್ನೂ ಸೆಳೆದಿದೆ. 

ಚಂದನವನದ ಸಾಕಷ್ಟು ನಟಿಯರು ತಮ್ಮ ಫೋಟೋಗಳನ್ನು ಬ್ಲ್ಯಾಕ್​​ ಆ್ಯಂಡ್​ ವೈಟ್​ ಮಾಡಿಕೊಂಡು, ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು, ಸ್ನೇಹಿತರಿಗೆ ಚಾಲೆಂಜ್​ ವರ್ಗಾಯಿಸುತ್ತಿದ್ದಾರೆ. ಹಾಗಾದರೆ ಏನಿದು ಬ್ಲಾಕ್​ ಆ್ಯಂಡ್​ ವೈಟ್​ ಚಾಲೆಂಜ್​? ಇದು ಮಹಿಳೆಯರಿಗಾಗಿಯೇ ಶುರುವಾದ ಅಭಿಯಾನ. ಮಹಿಳೆಯ ಬೆಂಬಲ ಮಹಿಳೆಗೆ ಎಂಬರ್ಥದಲ್ಲಿನ ಹ್ಯಾಷ್​ಟ್ಯಾಗ್​ಗಳೂ ಈ ಅಭಿಯಾನದಲ್ಲಿ ಟೈಪಿಸಲ್ಪಟ್ಟಿವೆ.

ಒಟ್ಟಾರೆಯಾಗಿ ಶಕ್ತಿ, ಬೆಂಬಲ ಮತ್ತು ಸ್ವಾತಂತ್ಯ್ರದ ದೃಷ್ಟಿಯಿಂದ ಈ ರೀತಿಯ ಟ್ರೆಂಡ್​ ಸದ್ಯ ಚಾಲ್ತಿಯಲ್ಲಿದೆ. ಸ್ಯಾಂಡಲ್​ವುಡ್​ನ ನಟಿಯರೂ ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, ಕಪ್ಪುಬಿಳುಪಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.