ಸಿನಿವಾಣಿ

VIDEO| ಕಣ್ಣಿಲ್ಲದ ಪಿಯಾನೋ ವಾದಕನಿಗೆ ಮಿಡಿಯಿತು ನಿಖಿಲ್​ ಮನ

ಬೆಂಗಳೂರು: ನಿನ್ನೆಯಷ್ಟೇ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅಂಧ ಗಾಯಕನ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಆತನ ಪ್ರತಿಭೆಗೆ ಫಿದಾ ಆಗಿದ್ದರು. ಇದೀಗ ನಟ ನಿಖಿಲ್​ ಕುಮಾರ್​ ಸರದಿ. ಪಿಯಾನೋ ವಾದಕನ ಅದ್ಬುತ ವಾದನಕ್ಕೆ ನಿಖಿಲ್​ ಸಹ ಮನಸೋತಿದ್ದಾರೆ.

ಸೀತಾ ರಾಮ ಕಲ್ಯಾಣ ಸಿನಿಮಾ ಚಿತ್ರ ನನ್ನ ರಾಜ ನೀನು.. ನಿನ್ನ ರಾಣಿ ನಾನು.. ಹಾಡಿನ ಹಿನ್ನೆಲೆ ಸಂಗೀತವನ್ನು ಅಂಧ ಪ್ರತಿಭೆ ವಿಶ್ವನಾಥ್ ಎಂಬುವವರು ನುಡಿಸಿದ್ದಾರೆ. ಅವರ ಪಕ್ಕದಲ್ಲಿಯೇ ಕುಳಿತುಕೊಂಡು ಆ ಸಂಗೀತವನ್ನು ನಿಖಿಲ್​ ಆಸ್ವಾದಿಸಿದ್ದಾರೆ. ಅಷ್ಟೇ ಅಲ್ಲ ವಿಶ್ವನಾಥ್ ಅವರ ಈ ಪ್ರತಿಭೆ ಬಗ್ಗೆಯೂ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಕಣ್ಣಿಲ್ಲದಿದ್ದರೂ ಅಪೂರ್ವವಾದ ಪ್ರತಿಭೆಯಾಗಿರುವ ವಿಶ್ವನಾಥ್ ಅವರು ಹಾಸನದ ಈಜಿಪುರದವರಂತೆ. ಇಂದು ಆಕಸ್ಮಿಕವಾಗಿ ಇವರ ಭೇಟಿಯಾಯಿತು. ಇವರು ಇಂಪಾಗಿ ಪಿಯಾನೋ ನುಡಿಸುವುದನ್ನು ಕೇಳಿ ಸಂತೋಷವಾಯಿತು. ದೈಹಿಕ ನ್ಯೂನತೆಗಳಿದ್ದರೂ ಸಾಧಿಸುವ ಛಲವಿರುವವರಿಗೆ ಯಾವುದು ಅಡ್ಡಿಯಾಗುವುದಿಲ್ಲ. ಇವರ ಸಾಧನೆ ವಿಕಲಚೇತನರಿಗೆ ಮಾತ್ರ ಅಲ್ಲ ಎಲ್ಲರಿಗೂ ಸ್ಪೂರ್ತಿಯಾಗುವಂತದ್ದು’ ಎಂದಿದ್ದಾರೆ. ಆ ವಾದನದ ವಿಡಿಯೋ ತುಣುಕು ಇಲ್ಲಿದೆ.