ಮುಂಬೈ: ವಿಚ್ಛೇದನ ಪಡೆದುಕೊಂಡ ನಂತರ ನಟಿ ಸಮಂತಾ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ ಎಂದೇ ಹೇಳಬೇಕು. ಆದರೆ, ಅದೇ ವಿಚ್ಛೇದನದ ಬಳಿಕ ಕೆಲ ಜನರು ಮಾತ್ರ ನಟಿ ಸಮಂತಾರನ್ನು ಸಿಕ್ಕಾಪಟ್ಟೆ ದ್ವೇಷಿಸುತ್ತಿದ್ದಾರೆ. ಇನ್ನು, ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಸಾಕಷ್ಟು ನೆಗೆಟಿವ್ ಕಮೆಂಟ್ಗಳು ಬರುತ್ತಿದ್ದು, ಸಖತ್ ಟ್ರೋಲ್ ಕೂಡ ಆಗುತ್ತಿದ್ದಾರೆ. ಆದರೆ, ವಿಚ್ಛೇದನದ ಬಳಿಕ ನಟಿ ಸಮಂತಾ ಅವರು ಡೋಂಟ್ ಕೇರ್ ಆ್ಯಟಿಟ್ಯೂಡ್ ಅಳವಡಿಸಿಕೊಂಡಂತೆ ಕಾಣುತ್ತಿದೆ. ಟ್ರೋಲಿಗರ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಬಹಳಷ್ಟು ಬಾರಿ ಸಾಬೀತಾಗಿದೆ. ದೇಶ-ವಿದೇಶಗಳಲ್ಲಿ ಟ್ರಿಪ್ ಹೋಗುತ್ತಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇನ್ನು, ಇಂದು ಸಮಂತಾ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ, ಮುಂಬೈನಲ್ಲಿ ಸಮಂತಾ ಕಾಣಿಸಿಕೊಂಡರೂ, ಎಲ್ಲರ ಗಮನ ಸೆಳೆದಿರುವುದು ಮಾತ್ರ ಅವರ ಶರ್ಟ್. ನಟಿ ಸಮಂತಾ ಅವರ ಬಗ್ಗೆ ಅನೇಕ ಟ್ರೋಲ್ಗಳು ಹರಿದಾಡಿವೆ. ಆದರೆ, ಸಮಂತಾ ಅವರು ಮಾತ್ರ ಯಾವ ಒಂದು ಟ್ರೋಲ್, ನೆಗೆಟಿವ್ ಕಾಮೆಂಟ್ಗಳಿಗೆ ಯಾವತ್ತು ಉತ್ತರ ನೀಡಿಲ್ಲ. ಹೀಗಿದ್ದರೂ, ಅವರನ್ನು ಟೀಕೆ ಮಾಡುವವರಿಗೆ, ಟ್ರೋಲ್ ಮಾಡುವವರಿಗೆ ಸ್ಯಾಮ್ ಸದ್ಯ ಒಂದೇ ಪದದ ಮೂಲಕ ಉತ್ತರ ನೀಡಿದ್ದಾರೆ ಎಂದು ಅನಿಸುತ್ತೆ. ನಟಿ ಸಮಂತಾ ತೊಟ್ಟಿರುವ ಶರ್ಟ್ ಮೇಲೆ 'ಎಫ್' ವರ್ಡ್ ಪ್ರಿಂಟ್ ಇದೆ. ಹಾಗಾಗಿ, ಟ್ರೋಲಿಗರಿಗೆ, ವಿರೋಧಿಗಳಿಗೆ ಸಮಂತಾ ನೇರವಾಗಿಯೇ ಈ ಮೂಲಕ ದಿಟ್ಟ ಉತ್ತರ ನೀಡುತ್ತಿದ್ದಾರೆ ಎಂಬುದು ಅವರ ಕಟ್ಟಾಭಿಮಾನಿಗಳ ಅಭಿಪ್ರಾಯವಾಗಿದೆ. ಹಾಗಾಗಿ, ಈಗ ನಟಿಯ ಶರ್ಟ್ನ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.