ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವರ್ಕೌಟ್ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡು ಒಂದು ಹೊಸ ಚಾಲೆಂಜ್ ಅನ್ನು ಆರಂಭಿಸಿದ್ದಾರೆ. ಹೌದು, ತಮ್ಮ ವಿಡಿಯೋವನ್ನು ಹಂಚಿಕೊಳ್ಳುತ್ತಾ ನಟಿ, 'ಯಾವುದೇ ಸಲಕರಣೆಗಳು ಇಲ್ಲದೇ ಮಾಡುವ ಈ 'ಲೆವೆಲ್-ಅಪ್' ಸವಾಲನ್ನು ಸ್ವೀಕರಿಸುವ ಮೂಲಕ ನಿಮ್ಮ 2022 ಅನ್ನು ಕಿಕ್‌ಸ್ಟಾರ್ಟ್ ಮಾಡಿ. ನನ್ನ ಜಿಮ್ ಟ್ರೈನರ್ @junaid.shaikh88 ನನಗೆ ಈ ಸವಾಲು ನೀಡಿದ್ದಾರೆ. ಈಗ ನಾನು ನಿಮಗೆಲ್ಲರಿಗೂ ಈ ಸವಾಲು ಹಾಕುತ್ತೇನೆ. #levelupchallenge', ಎಂದು ಬರೆದುಕೊಂಡಿದ್ದಾರೆ.
ನಟಿಯ ಈ ವಿಡಿಯೋ ಕಂಡ ಹಲವಾರು ಅಭಿಮಾನಿಗಳು ಈ ಸವಾಲನ್ನು ಸ್ವೀಕರಿಸಿದರು. ಜೊತೆಗೆ, ಅವರು ನಟಿಯ ಈ ಚಾಲೆಂಜ್ ಅನ್ನು ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. #LevelUpChallenge ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿಕೊಂಡು ಸಮಂತಾ ಅವರನ್ನು ಟ್ಯಾಗ್ ಮಾಡಿ ಅವರ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಮೂಲಕ ನಟಿ ಸಮಂತಾ ಅವರು ವರ್ಕೌಟ್ ಮಾಡಲು ತಮ್ಮ ಅಭಿಮಾನಿಗಳನ್ನು ಪ್ರೇರೇಪಿಸಿದ್ದಾರೆ. ನಟಿಯ ಈ #levelupchallenge ವಿಡಿಯೋ ಕೇವಲ ಕೆಲವು ಗಂಟೆಗಳಲ್ಲಿ ಬರೋಬ್ಬರಿ 14 ಲಕ್ಷ ಅಂದರೆ 1 ಮಿಲಿಯನ್ಗೂ ಹೆಚ್ಚು ಲೈಕ್ಸ್ಗಳು ಪಡೆದಿದ್ದು, 5,000ಕ್ಕೂ ಹೆಚ್ಚು ಕಾಮೆಂಟ್ಗಳನ್ನು ಗಿಟ್ಟಿಸಿಕೊಂಡಿದೆ.