ಸಿನಿವಾಣಿ

ಸಲ್ಮಾನ್ ಖಾನ್​ ಕಂಠದಲ್ಲಿ ‘ಪ್ಯಾರ್​ ಕರೊನಾ’ ಗೀತೆ; ಜಾಗೃತಿ ಕಾರ್ಯಕ್ಕೆ ಕೈ ಹಾಕಿದ ಬಾಲಿವುಡ್​ ಸ್ಟಾರ್​; ಕಿರು ಟೀಸರ್​ ಬಿಡುಗಡೆಯಾಗಿದೆ ನೋಡಿ..

ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್ ಮುಂಬೈ ನಗರದಿಂದ ಹೊರಗಿರುವ ಫಾರ್ಮ್​ ಹೌಸ್​ನಲ್ಲಿ ಸೋಹೆಲ್​ ಖಾನ್ ಪುತ್ರನೊಂದಿಗೆ ಕಾಲಕಳೆಯುತ್ತಿದ್ದಾರೆ. ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಚಟುವಟಿಕೆ ಹಮ್ಮಿಕೊಂಡು ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ. ಹೀಗಿರುವಾಗಲೇ ಮೊನ್ನೆ ಮೊನ್ನೆಯಷ್ಟೇ ಸಲ್ಮಾನ್,​ ಸ್ವಂತ ಯೂಟ್ಯೂಬ್​ ಚಾನೆಲ್​ ತೆರೆಯಲಿದ್ದಾರೆ ಎಂಬ ಸುದ್ದಿಯನ್ನು ಇದೇ ವಿಜಯವಾಣಿ ವೆಬ್​ಸೈಟ್​ನಲ್ಲಿ ಓದಿದ್ದೀರಿ. ಈಗ ಆ ಯೂಟ್ಯೂಬ್​ ಚಾನೆಲ್​ನಲ್ಲಿ ಹಾಡೊಂದನ್ನು ಬಿಡುಗಡೆ ಮಾಡಲು ಸಲ್ಮಾನ್​ ಖಾನ್​ ಪ್ಲ್ಯಾನ್​ ಮಾಡಿದ್ದಾರೆ. ಅದರಲ್ಲಿ ಮೊದಲನೆಯದಾಗಿ ‘ಪ್ಯಾರ್​ ಕರೊನಾ..‘ ಹೆಸರಿನ ಹಾಡು ಸೋಮವಾರ ರಿಲೀಸ್​ ಆಗಲಿದೆ.
ವಿಶೇಷ ಏನೆಂದರೆ, ‘ಪ್ಯಾರ್ ಕರೊನಾ..’ ಹಾಡಿಗೆ ಸಾಹಿತ್ಯ ಬರೆದು ಧ್ವನಿಯನ್ನೂ ನೀಡಿದ್ದಾರೆ ಸಲ್ಮಾನ್​ ಖಾನ್. ಈ ಹಾಡಿನಲ್ಲಿ ಕರೊನಾ ಕುರಿತು ಜಾಗೃತಿ ಮತ್ತು ಕರೊನಾ ವಾರಿಯರ್​ ಬಗ್ಗೆಯೂ ಸಾಹಿತ್ಯವನ್ನು ಅಳವಡಿಸಿದ್ದಾರೆ. ಈಗಾಗಲೇ ಸಣ್ಣ ಟೀಸರ್​ ಮೂಲಕ ಬ್ಲ್ಯಾಕ್​ ಆ್ಯಂಡ್​ ವೈಟ್​ ಅವತಾರದಲ್ಲಿ ನೆಟ್ಟಿಗರ ಮುಂದೆ ಬಂದಿರುವ ಸಲ್ಮಾನ್​, ಹಾಡಿನ ಬಗ್ಗೆ ಕಿರಿದಾಗಿ ಮಾಹಿತಿ ನೀಡಿದ್ದಾರೆ. ಸಾಜಿದ್​ ವಜಿದ್​ ಈ ಹಾಡಿಗೆ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್​)