ಸಿನಿವಾಣಿ

'ಗಾಡ್​ ಫಾದರ್​'ಗೆ ನೋ ಎಂದ ಸಲ್ಮಾನ್​ ಖಾನ್​!

ಚಿರಂಜೀವಿ ಅಭಿನಯದ ‘ಗಾಡ್​ಫಾದರ್’ ಎಂಬ ತೆಲುಗು ಚಿತ್ರದಲ್ಲಿ ಸಲ್ಮಾನ್ ಖಾನ್, ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ಅವರಿಗೆ 20 ಕೋಟಿ ರೂ. ಸಂಭಾವನೆಯನ್ನು ಕೊಡುವುದಕ್ಕೆ ಚಿತ್ರತಂಡ ಸಿದ್ಧವಿತ್ತಂತೆ. ಆದರೆ, ಸಲ್ಮಾನ್ ಮಾತ್ರ ಇದಕ್ಕೆ ನೋ ಎಂದಿದ್ದು, ಸಂಭಾವನೆ ಕೊಡುವುದಕ್ಕೆ ಮುಂದಾದರೆ ಚಿತ್ರತಂಡದಿಂದ ಹೊರನಡೆಯುವುದಾಗಿ ಧಮಕಿ ಹಾಕಿದ್ದಾರಂತೆ.

‘ಗಾಡ್​ಫಾದರ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವುದಕ್ಕೆ ಸಲ್ಮಾನ್ ಅವರನ್ನು ಕೇಳಲಾಗಿತ್ತು. ಚಿರಂಜೀವಿ ಮೇಲಿನ ಪ್ರೀತಿಯಿಂದ ಸಲ್ಮಾನ್ ಸಹ ಒಪ್ಪಿದ್ದರು. ಈಗಾಗಲೇ ಏ. 16ರಿಂದ ಮುಂಬೈನಲ್ಲಿ ಒಂದು ಹಂತದ ಚಿತ್ರೀಕರಣ ಸಹ ನಡೆದಿದೆ. ಚಿತ್ರದಲ್ಲಿ ನಟಿಸಿದ್ದಿಕ್ಕೆ ಸಲ್ಮಾನ್​ಗೆ ಸಂಭಾವನೆ ಕೊಡಲು ಚಿತ್ರತಂಡದವರು ಹೋದರೆ, ಸಲ್ಮಾನ್ ಖಾನ್ ನೋ ಎಂದರಂತೆ. ಸಂಭಾವನೆ ಕೊಡಲು ಹಠ ಮಾಡಿದರೆ, ಹೊರಟು ಹೋಗುವುದಾಗಿ ಹೇಳಿದರಂತೆ. ಒಂದು ಪಕ್ಷ ತಮ್ಮ ಚಿತ್ರದಲ್ಲಿ ನಟಿಸುವಂತೆ ಚಿರಂಜೀವಿ ಅವರಿಗೆ ಕೇಳಿದರೆ, ಅವರು ದುಡ್ಡು ಅಪೇಕ್ಷಿಸುತ್ತಿದ್ದರಾ? ಎಂದು ಕೇಳಿ ಬಾಯಿ ಮುಚ್ಚಿಸಿದ್ದಾರಂತೆ.

ಅಲ್ಲಿಗೆ, ‘ಗಾಡ್​ಫಾದರ್’ ಚಿತ್ರದಲ್ಲಿ ಸಲ್ಮಾನ್ ಯಾವುದೇ ಸಂಭಾವನೆ ಇಲ್ಲದೆ ನಟಿಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಮುಂದೊಂದು ದಿನ ಸಲ್ಮಾನ್ ಚಿತ್ರದಲ್ಲೂ ಚಿರಂಜೀವಿ ಸಹ ಉಚಿತವಾಗಿ ನಟಿಸಿದರೆ ಆಶ್ಚರ್ಯವಿಲ್ಲ.