ಈ ಲಾಕ್ಡೌನ್ ಸಮಯದಲ್ಲಿ ಸಲ್ಮಾನ್ ಖಾನ್ ಇನ್ನೂ ಏನೇನು ಮಾಡ್ತಾರೋ ಹೇಳೋದು ಕಷ್ಟ. ಪನ್ವೇಲ್ನ ತಮ್ಮ ಫಾಮ್ರ್ ಹೌಸ್ನಲ್ಲಿ ಕಳೆದ ಎರಡು ತಿಂಗಳುಗಳಿಂದ ಬೀಡು ಬಿಟ್ಟಿರುವ ಸಲ್ಮಾನ್, ಅಲ್ಲೇ ಒಂದು ವಿಡಿಯೋ ಹಾಡನ್ನು ನಿರ್ದೇಶನ ಮಾಡಿದ್ದರು. ಆ ಹಾಡಿಗೆ ಅವರೇ ಧ್ವನಿಯಾಗಿದ್ದರು.
ಈ ಮಧ್ಯೆ, ಅವರು ಹೊಸ ಬಿಜಿನೆಸ್ ಶುರು ಮಾಡಿದ್ದಾರೆ. ಸದ್ಯಕ್ಕೆ ಸ್ಯಾನಿಟೈಸರ್ಗಳಿಗೆ ಜಗತ್ತಿನಾದ್ಯಂತ ಸಿಕ್ಕಾಪಟ್ಟೆ ಬೇಡಿಕೆ ಇರುವುದರಿಂದ ಫ್ರೆಶ್ ಎಂಬ ಬ್ರಾಂಡ್ನಲ್ಲಿ ಸ್ಯಾನಿಟೈಸರ್ ಬಿಡುಗಡೆ ಮಾಡಿದ್ದಾರೆ. ಹಾಗಂತ ಇದರಲ್ಲಿ ಸ್ಯಾನಿಟೈಸರ್ ಮಾತ್ರ ಸಿಗುತ್ತದೆ ಎಂದು ಭಾವಿಸಬೇಕಿಲ್ಲ. ಇದು ಬರೀ ಮೊದಲ ಹಂತ. ಮುಂದಿನ ಹಂತದಲ್ಲಿ ಡಿಯೋಡ್ರೆಂಟ್, ಪರ್ಫ್ಯೂಮ್ ಮತ್ತು ಬಾಡಿವೈಪ್ಗಳನ್ನು ಸಹ ಬಿಡುಗಡೆ ಮಾಡಲಾಗುತ್ತದಂತೆ. ತಮ್ಮ ಹೊಸ ಬ್ರಾಂಡ್ ಬಗ್ಗೆ ತಿಳಿಸುವುದಕ್ಕೆಂದೇ, ಸಲ್ಮಾನ್ ಒಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಸ್ಯಾನಿಟೈಸರ್ನ ಮಹತ್ವವನ್ನು ತಿಳಿಸಿದ್ದಾರೆ. -ಏಜೆನ್ಸೀಸ್