ಸಿನಿವಾಣಿ

ಸಲ್ಮಾನ್ ‘ರಾಧೆ’ ಸಿನಿಮಾದ ಗಳಿಕೆಯ ಒಂದಷ್ಟು ಭಾಗ ಈ ಕೆಲಸಕ್ಕೆ!

ಮುಂಬೈ: ಸಲ್ಮಾನ್ ಖಾನ್ ಅಭಿನಯದ ‘ರಾಧೆ; ಯುವರ್ ಮೋಸ್ಟ್ ವಾಂಟೆಡ್ ಬಾಯ್’ ಮೇ 11ಕ್ಕೆ ಜೀ 5 ಓಟಿಟಿಯಲ್ಲಿ ಪ್ರದರ್ಶನವಾಗಲಿದೆ. ಅಷ್ಟೇ ಅಲ್ಲ ವಿದೇಶಗಳ ಚಿತ್ರಮಂದಿರಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ನೋಡಲು ಸಾಕಷ್ಟು ಅಭಿಮಾನಿಗಳು ಈಗಾಗಲೇ ಕಾತರದಿಂದಲೂ ಕಾದಿದ್ದಾರೆ. ಇದೀಗ ಈ ಸಿನಿಮಾದಿಂದ ಬರುವ ಲಾಭಾಂಶದಲ್ಲಿ ಒಂದಷ್ಟು ಪಾಲನ್ನು ಒಂದೊಳ್ಳೆ ಕಾರ್ಯಕ್ಕೆ ನೀಡಲು ಚಿತ್ರದ ನಿರ್ಮಾಪಕರು ಮುಂದೆ ಬಂದಿದ್ದಾರೆ.

ಹೌದು, ರಾಧೆ ಚಿತ್ರಕ್ಕೆ ಸಲ್ಮಾನ್ ಖಾನ್ ಫಿಲಂಸ್ ಮತ್ತು ಜೀ ಸಿನಿಮಾಸ್ ಬಂಡವಾಳ ಹೂಡಿವೆ. ಇದೀಗ ಈ ಎರಡೂ ಸಂಸ್ಥೆಗಳು ಕೋವಿಡ್ ಹಿನ್ನೆಲೆಯಲ್ಲಿ ನೆರವಿಗೆ ಮುಂದಾಗಿದ್ದು, ಚಿತ್ರದ ಲಾಭಾಂಶದ ಒಂದಷ್ಟು ಪಾಲನ್ನು ಆಕ್ಸಿಜನ್ ಕಾನ್ಸಂಟ್ರೆಟರ್ ಮತ್ತು ವೆಂಟಿಲೇಟರ್​ ಖರೀದಿಗೆ ನೀಡಲು ನಿರ್ಧರಿಸಿದೆ. ಗಿವ್ ಇಂಡಿಯಾ ನಿಧಿಸಂಗ್ರಹಣೆ ಸಂಸ್ಥೆ ಜತೆಗೆ ಕೈ ಜೋಡಿಸಿದ್ದು, ಅದಕ್ಕೆ ಇಂತಿಷ್ಟು ಎಂದು ದೇಣಿಗೆ ರೂಪದಲ್ಲಿ ಹಣವನ್ನು ನೀಡಲಿದೆ.

ಪ್ರಭುದೇವ ನಿರ್ದೇಶನದ ರಾಧೆ ಚಿತ್ರ ಈಗಾಗಲೇ ಸಾಕಷ್ಟು ಹೈಪ್ ಸೃಷ್ಟಿ ಮಾಡಿರುವ ಸಿನಿಮಾ. ಮಾಸ್​ ಅವತಾರದಲ್ಲಿ ಸಲ್ಮಾನ್​ ಈಗಾಗಲೇ ಟ್ರೇಲರ್​ ಮೂಲಕ ಧೂಳೆಬ್ಬಿಸಿದ್ದಾರೆ. ಚಿತ್ರದ ಬಿಡುಗಡೆಗೆ ಕೋಟ್ಯಂತರ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಜೀ ಓಟಿಟಿ ವೇದಿಕೆಯಲ್ಲಿ ಚಿತ್ರ ವೀಕ್ಷಣೆಗೆ ಇಂತಿಷ್ಟು ದರ ಸಹ ನಿಗದಿಯಾಗಿದ್ದು, ಇನ್ನೇನು 5ದಿನದಲ್ಲಿ ರಾಧೆ ದರ್ಶನವಾಗಲಿದೆ. -ಏಜೆನ್ಸೀಸ್