ಬೆಂಗಳೂರು: ಹೊಂಬಾಳೆ ಫಿಲ್ಮ್ಸ್(Hombale Films) ಬ್ಯಾನರ್ನಲ್ಲಿ ತಯಾರಾಗುತ್ತಿರುವ ಡಾರ್ಲಿಂಗ್ ಪ್ರಭಾಸ್(Prabhas) ನಟನೆಯ ಸಲಾರ್(Salaar) ಚಿತ್ರದ ಟೀಸರ್ ಬಗ್ಗೆ ಇದೀಗ ಹೊಸ ಅಪ್ಡೇಟ್ ಲಭಿಸಿದೆ.
ಕೆಜಿಎಫ್(KGF) ಚಿತ್ರದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್(Prashanth Neel) ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರದಲ್ಲಿ ಟಾಲಿವುಡ್ ನಟ ಪ್ರಭಾಸ್ ಅಭಿನಯಿಸಿದ್ದು, ಸಿನಿಮಾ ಕಂಪ್ಲೀಟ್ ಮಾಸ್, ಆಕ್ಷನ್- ಥ್ರಿಲ್ಲರ್ ಜಾನರ್ನಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಲು ಸಜ್ಜಾಗಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಮ್ಸ್ ತಂಡ ಸಲಾರ್ ಚಿತ್ರದ ಟೀಸರ್ ಅನ್ನು ಯಾವಾಗ ಬಿಡುಗಡೆಗೊಳಿಸಲಿದೆ ಎಂಬ ಪ್ರಶ್ನೆಗಳನ್ನು ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ(Social Media) ಕೇಳುತ್ತಿದ್ದರು. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದ್ದು, ಚಿತ್ರದ ಟೀಸರ್ನ ಅಂತಿಮ ಕೆಲಸಗಳು ಮಾತ್ರ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.
ಸದ್ಯ ಟೀಸರ್ಗೆ ಸೌಂಡ್ ಮಿಕ್ಸಿಂಗ್ ನಡೆಯುತ್ತಿದ್ದು, ಒಂದು ಅಥವಾ ಎರಡು ದಿನಗಳಲ್ಲಿ ಅಂತಿಮ ಕಾಪಿ ಸಿದ್ಧವಾಗಲಿದೆ. ತದನಂತರ ಟೀಸರ್ ಬಿಡುಗಡೆಗೊಳಿಸುವ ದಿನಾಂಕವನ್ನು ಶೀಘ್ರವೇ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಸಿನಿ ವರದಿಗಳು ತಿಳಿಸಿದೆ. 2023ರ ಸೆಪ್ಟೆಂಬರ್ 28 ರಂದು ಸಲಾರ್ ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ,(ಏಜೆನ್ಸೀಸ್).