ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಬಲಾಢ್ಯರು ಹೇಗೆ ಹೊಸಬರು ಮತ್ತು ಹೊರಗಿನವರನ್ನು ತುಳಿಯುತ್ತಾರೆ, ಅವರನ್ನು ಹೇಗೆಲ್ಲಾ ಸರ್ವನಾಶ ಮಾಡುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಾವಿನಿಂದ ಮೈಲೇಜ್ ತಗೋಬೇಡಿ …
ಈಗ ಸಾಹಿಲ್ ಖಾನ್ ಸಹ ಬಾಲಿವುಡ್ನಲ್ಲಿ ನೆಪೋಟಿಸಂ ಹೇಗೆ ಕೆಲಸ ಮಾಡುತ್ತದೆ, ದೊಡ್ಡವರೆನಿಸಿಕೊಂಡವರು ಚಿಕ್ಕವರನ್ನು ಹೇಗೆ ತುಳಿಯುತ್ತಾರೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಎಕ್ಸ್ಕ್ಯೂಸ್ ಮೀ ಮತ್ತು ಸ್ಟೈಲ್ ಚಿತ್ರಗಳ ಮೂಲಕ ಹೆಸರಾದವರು ಸಾಹಿಲ್. ಆ ಕಾಲಕ್ಕೆ ಸಿಕ್ಸ್ ಪ್ಯಾಕ್ ಹೀರೋ ಎಂದು ಜನಪ್ರಿಯರಾಗಿದ್ದರು ಅವರು. ಮೊದಲೆರೆಡು ಚಿತ್ರಗಳು ಹಿಟ್ ಆದರೂ, ಕ್ರಮೇಣ ಅವರಿಗೆ ಅವಕಾಶಗಳು ಕಡಿಮೆಯಾದವು. ಆನಂತರ ಅವರು ಎಲ್ಲಿ ಮಾಯವಾದರೋ ಗೊತ್ತಿಲ್ಲ. ಈಗ ಬಹಳ ವರ್ಷಗಳ ನಂತರ ಸಾಹಿಲ್ ಇನ್ಸ್ಟಾಗ್ರಾಂ ಮೂಲಕ ತಮಗಾದ ಅನುಭವನ್ನು ಹೇಳಿಕೊಂಡಿದ್ದಾರೆ.
ಬಹಳ ಕಡಿಮೆ ಹೀರೋಗಳಿಗೆ, ತಮ್ಮ ಮೊದಲ ಚಿತ್ರದ ನಂತರವೇ ಜನಪ್ರಿಯ ಮ್ಯಾಗಜೀನ್ಗಳ ಕವರ್ ಪೇಜ್ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುತ್ತದೆ. ಅಂಥವರಲ್ಲಿ ನಾನೂ ಒಬ್ಬ. ಒಂದು ದೊಡ್ಡ ಮ್ಯಾಗಜೀನ್ನ ಕವರ್ ಪೇಜ್ನಲ್ಲಿ ನನ್ನ ಫೋಟೋ ಬಂದಿತ್ತು, ಇನ್ನಿಬ್ಬರು ಜನಪ್ರಿಯ ಸ್ಟಾರ್ಗಳ ಜತೆಗೆ. ನಾನು ಆ ಕಾಲಕ್ಕೆ ಹೊಸಬ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಅಭಿಮಾನಿ. ನನಗೆ ಅದು ಬಹಳ ಖುಷಿ ಕೊಟ್ಟಿತ್ತಾದರೂ, ಅದು ಒಬ್ಬ ಸ್ಟಾರ್ಗೆ ಸರಿ ಬರಲಿಲ್ಲ. ಅವರು ತಮ್ಮ ಚಿತ್ರಗಳಲ್ಲಿನ ಸೈಡ್ ರೋಲ್ಗೆ ನನ್ನ ಕರೆದರು. ಟಿವಿ ಶೋಗಳಿಗೂ ಆಹ್ವಾನಿಸಿದರು. ಕ್ರಮೇಣ, ಅವಕಾಶಗಳನ್ನು ಕಿತ್ತುಕೊಂಡರು. ಅವರು ಯಾರಿರಬಹುದು ನೀವೇ ಯೋಚಿಸಿ. ಅವರ ಬಗ್ಗೆ ನಾನು ಕೇರ್ ಮಾಡುವುದಿಲ್ಲ. ಏಕೆಂದರೆ, ಸುಶಾಂತ್ ಸಿಂಗ್ ಅವರೆಲ್ಲರ ನಿಜವಾದ ಮುಖ ಬಯಲು ಮಾಡಿದ್ದಾರೆ. ಈ ಜನ, ಹಲವು ಹೊಸ ಪ್ರತಿಭೆಗಳನ್ನು ಹೊಸಕಿ ಹಾಕಿದರು. ಕಳೆದ 20 ವರ್ಷಗಳಲ್ಲಿ ಜಾನ್ ಅಬ್ರಹಾಂ ಬಿಟ್ಟರೆ, ಯಾರೂ ಸಹ ಸ್ಟಾರ್ ಆಗುವುದಕ್ಕೆ ಸಾಧ್ಯವಾಗಲೇ ಇಲ್ಲ. ಏಕೆಂದರೆ, ಅವರು ಯಾರನ್ನೂ ಸ್ಟಾರ್ ಆಗುವುದಕ್ಕೆ ಬಿಡಲೇ ಇಲ್ಲ. ಇಲ್ಲಿ ಸ್ಟಾರ್ ಮಕ್ಕಳಿಗೆ ಮಾತ್ರ ಬೆಲೆ ಎಂದು ಸಾಹಿಲ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಚಿತ್ರರಂಗದ ಡರ್ಟಿ ಪಾಲಿಟಿಕ್ಸ್ ಬಿಚ್ಚಿಟ್ಟ ರವೀನಾ …
ಇದರ ಜತೆಗೆ, ಆ ಮ್ಯಾಗಜೀನ್ನ ಕವರ್ಪಜೇಜ್ ಸಹ ಹಾಕಿದ್ದಾರೆ. ಅದರಲ್ಲಿ, ದಿ ನ್ಯೂ ಖಾನ್ ಇನ್ ಟೌನ್ ಎಂಬ ಶೀರ್ಷಿಕೆ ಇರುವ ಲೇಖನ ಇದೆ. ಈ ಲೇಖನ ಬಂದ ನಂತರ, ಸಾಹಿಲ್ ಖಾನ್ಗೆ ಬಾಲಿವುಡ್ನಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ. ಇಷ್ಟಕ್ಕೂ ಅವರ ಕೆಲಸ ಕಿತ್ತುಕೊಂಡ ಸ್ಟಾರ್ ಯಾರು? ನೀವೇ ಯೋಚಿಸಿ ...