ಇನ್ನು ಕೆಲವರು ತಮ್ಮ ನೆಚ್ಚಿನ ನಟನಿಗಾಗಿ ಚಿತ್ರ ಬಿಡಿಸುವ ಮೂಲಕ, ಚಾಕ್ಪೀಸ್ನಲ್ಲಿ ಕೆತ್ತಿ ತಮ್ಮೊಳಗಿನ ಅಭಿಮಾನವನ್ನು ಹೊರಹಾಕುತ್ತಿರುತ್ತಾರೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಆ್ಯಂಟಿಕ್ ಪೀಸ್ವೊಂದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಟ್ವಿಟರ್ನಲ್ಲಿನ ಯಶ್ ಅವರ ಅಭಿಮಾನಿ ಬಳಗ ಬಾದಾಮಿಯಲ್ಲಿ ಅರಳಿದ ಯಶ್ ಅವರ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಚಿಕ್ಕದಾದ ಬಾದಾಮಿಯಲ್ಲಿ ಕೆಜಿಎಫ್ ಚಿತ್ರದ ರಾಕಿಬಾಯ್ ಅವತಾರವನ್ನು ಬಿಡಿಸಿದ್ದು, ನೆಟ್ಟಿಗರು ಕಲಾವಿದನ ಕಲೆಗೆ ಸಲಾಂ ಎಂದಿದ್ದಾರೆ.
ಇನ್ನು ಯಶ್ ವಿಚಾರಕ್ಕೆ ಬರುವುದಾದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ‘ಕೆಜಿಎಫ್; ಚಾಪ್ಟರ್ 2’ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಬಾಕಿ ಉಳಿದ ಶೂಟಿಂಗ್ಗೆ ಶೀಘ್ರ ಚಾಲನೆ ನೀಡಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.