ಸಿನಿವಾಣಿ

ನಾಯಕ ಮಾತ್ರ ನನ್ನನ್ನು ಟಚ್​ ಮಾಡಲಿ! ನಟಿ ಹನ್ಸಿಕಾ ಬಗ್ಗೆ ತಮಿಳು ಹಾಸ್ಯನಟನ ವಿವಾದಾತ್ಮಕ ಹೇಳಿಕೆ

ಚೆನ್ನೈ: ಕಾಲಿವುಡ್​ ಹಾಸ್ಯ ನಟ ರೋಬೋ ಶಂಕರ್​ ಸಾರ್ವಜನಿಕವಾಗಿ ನಟಿ ಹನ್ಸಿಕಾ ಮೊಟ್ವಾನಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಪಾರ್ಟ್ನರ್​ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಈ ಹೇಳಿಕೆ ನೀಡಿದ್ದು, ಭಾರೀ ವಿವಾದವನ್ನು ಸೃಷ್ಟಿಸಿದೆ.

ಪಾರ್ಟ್ನರ್​ ಚಿತ್ರದ ಪಾತ್ರಗಳಲ್ಲಿ ಆದಿ ಮತ್ತು ಹನ್ಸಿಕಾ ಮೋಟ್ವಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯೋಗಿ ಬಾಬು, ಮುನಿಷ್ಕಾಂತ್, ಜಾನ್ ವಿಜಯ್ ಮತ್ತು ಇತರರಿದ್ದಾರೆ. ಈ ಸಿನಿಮಾವನ್ನು ಮನೋಜ್​ ದಾಮೋದರನ್​ ನಿರ್ದೇಶಿಸಿದ್ದು, ಈ ತಿಂಗಳಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಪಾರ್ಟ್ನರ್ ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಬೋ ಶಂಕರ್ ಭಾಗವಹಿಸಿದ್ದರು. ಅದೇ ಪತ್ರಿಕಾಗೋಷ್ಠಿಯಲ್ಲಿ ಹನ್ಸಿಕಾ ಅವರು ಕುಳಿತಿದ್ದಾಗ ಅವರ ಮುಂದೆಯೇ ರೋಬೋ ಶಂಕರ್​ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು.

ನಾಯಕ ಮಾತ್ರ ಟಚ್ ಮಾಡಲಿ

ಹನ್ಸಿಕಾ ಮೊಟ್ವಾನಿ ಅವರು ನಿಜವಾಗಿಯೂ ಮೇಣದ ಆಕೃತಿ ಮತ್ತು ಅವರು ಮೈದಾ ಹಿಟ್ಟಿನಂತೆ ಕಾಣಿಸುತ್ತಾರೆ. ಅಲ್ಲದೆ, ಚಿತ್ರದಲ್ಲಿ ನಾನು ಹನ್ಸಿಕಾ ಅವರ ಕಾಲನ್ನು ಸ್ಪರ್ಶಿಸುವ ದೃಶ್ಯವಿದೆ. ಆದರೆ ಹನ್ಸಿಕಾ ಅದಕ್ಕೆ ಒಪ್ಪಿರಲಿಲ್ಲ. ನಿರ್ದೇಶಕರು ಮತ್ತು ನಾನು ಅವರ ಕಾಲಿಗೆ ಬಿದ್ದು ಕನಿಷ್ಠ ಅವರ ಹೆಬ್ಬೆರಳನ್ನು ಮುಟ್ಟಲು ಬೇಡಿಕೊಂಡೆವು, ಆದರೆ, ಅದು ಅಸಾಧ್ಯವೆಂದು ಅವಳು ಹೇಳಿದರು. ಅಲ್ಲದೆ, ನಾಯಕ ಆದಿ ಮಾತ್ರ ತನ್ನನ್ನು ಟಚ್ ಮಾಡಿ ನಟಿಸಬೇಕು ಬೇರೆ ಯಾರೂ ಮಾಡಬಾರದು ಎಂದೂ ಹೇಳಿದರು. ಹನ್ಸಿಕಾ ಅವರ ವರ್ತನೆಯಿಂದ ನಿರ್ದೇಶಕರ ಜೊತೆಗೆ ಸೆಟ್‌ನಲ್ಲಿದ್ದವರೆಲ್ಲರೂ ಆಶ್ಚರ್ಯಚಕಿತರಾದರು ಎಂದು ರೋಬೋ ಶಂಕರ್​ ಹೇಳಿದ್ದು, ಇದೀಗ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)