ಬೆಂಗಳೂರು: ಏಪ್ರಿಲ್ನಲ್ಲಿಯೇ ಬಿಡುಗಡೆ ಆಗಬೇಕಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ, ಕರೊನಾ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲಾಯಿತು. ಆದರೆ, ಯಾವಾಗ ಬಿಡುಗಡೆ ಎಂಬ ಬಗ್ಗೆ ಒಂದೇ ಒಂದು ಸಣ್ಣ ಸುಳಿವನ್ನೂ ತಂಡ ಎಲ್ಲಿಯೂ ಹೇಳಿಕೊಂಡಿಲ್ಲ. ಇದೀಗ ಶೀಘ್ರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಮಿಲನಾ ರೆಡಿ ಫಾರ್ ರಿಜಿಸ್ಟ್ರೇಶನ್
ಕರೊನಾ ಹಿನ್ನೆಲೆಯಲ್ಲಿ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಚಿತ್ರಮಂದಿರಗಳ ಬಾಗಿಲು ಅಕ್ಟೋಬರ್ 15ರಿಂದ ಮತ್ತೆ ತೆರೆಯಲಾಗುತ್ತಿದೆ. ಕರೊನಾ ಹೊತ್ತಲ್ಲಿ ಆಗತಾನೇ ಬಿಡುಗಡೆಯಾಗಿ ಪ್ರದರ್ಶನ ನಿಲ್ಲಿಸಿದ್ದ ಸಿನಿಮಾಗಳು ಮರು ಬಿಡುಗಡೆ ಆಗುತ್ತಿವೆ. ಇದೀಗ ರಾಬರ್ಟ್ ಸಿನಿಮಾ ಸಹ ಶೀಘ್ರದಲ್ಲಿಯೇ ಚಿತ್ರಮಂದಿರಕ್ಕೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಆದರೆ, ಎಲ್ಲಿಯೂ ಬಿಡುಗಡೆ ಯಾವಾಗ ಎಂಬುದನ್ನು ತಂಡ ಹೇಳಿಕೊಂಡಿಲ್ಲ. ಬದಲಿಗೆ, ಚಿತ್ರದ ನಿರ್ದೇಶಕ ತರುಣ್ ಸುಧೀರ್ ಜನ್ಮದಿನದ ಪ್ರಯುಕ್ತ ಪೋಸ್ಟರ್ ಬಿಡುಗಡೆ ಮಾಡಿಕೊಂಡಿರುವ ತಂಡ, ಆದಷ್ಟು ಬೇಗ ಸಿನಿಮಾ ಮಂದಿರಕ್ಕೆ ಚಿತ್ರ ಬರಲಿದೆ ಎಂದು ಹೇಳಿಕೊಂಡಿದೆ. ಸದ್ಯ ಈ ವಿಚಾರ ಅಭಿಮಾನಿ ವಲಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.