ಸಿನಿವಾಣಿ

ಆರ್​ಜಿವಿ ‘ಪ್ರವನ್​ ಕಲ್ಯಾಣ್​’ಗೆ ಟಾಂಗ್​ ಕೊಡಲು ಬಂದ ‘ಪರಂಜೀವಿ’!

ಆ್ಯಪ್​ನಲ್ಲಿ ಬಿಡುಗಡೆಯಾಗಬೇಕಿದ್ದ ಆರ್​ಜಿವಿ ನಿರ್ದೇಶನದ ಪವರ್​ಸ್ಟಾರ್​ ಚಿತ್ರದ ಟ್ರೇಲರ್​, ಬಿಡುಗಡೆಗೂ ಮುನ್ನವೇ ಲೀಕ್​ ಆಗಿದ್ದರ ಹಿನ್ನೆಲೆಯಲ್ಲಿ ಯೂಟ್ಯೂಬ್​ನಲ್ಲಿ ಸ್ವತಃ ಆರ್​ಜಿವಿ ಶೇರ್ ಮಾಡಿಕೊಂಡರು. ಇದೀಗ ಅಚ್ಚರಿ ವಿಚಾರ ಏನೆಂದರೆ ‘ಪರಂಜೀವಿ’ ಶೀರ್ಷಿಕೆಯ ಹೊಸ ಚಿತ್ರದ ಪೋಸ್ಟರ್​ವೊಂದು ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ.

‘ಪರಂಜೀವಿ’ ಚಿತ್ರದಲ್ಲಿ ಆರ್​ಜಿವಿ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ. ಹಾಗಂತ ರಾಮ್​ಗೋಪಾಲ್​ ವರ್ಮಾ ನಟಿಸುತ್ತಿದ್ದಾರೆ ಎಂದಲ್ಲ. ಬದಲಿಗೆ ಹೊಸ ನಿರ್ದೇಶಕರೊಬ್ಬರು ಆರ್​ಜಿವಿಗೆ ಟಾಂಗ್​ ಕೊಡಲೆಂದೇ, ಪರಂಜೀವಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಇದೇ ಜುಲೈ 25ರ ಶನಿವಾರ ಬೆಳಗ್ಗೆ 11 ಗಂಟೆಗೆ ಶ್ರೇಯಸ್​ ಇಟಿ ಯಲ್ಲಿ ಈ ಚಿತ್ರ ಪ್ರಸಾರವಾಗಲಿದೆ.

ಈಗಾಗಲೇ ಬಿಗ್​ಬಾಸ್​ ಸೀಸನ್​ 2ರಲ್ಲಿ ಸ್ಪರ್ಧಿಯಾಗಿದ್ದ ನೂತನ್ ನಾಯ್ಡು ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಆರ್​ಜಿವಿಯ ಇನ್ನೊಂದು ಮುಖವನ್ನು ಬಹಿರಂಗ ಮಾಡಲಿದ್ದಾರಂತೆ. ಸದ್ಯ ಒಂದು ಕಡೆ ಪವನ್​ ಕಲ್ಯಾಣ್​ ಟ್ರೇಲರ್​ ಮತ್ತೊಂದು ಕಡೆ ಪರಂಜೀವಿ ಪೋಸ್ಟರ್​.. ಸದ್ಯ ತೆಲುಗು ನಾಡಲ್ಲಿ ಈ ಎರಡು ವಿಚಾರಗಳು ಸದ್ದು ಮಾಡುತ್ತಿದ್ದು, ಸಿನಿಮಾಸ್ತಕರಲ್ಲಿ ಕುತೂಹಲ ಸೃಷ್ಟಿಸಿವೆ. (ಏಜೆನ್ಸೀಸ್​