ಹೈದರಾಬಾದ್: ಹೆಣ್ಣು ಹೆಂಡತಿಯಾದಾಗ ಮಾತ್ರ ಆಕೆಯ ನಿಜವಾದ ವರ್ತನೆ ತಿಳಿಯಲಿದೆ. ಮದುವೆಯ ಬಳಿಕ ತಮ್ಮ ವಿಶ್ವರೂಪವನ್ನು ತಾಳುತ್ತಾರೆ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಈ ಕುರಿತ ವೆಬ್ ಸಿರೀಸ್ ಮಾಡಲು ಟೀಮ್ವೊಂದನ್ನು ಸಿದ್ಧಪಡಿಸಿಕೊಂಡಿರುವ ಅವರು, ಹೆಂಡತಿಯರು ಅವರಲ್ಲಿನ ವಿಧಗಳು ಎಂಬ ಕಾನ್ಸೆಪ್ಟ್ನೊಂದಿಗೆ ವೆಬ್ ಸಿರೀಸ್ ಮಾಡಲು ಮುಂದಾಗಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದ ವೆಬ್ ಸಿರೀಸ್ ''30 ವೆಡ್ಸ್ 21'' ಫೇಮ್ ಚೈತನ್ಯ, ತಮ್ಮ ಮುಂದಿನ ಪ್ರಾಜೆಕ್ಟ್ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ.
ಎಷ್ಟೋ ಮಂದಿ ಕವಿಗಳು ಸ್ತ್ರೀಯರ ಸ್ವರೂಪವನ್ನು ತಮ್ಮದೇ ಶೈಲಿಯಲ್ಲಿ ವರ್ಣಿಸಿದ್ದಾರೆ. ಆದರೆ ಕಾಲ ಮುಂದುವರಿದಂತೆಲ್ಲಾ ಎಷ್ಟೋ ಬಗೆಯ ಸ್ತ್ರೀಯರು ಉದ್ಭವಿಸುತ್ತಾರೆ ಎಂಬ ವಿಷಯವನ್ನು ಅವರು ಗ್ರಹಿಸಿಲ್ಲ. ಈಗಿನ ಕಾಲದ ಹೆಂಡತಿಯರ ಕುರಿತು ತಿಳಿಸುತ್ತಾ '' ವಿವಿಧ ಬಗೆಯ ಹೆಂಡತಿಯರು'' ಎಂಬ ಶೀರ್ಷಿಕೆಯಡಿ ವೆಬ್ ಸಿರೀಸ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ಒಂದೊಂದು ಎಪಿಸೋಡ್ನಲ್ಲೂ ಒಂದೊಂದು ಬಗೆಯ ಹೆಂಡತಿಯನ್ನು ತೋರಿಸುವುದಾಗಿ ಹೇಳಿದ್ದಾರೆ.