ಹೈದರಾಬಾದ್: ನಟಿ ಹಾಗೂ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ರೇಣು ಅವರು ಯಾವುದೇ ಪೋಸ್ಟ್ ಹಾಕಿದರೂ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಕಾಲೆಳೆಯುವಂತಹ ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ. ಇಷ್ಟುದಿನ ಅವರ ಕಾಮೆಂಟ್ಗಳಿಗೆ ಪ್ರತಿಕ್ರಿಯಿಸದೇ ಸುಮ್ಮನಿರುತ್ತಿದ್ದ ರೇಣು, ಈ ಬಾರಿ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಅಕಿರ ನಂದನ್ ಹುಟ್ಟುಹಬ್ಬ
ನಿನ್ನೆ (ಏ.8) ರೇಣು ಅವರ ಪುತ್ರ ಅಕಿರ ನಂದನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟ ನಾಗಬಾಬು, ಸಾಯಿಧರಮ್ ತೇಜ್, ವರುಣ್ ತೇಜ್ ಸೇರಿದಂತೆ ಪವನ್ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಕೆಲ ಅಭಿಮಾನಿಗಳು ಮಾಡಿರುವ ಕಾಮೆಂಟ್ ರೇಣು ಅವರ ಮನಸ್ಸನ್ನು ಘಾಸಿಗೊಳಸಿವೆ.
ಇದನ್ನೂ ಓದಿ: ಬಂಡೀಪುರ ಹುಲಿ ಯೋಜನೆಗೆ 50 ವರ್ಷ: ವ್ಯಾಘ್ರಗಳ ಸುರಕ್ಷಿತ ನೆಲೆಯ ಬಗ್ಗೆ ತಿಳಿಯಬೇಕಾದ ಮಾಹಿತಿ ಇಲ್ಲಿದೆ…
ಅಭಿಮಾನಿ ಕಾಮೆಂಟ್
ಮೇಡಂ ಇದು ಅತಿಯಾಯಿತು. ಒಂದು ಬಾರಿಯಾದರೂ ಅಕಿರ ನಂದನ್ ಅವರು ನಮಗೆ ತೋರಿಸಿ. ಪವನ್ ಅಣ್ಣ ಅವರ ಮಗನನ್ನು ನೋಡುವ ಆಸೆ ನಮಗೂ ಇದೆ. ಆಗಾಗ ಅಕಿರ ಅವರ ವಿಡಿಯೋವನ್ನು ಪೋಸ್ಟ್ ಮಾಡುತ್ತಿರಿ ಎಂದು ತೆಲುಗಿನಲ್ಲಿ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ.
ರೇಣು ಅಸಮಾಧಾನ
ಈ ಕಾಮೆಂಟ್ಗೆ ಅಸಮಾಧಾನಗೊಂಡಿರುವ ರೇಣು, ಅಕಿರ ನಿನ್ನ ಅಣ್ಣ (ಪವನ್ ಕಲ್ಯಾಣ್)ನ ಮಗನಾ? ಅಕಿರ ನನ್ನ ಪುತ್ರ. ನೀವು ಕೂಡ ಒಬ್ಬ ತಾಯಿಗೆ ಹುಟ್ಟಿದವರಲ್ಲವೇ? ನೀವು ಅವರ ಹಾರ್ಡ್‌ಕೋರ್ ಅಭಿಮಾನಿಗಳು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನೀವು ನಂಬಿಕೆಗಿಂತ ಹೆಚ್ಚು ಸಂವೇದನಾಶೀಲರಾಗಿದ್ದೀರಿ. ನಾನು ಈ ರೀತಿಯ ಕಾಮೆಂಟ್‌ಗಳನ್ನು ನಿರ್ಲಕ್ಷಿಸುತ್ತಿರುತ್ತೇನೆ ಮತ್ತು ಅಳಿಸುತ್ತಿರುತ್ತೇನೆ ಮತ್ತು ನಿರ್ಬಂಧಿಸುತ್ತಿರುತ್ತೇನೆ ಆದರೆ ಇಂದು ನನ್ನ ಮಗನ ಹುಟ್ಟುಹಬ್ಬವಾದ್ದರಿಂದ ಈ ಸೂಕ್ಷ್ಮವಲ್ಲದ ಕಾಮೆಂಟ್ ಅನ್ನು ಓದಿದೆ ಮತ್ತು ನನಗೆ ನೋವುಂಟಾಯಿತು ಎಂದು ರೇಣು ದೇಸಾಯಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)