ತೆಲುಗು ನಟ ರವಿತೇಜ ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಟೈಗರ್ ನಾಗೇಶ್ವರ್ ರಾವ್’. 1970ರ ದಶಕದಲ್ಲಿ ನಡೆಯುವ ಭಾರತದ ಅತಿ ದೊಡ್ಡ ಕಳ್ಳನ ಕುರಿತ ಕಥೆಯಿದು ಎನ್ನಲಾಗಿದೆ. ಹೈದರಾಬಾದ್‌ನ ಸ್ಟುವರ್ಟ್‌ಪುರಂ ಎಂಬ ಹಳ್ಳಿಯ ಕಳ್ಳ, ದೇಶಾದ್ಯಂತ ಹೇಗೆ ಕುಖ್ಯಾತಿ ಪಡೆದ ಎಂಬುದರ ಸುತ್ತ ಚಿತ್ರ ಸಾಗುತ್ತದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ವೈರಲ್ ಆಗಿದೆ.
ಇದನ್ನೂ ಓದಿ : ಭಾರತದ ಮೊದಲ ಚಿತ್ರಮಂದಿರ ಯಾವುದು? ಎಲ್ಲಿ ನಿರ್ಮಿಸಲಾಗಿತ್ತು?
ಚಿತ್ರಕ್ಕಾಗಿ ರವಿತೇಜ ಗೆಟಪ್, ಲುಕ್, ಬಾಡಿ ಲಾಂಗ್ವೇಜ್ ಬದಲಿಸಿಕೊಂಡಿದ್ದಾರೆ. ರವಿತೇಜಗೆ ಇಬ್ಬರು ನಾಯಕಿಯರಿದ್ದು ನೂಪುರ್ ಸನನ್ ಮತ್ತು ಗಾಯತ್ರಿ ಭಾರದ್ವಾಜ್ ನಟಿಸಿದ್ದಾರೆ. ಜತೆಗೆ ಅನುಪಮ್ ಖೇರ್, ರೇಣು ದೇಸಾಯಿ, ಜಿಶು ಸೇನ್ ಗುಪ್ತಾ, ಮುರಳಿ ಶರ್ಮಾ, ನಾಸರ್, ಪ್ರದೀಪ್ ರಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಆರ್. ಮಧಿ ಛಾಯಾಗ್ರಹಣ, ಪ್ರಕಾಶ್ ಕುಮಾರ್ ಸಂಗೀತವಿರಲಿದೆ. ವಿಶೇಷ ಅಂದರೆ ತೆಲುಗು ಜತೆಗೆ ಹಿಂದಿಯಲ್ಲೂ ಖುದ್ದು ರವಿತೇಜ ಡಬಿಂಗ್ ಮಾಡಿದ್ದಾರೆ.
ಇದನ್ನೂ ಓದಿ : ಪಾರ್ಟಿಯಿಂದ ಹೊರಬರುವಾಗ ಎಡವಿದ ಅಮೀರ್, ಎಣ್ಣೆ ಮತ್ತಿನಲ್ಲಿ ತೇಲಾಡುತ್ತಿದ್ದಾರೆಂದು ಕಾಮೆಂಟ್ ಮಾಡಿದ ನೆಟ್ಟಿಗರು..!
ಹಾಗೇ ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಜತೆಗೆ ಈ ಸಿನಿಮಾವನ್ನು ಸೈನ್ ಲಾಂಗ್ವೇಜ್‌ಯಲ್ಲೂ (ಸಂಜ್ಞಾ ಭಾಷೆ) ನೋಡಬಹುದಾಗಿದೆ. ಆ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೈನ್ ಲಾಂಗ್ವೇಜ್‌ನಲ್ಲಿ ರಿಲೀಸ್ ಆಗುತ್ತಿರುವ ಚಿತ್ರ ಎಂಬ ಖ್ಯಾತಿ ‘ಟೈಗರ್ ನಾಗೇಶ್ವರ್ ರಾವ್’ಗೆ ಸಲ್ಲುತ್ತದೆ. ಇದೇ ತಿಂಗಳ 20ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ.
-ಏಜೆನ್ಸೀಸ್