ಸಿನಿವಾಣಿ

ವಿಕ್ರಾಂತ್ ರೋಣನ ಬಗ್ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತಹ ಸುದ್ದಿ ನೀಡಿದ ರವಿಶಂಕರ್​ ಗೌಡ!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್​ ರೋಣ ಚಿತ್ರದ ಬಗ್ಗೆ ನಟ ರವಿಶಂಕರ್​ ಗೌಡ ಆಡಿರುವ ಮಾತುಗಳಿಂದ ಸುದೀಪ್​ ಅಭಿಮಾನಿಗಳಿಗಳಲ್ಲಿ ಸಂತಸದ ಕಟ್ಟೆ ಹೊಡೆದಿದ್ದು, ಚಿತ್ರದ ಬಗೆಗಿನ ಕೂತಹಲ ನೂರ್ಮಡಿ ಆಗಿದೆ.

ಚಿತ್ರದ ಡಬ್ಬಿಂಗ್​ ಪೂರ್ಣಗೊಳಿಸಿರುವ ನಟ ರವಿಶಂಕರ್, ಟ್ವೀಟ್​ ಮೂಲಕ ಚಿತ್ರದ ಬಗ್ಗೆ ಹೇಳಿರುವ ಮಾತುಗಳು ರೋಮಾಂಚನಕಾರಿಯಾಗಿದೆ. ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ. ಕುತೂಹಲದ ಮಹಾಪೂರವಿದೆ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲ. ಹೊಸ ಕಲಾವಿದರದ್ದು ಅಚ್ಚುಕಟ್ಟಾದ ಅಭಿನಯ. ಅಭಿನಂದನೆಗಳು ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಜಾಕ್ ಮಂಜು ಸಾರ್. ಇದಿಷ್ಟು ರವಿಶಂಕರ್​ ಟ್ವೀಟ್​ನ ಸಾರಾಂಶ.

ಇಡೀ ಸಿನಿಮಾ ನೋಡ್ತಾಯಿದ್ದರೆ, ಜೀವ ನಡುಗುತ್ತೆ ಎಂದು ರವಿಶಂಕರ್​ ಹೇಳಿದ್ದು, ವಿಕ್ರಾಂತ್​ ರೋಣ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ವಿಕ್ರಾಂತ್​ ಪ್ಯಾನ್​ ಇಂಡಿಯಾ ಮಾತ್ರವಲ್ಲದೆ, ಪ್ಯಾನ್​ ವರ್ಲ್ಡ್​ ಸಿನಿಮಾ ಆಗಿದೆ. ಸಸ್ಪೆನ್ಸ್​, ಥ್ರಿಲ್ಲರ್​ ಚಿತ್ರವಾಗಿದ್ದು, ಸುದೀಪ್​ ಅವರು ವಿಕ್ರಾಂತ್​ ರೋಣ ಪಾತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮತ್ತೊಮ್ಮೆ ಚಿತ್ರದಲ್ಲಿ ಎಲ್ಲರನ್ನು ರಂಜಿಸಲಿದ್ದಾರೆ.

ಸುದೀಪ್​ ಅವರ 25 ವರ್ಷದ ಸ್ಯಾಂಡಲ್​ವುಡ್​ ಸಿನಿ ಪಯಣ ಹಿನ್ನೆಲೆಯಲ್ಲಿ ಮಾರ್ಚ್​ 31ರಂದು ಜಗತ್ತಿನ ಅತ್ಯಂತ ಎತ್ತರ ಕಟ್ಟಡ ದುಬೈನ ಬುರ್ಜ್​ ಖಲೀಫಾ ಮೇಲೆ ಚಿತ್ರದ ಸಣ್ಣ ಝಲಕ್​ ಬಿಡುಗಡೆ ಮಾಡುವ ಮೂಲಕ ಇಡೀ ವಿಶ್ವವೇ ಚಿತ್ರದ ಕಡೆ ತಿರುಗಿ ನೋಡುವಂತೆ ಚಿತ್ರತಂಡ ಮಾಡಿದೆ.