ಮುಂಬೈ: ಪ್ರಸ್ತುತ ರಶ್ಮಿಕಾ ಮಂದಣ್ಣ ಅವರು ಅನಿಮಲ್ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸದ್ಯಕ್ಕೆ ಈ ವಿಚಾರ ಸೈಡಿಗಿರಲಿ. ಕಳೆದ ನಾಲ್ಕು ವರ್ಷಗಳಿಂದ ನಟ ವಿಜಯ್ ದೇವರಕೊಂಡ ಮತ್ತು ಚರಿಷ್ಮಾ ಸುಂದರಿ ರಶ್ಮಿಕಾ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಪ್ರಕಟವಾಗುತ್ತಲೇ ಇವೆ. ಈ ಬಗ್ಗೆ ಪ್ರಶ್ನಿಸಿದಾಗ ವಿಜಯ್ ಆಗಲಿ, ರಶ್ಮಿಕಾ ಆಗಲಿ ಪ್ರತಿಕ್ರಿಯೆ ನೀಡದೇ ನಿರಾಕರಿಸುತ್ತಾರೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದ್ದರೂ ಸಹ ಇಬ್ಬರಲ್ಲಿ ಯಾರೊಬ್ಬರು ಸಹ ಇದನ್ನು ಈವರೆಗೂ ಖಚಿತಪಡಿಸಿಲ್ಲ. ಇನ್ನು ಕೆಲವು ಸಂದರ್ಭಗಳಲ್ಲಿ ನಾವು ಬೆಸ್ಟ್ ಫ್ರೆಂಡ್ಸ್ ಎಂದಷ್ಟೇ ಹೇಳಿಕೊಂಡಿದ್ದಾರೆ.
ಆದರೆ, ಅಭಿಮಾನಿಗಳು ಮಾತ್ರ ಇಬ್ಬರ ನಡುವೆ ಏನೋ ಇದೆ ಎಂದು ಮಾತನಾಡಿಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ. ಇತ್ತೀಚೆಗಷ್ಟೇ ಅಭಿಮಾನಿಯೊಬ್ಬ ರಶ್ಮಿಕಾ ಅವರ ಫೋಟೋವನ್ನು ಶೇರ್ ಮಾಡಿಕೊಂಡು, ನೀವು ನಮ್ಮ ನ್ಯಾಷನಲ್ ಕ್ರಶ್ ಮೇಡಂ. ಒಂದು ದಿನ ನಾನು ನಿಮ್ಮ ರೀತಿಯ ಪತ್ನಿಯನ್ನು ಪಡೆಯುತ್ತೇನೆ ಎಂಬ ಭರವಸೆ ಇದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ.
ಅಭಿಮಾನಿಯ ಪೋಸ್ಟ್ ರಶ್ಮಿಕಾ ಅವರ ಗಮನಕ್ಕೆ ಬಂದಿದ್ದು, ಪ್ರತಿಕ್ರಿಯೆ ನೀಡಿರುವ ಅವರು, ಅಹ್ಹಹಾ... ನಾನು ಮದುವೆಯಾದಾಗ ನನ್ನ ಪತಿ ನನ್ನನ್ನು ಅದ್ಭುತ ಹೆಂಡತಿ ಅಂದುಜಕೊಳ್ಳುತ್ತಾನೆಂದು ನಾನು ಕೂಡ ಭಾವಿಸುತ್ತೇನೆ ಎಂದಿದ್ದಾರೆ. ಪ್ರತಿನಿತ್ಯ ಸಾವಿರಾರು ಅಭಿಮಾನಿಗಳು ರಶ್ಮಿಕಾರಿಗೆ ಟ್ವೀಟ್ ಮಾಡುತ್ತಾರೆ. ಅದರಲ್ಲಿ ಈ ಒಂದು ಪೋಸ್ಟ್ಗೆ ರಶ್ಮಿಕಾ ಪ್ರತಿಕ್ರಿಯೆ ನೀಡಿರುವುದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ಇನ್ನು ಅನಿಮಲ್ ಸಿನಿಮಾದ ಪ್ರಚಾರದ ವೇಳೆ ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋನಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ರಣಬೀರ್ ಮತ್ತು ರಶ್ಮಿಕಾ ಪಾಲ್ಗೊಂಡು ಸಿನಿಮಾದ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಸಂದೀಪ್ ರೆಡ್ಡಿ ನಿರ್ದೇಶನದ ‘ಅರ್ಜುನ್ ರೆಡ್ಡಿ’ ಮತ್ತು ‘ಅನಿಮಲ್’ ಚಿತ್ರದ ಪೋಸ್ಟರ್ಗಳನ್ನು ತೋರಿಸಿದರು. ಇದು ವಿಜಯ್ ದೇವರಕೊಂಡ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿತು. ಸಂದೀಪ್ ಹಾಗೂ ರಶ್ಮಿಕಾಗೆ ಪ್ರಶ್ನಿಸಿದ ಬಾಲಕೃಷ್ಣ, ‘ಅರ್ಜುನ್ ರೆಡ್ಡಿ’ ಮತ್ತು ‘ಅನಿಮಲ್’ ನಡುವೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದರು. ರಶ್ಮಿಕಾ ಮುಖ ನೋಡಿದ ರಣಬೀರ್, ತಮಾಷೆಯಾಗಿ ಗೇಲಿ ಮಾಡುತ್ತಾ, “ಯಾರು ಉತ್ತಮ ನಟ ಎಂದು ಭಾವಿಸುತ್ತೀರಿ? ರೀಲ್ ಹೀರೋ ಅಥವಾ ರಿಯಲ್ ಹೀರೋ” ಎಂದು ಹೇಳಿದರು. ಈ ಪ್ರಶ್ನೆಗೆ ರಶ್ಮಿಕಾ ಉತ್ತರಿಸಲು ನಿರಾಕರಿಸಿದರು.
ಕೂಡಲೇ ವಿಜಯ್ಗೆ ಕರೆ ಮಾಡಿ ಸಂದೀಪ್ ಎಂದ ಬಾಲಕೃಷ್ಣ, ವಿಜಯ್ ದೇವರಕೊಂಡಗೆ ಕಾಲ್ ಮಾಡಿಸಿದರು. ಆದ್ರೆ, ಆ ಸಮಯಕ್ಕೆ ಅವರು ಕರೆ ಸ್ವೀಕರಿಸಿಲ್ಲ. ಆಗ ರಣಬೀರ್ ತಮಾಷೆಯಾಗಿ, “ಸರ್, ರಶ್ಮಿಕಾ ಕರೆ ಮಾಡಲಿ, ಸಂದೀಪ್ ಕರೆಯನ್ನು ಅವರು ಎತ್ತುವುದಿಲ್ಲ” ಎಂದು ಹೇಳಿದರು. ತಕ್ಷಣ ಮುಗುಳುನಗೆ ಚೆಲ್ಲಿದ ರಶ್ಮಿಕಾಗೆ ರಣಬೀರ್ ಫೋನ್ ಮಾಡುವಂತೆ ಒತ್ತಾಯಿಸಿದರು. ತದನಂತರ ವಿಜಯ್ಗೆ ಕರೆ ಮಾಡಿದ್ದಾರೆ. ಆದ್ರೆ, ಅವರು ಕರೆ ಸ್ವೀಕರಿಸಲಿಲ್ಲ. ಬಳಿಕ ಫೋನ್ ಮಾಡಿದ ದೇವರಕೊಂಡ ಅವರನ್ನು ಮಾತನಾಡಿಸಿದ ರಶ್ಮಿಕಾ, ಕೆಲ ಸಮಯ ಸಂಭಾಷಣೆ ನಡೆಸಿದರು. ಇದೇ ವಿಷಯವನ್ನು ಮುಂದಿಟ್ಟು ಕಾರ್ಯಕ್ರಮದಲ್ಲಿ ರಣಬೀರ್-ಸಂದೀಪ್ ಮತ್ತು ಬಾಲಕೃಷ್ಣ ಅವರು ರಶ್ಮಿಕಾ ಕಾಲೆಳೆದರು. (ಏಜೆನ್ಸೀಸ್)