ರಶ್ಮಿಕಾ ಮಂದಣ್ಣ ಅಂದರೆ ಕಳೆದ ಐದು ವರ್ಷಗಳಿಂದ ಕನ್ನಡ, ತೆಲುಗು, ತಮಿಳು, ಬಾಲಿವುಡ್ ಸಿನಿರಂಗಗಳಲ್ಲಿ ಓಡುವ ಕುದುರೆ ಎಂದರೆ ಡೌಟೆ ಇಲ್ಲ. ಕರ್ನಾಟಕದ ಕ್ರಶ್ ಆಗಿ ಬಂದ ಕಿರಿಕ್ ಹುಡುಗಿ ನ್ಯಾಷನಲ್ ಕ್ರಶ್ ಆಗಿರುವುದು ಇದೇ ಕಾರಣಕ್ಕೆ. ಕಿರಿಕ್ ಪಾರ್ಟಿ ಇಂದ ಆರಂಭವಾದ ಜರ್ನಿ, ಇದೀಗ 'ಪುಷ್ಪ-2' ವರೆಗೆ ಬಂದು ನಿಂತಿದೆ. ಇನ್ನು, ಈ ಚಿತ್ರವಾದ ನಂತರ ಇರೋ ಬರೋ ಪಾತ್ರಗಳನ್ನೆಲ್ಲಾ ರಿಜೆಕ್ಟ್ ಮಾಡಿದ್ದಾರಂತೆ ರಶ್ಮಿಕಾ. ಖಾಲಿ ಕೈಯಲ್ಲಿರುವ ರಶ್ಮಿಕಾ ಅವರು ರಿಜೆಕ್ಟ್ ಮಾಡಿರುವ ಪಾತ್ರಗಳು ಯಾವುವು ಅಂತ ನೋಡೋದಾದರೆ?.
ಮೊದಲನೆದಾಗಿ, ಸಂಜೈಯ್ ಲೀಲಾ ಭಂಸಾಲಿ ಅವರ ನಿರ್ದೇಶನದಲ್ಲಿ ನಟಿಸಲು ನಟಿಯರೆಲ್ಲರೂ ಕಾಯುತ್ತಿರುತ್ತಾರೆ. ಇನ್ನು, ಸಂಜೈಯ್ ಲೀಲಾ ಭಂಸಾಲಿ ಅವರು ನಿರ್ದೇಶನ ಮಾಡಿದ 'ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸ ಬೇಕಿತ್ತಂತೆ. ಆದರೆ, ಡೇಟ್ಸ್ ಹೊಂದಾಣೆಕೆ ಆಗದ ಕಾರಣ, ಆ ಚಿತ್ರವನ್ನು ರಿಜೆಕ್ಟ್ ಮಾಡಿದ್ದರಂತೆ ರಶ್ಮಿಕಾ. ಇನ್ನು, ಟಿ-ಟೌನ್ ನ ಮೆಗಾ ಸ್ಟಾರ್ ಚಿರಂಜೀವಿ ಅವರು ಪುತ್ರ ರಾಮ್ ಚರಣ್ ಅವರ ಜತೆ ನಟಿಸಲು ಬಂದಂತಹ ಒಂದು ಅವಕಾಶವನ್ನು 'ಚಮಕ್' ಸುಂದರಿ ತಿರಸ್ಕರಿಸಿದ್ದಾರಂತೆ.
ಮತ್ತೊಂದೆಡೆ, ಆಕ್ಷನ್ ಆಧಾರಿತ ಚಿತ್ರಗಳಲ್ಲಿ ನಟಿಸುವುದಿಲ್ಲ ಅನ್ನುವ ಕಾರಣಕ್ಕೆ ತಮಿಳಿನಲ್ಲಿ ನಟ ವಿಜಯ್ ಅವರ ಸೂಪರ್ ಹಿಟ್ ಚಿತ್ರ 'ಮಾಸ್ಟರ್'ನಲ್ಲಿ ಸಹ ನಟಿಸಲು ರಶ್ಮಿಕಾ ಒಪ್ಪಲಿಲ್ಲ. ಜತೆಗೆ, ಶಾಹಿದ್ ಕಪೂರ್ ಅವರ ಜೊತೆ ಒಂದು ಬಾಲಿವುಡ್ ಚಿತ್ರ ಮತ್ತು ತಮಿಳಿನಲ್ಲಿ ಮಾಡುತ್ತಿರುವ 'ಕಿರಿಕ್ ಪಾರ್ಟಿ' ಚಿತ್ರದ ರಿಮೇಕ್ಗೆ ಕೂಡಾ ನ್ಯಾಷನಲ್ ಕ್ರಶ್ ನೋ ಎಂದಿದ್ದಾರಂತೆ. ಹೀಗಾಗಿ ಹೊಸ ಹೊಸ ಪಾತ್ರಗಳ ಅನ್ವೇಶನೆಲ್ಲಿದ್ದಾರಾ ನಟಿ ರಶ್ಮಿಕಾ ಎಂದು ಅನ್ಸತ್ತೆ. ಒಟ್ಟಿನಲ್ಲಿ, ಸ್ಟಾರ್ ನಟರ ಚಿತ್ರಗಳನ್ನು ರಿಜೆಕ್ಟ್ ಮಾಡಿ ಖಾಲಿ ಕೈಯಲ್ಲಿರುವ ರಶ್ಮಿಕಾ ಮುಂದೆ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ?, ಅಥವಾ ಕನ್ನಡ ಚಿತ್ರಗಳಿಗೆ ಮರಳಿ ಬರುತ್ತಾರಾ ಎಂಬುದು ಕಾದು ನೋಡಬೇಕಿದೆ.