ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅವರ ನಟನೆಗೆ ಹೆಚ್ಚು ವೈರಲ್ ಆಗೋದು ಅವರ ವೇಷಭೂಷಣಗಳಿಂದಲೇ. ಸದಾ ವಿಚಿತ್ರ ಬಟ್ಟೆಯನ್ನು ತೊಟ್ಟು ಟ್ರೋಲಿಗರ ಬಾಯಿಗೆ ಗುರಿಯಾಗುವ ರಣವೀರ್ ಈ ಬಾರಿಯೂ ಅಂತದ್ದೇ ಕೆಲಸ ಮಾಡಿದ್ದಾರೆ.
ನೀಲಿ ಬಣ್ಣದ ಶೈನಿಂಗ್ ಬಟ್ಟೆ. ಉದ್ದ ಕೂದಲು, ಎದೆ ತುಂಬುವ ಬಂಗಾರದ ಸರ, ಕಣ್ಣಿಗೆ ಕಪ್ಪು ಗ್ಲಾಸ್, ಕೈಯಲ್ಲೊಂದು ಹೆಣ್ಣು ಮಕ್ಕಳ ಹ್ಯಾಂಡ್ ಬ್ಯಾಗ್! ಇದು ರಣವೀರ್ನ ಹೊಸ ವೇಷದ ಒಂದು ಸಣ್ಣ ಝಲಕ್. ಅಂದ ಹಾಗೆ ಅವರಿಗೆ ಈ ಫ್ಯಾಷನ್ ಉಡುಗೆ ನೀಡಿ, ಫೋಟೋಶೂಟ್ ಮಾಡಿಸಿದ್ದು ಪ್ರಸಿದ್ಧ ಗುಸ್ಸಿ ಸಂಸ್ಥೆ. ಅದರ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, 'Alessandro, my beloved' ಎಂದು ಬರೆದುಕೊಂಡಿದ್ದಾರೆ.
ರಣವೀರ್ ಅವರ ಈ ಫೋಟೊಗಳು ಟ್ರೋಲಿಗರಿಗೆ ಆಹಾರವಾಗಿದೆ. ದೀಪಿಕಾ ಯಾವುದೇ ಬಟ್ಟೆ, ಬ್ಯಾಗ್ ತೆಗೆದುಕೊಂಡರೂ ರಣವೀರ್ ಅದನ್ನು ಹೀಗೆ ಟ್ರೈ ಮಾಡ್ತಾರೆ ಎನ್ನುವುದರಿಂದ ಹಿಡಿದು, ಈ ಹುಚ್ಚು ಸರಿಯಾಗುವುದಿಲ್ಲ ಎನ್ನುವವರೆಗೂ ವಿಧ ವಿಧವಾಗಿ ಟ್ರೋಲ್ ಮಾಡಲಾರಂಭಿಸಿದ್ದಾರೆ. (ಏಜೆನ್ಸೀಸ್)