ಸಿನಿವಾಣಿ

ಕಾಂಡೋಮ್ ಗುಣಮಟ್ಟ ಪರೀಕ್ಷೆಗಿಳಿದ ನಟಿ ರಾಕುಲ್ ಪ್ರೀತ್!

ಮುಂಬೈ:  ರಾಕುಲ್ ಪ್ರೀತ್​ ದಕ್ಷಿಣ ಭಾರತದ ಸಿನಿಮಾಗಳ ಜತೆಗೆ ಬಾಲಿವುಡ್​ನಲ್ಲಿಯೂ ಹೆಸರು ಮಾಡಿದ್ದಾರೆ. ಬಿಗ್​ ಸ್ಟಾರ್​ಗಳ ಜತೆಗೆ ನಟಿಸುವ ಅವಕಾಶವನ್ನು ಒಂದಾದ ನಂತರ ಒಂದು ಗಿಟ್ಟಿಸಿಕೊಳ್ಳುತ್ತಿದ್ದಾರೆ. ನಟನೆಯ ವಿಚಾರದಲ್ಲಿಯೂ ಹೊಸ ಹೊಸ ಪಾತ್ರಗಳ ಮೂಲಕವೇ ರಾಕುಲ್ ಎದುರಾಗುತ್ತಿದ್ದಾರೆ. ಇದೀಗ ಇದೇ ರಾಕುಲ್ ಪ್ರಯೋಗಾತ್ಮಕ ಚಿತ್ರವೊಂದರಲ್ಲಿ ಹಿಂದೆಂದೂ ಮಾಡದ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ. ಅದೇ ಕಾಂಡೋಮ್ ಟೆಸ್ಟರ್ ಆಗಿ!

ಹೌದು, ರೊನಿ ಸ್ಕ್ರಿವ್ ವಾಲಾ ನಿರ್ಮಾಣ ಮಾಡುತ್ತಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರದಲ್ಲಿ ಬೃಹತ್ ಕಾಂಡೋಮ್ ಕಂಪನಿಯೊಂದರ ಸೆಕ್ಸ್ ಎಕ್ಸಿಕ್ಯೂಟಿವ್ ಕಾಂಡೋಮ್ ಟೆಸ್ಟರ್ ಆಗಿ ರಾಕುಲ್ ಪಾತ್ರ ಮೂಡಿಬರಲಿದೆ. ಕಾಮಿಡಿ ಶೈಲಿಯ ಈ ಚಿತ್ರದ ಒನ್ ಲೈನ್ ಕಥೆ ಕೇಳುತ್ತಿದ್ದಂತೆ ತಡಮಾಡದೇ ಒಪ್ಪಿಗೆ ಸೂಚಿಸಿದ್ದಾರೆ.
ಭಾರತದಲ್ಲಿ ಕಾಂಡೋಮ್ ಬಳಕೆ ಮತ್ತು ಅದರ ಬಗ್ಗೆ ಮಾತನಾಡಲು ಸಾಕಷ್ಟು ಜನ ಹಿಂದೆ ಸರಿಯುತ್ತಾರೆ. ಸಂಕೋಚದಿಂದಲೇ ಆ ಪದವನ್ನು ಬಳಸುತ್ತಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಬೋಲ್ಡ್ ಅನಿಸುವ ರೀತಿಯ ಕಥೆ ಮಾಡಿ, ಅದರ ಮೂಲಕ ಹ್ಯೂಮರಸ್​ ಕಥೆಯೊಂದಿಗೆ ರೋನಿ ಸ್ಕ್ರಿವ್ ವಾಲಾ ಆಗಮಿಸುತ್ತಿದ್ದಾರೆ.

ಅಂದಹಾಗೆ, ಈ ಚಿತ್ರದಲ್ಲಿ ರಾಕುಲ್ ಪ್ರೀತ್ ಅವರೇ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಸಿನಿಮಾ ಶೂಟಿಂಗ್ ಯಾವಾಗ, ಇನ್ನುಳಿದ ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಬಿಟ್ಟುಕೊಡಲಿದೆ ಚಿತ್ರತಂಡ.