ರಕುಲ್ ಪ್ರೀತ್ ಸಿಂಗ್ ನಿವಾಸದ ಮೇಲೆ ಐಟಿ ರೇಡ್ ಕೇಸ್
ಎಕ್ಸ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡ ಬಾಲಿವುಡ್ ನಟಿ
ನನಗೂ ಐಟಿ ರೇಡ್ಗೂ ಸಂಬಂಧವಿಲ್ಲ, ವಿದೇಶದಲ್ಲಿ ಹೂಡಿಕೆ ಮಾಡಿಲ್ಲ ಎಂದು ಪೋಸ್ಟ್
Rakul Preet Singh breaks silence on IT raid reports, clarifies: ತೆರಿಗೆ ವಂಚನೆ ಆರೋಪ ಕನ್ನಡದ ಗಿಲ್ಲಿ ಸಿನಿಮಾ ಖ್ಯಾತಿಯ ನಟಿ ರಕುಲ್ ಪ್ರೀತ್ ಸಿಂಗ್ ನಿವಾಸಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನದ ಹಿಂದೆ ವೈರಲ್ ಆಗಿತ್ತು. ಈ ಬಗ್ಗೆ ಸದ್ಯ ನಟಿ ಮಾತನಾಡಿದ್ದು, ಯಾವುದೇ ವಿಚಾರದ ಬಗ್ಗೆ ಸತ್ಯಾಸತ್ಯತೆ ತಿಳಿಯದೆ ಮಾಹಿತಿ ಪ್ರಸಾರ ಮಾಡುವ ಪ್ರವೃತ್ತಿ ಬಗ್ಗೆ ಎಕ್ಸ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ಕಿಡಿಕಾರಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಮತ್ತು ನಿರ್ಮಾಕ ವಾಶು ಭಗ್ನಾನಿ, ಪನೋರಮಾ ಸ್ಟುಡಿಯೋಗಳಿಗೆ ಸಂಬಂಧಿಸಿದ ಕಚೇರಿ ಹಾಗೂ ನಿವಾಸದಲ್ಲಿ ಐಟಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಆ ಬೆನ್ನಲ್ಲೇ ಅವರ ಮಾವನ ಆರೋಗ್ಯದಲ್ಲಿ ಏರುಪೇರು ಉಂಟಾದ ಕಅರಣ ಅವರನ್ನು ಲಂಡನ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಕಂಡ ನಂತರ ನಟಿ ಈ ಬಗ್ಗೆ ಮಾತನಾಡಿದ್ದಾರೆ.
ಸ್ವಯಂ ಘೋಷಿತ ಆನ್ಲೈನ್ ವರದಿಗಾರರು ಹಾಗೂ ಕೆಲ ಪತ್ರಕರ್ತರು ಸತ್ಯಾಂಶವನ್ನು ಪರಿಶೀಲನೆ ಮಾಡದೇ ಸೆನ್ಸೇಷನಲ್ ಸುದ್ದಿ ಕ್ರಿಯೇಟ್ ಮಾಡುವ ಭರದಲ್ಲಿ ಸುದ್ದಿ ಬಿತ್ತರಿಸುತ್ತಿರುವ ಪ್ರಸಂಗ ಹೆಚ್ಚುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಹೀಗಾಗಿ ಈ ಬಗ್ಗೆ ನಿಮಗೊಂದು ಕ್ಲಾರಿಟಿ ಕೊಟ್ಟು ಎಲ್ಲವನ್ನು ಸರಿಪಡಿಸಲೆಂದೆ ಇಂದೂ ಪೋಸ್ಟ್ ಹಂಚಿಕೊಳ್ಳುತ್ತಿದ್ದೇನೆ.
'ಐಟಿ ರೇಡ್ ನನಗೆ ಸಂಬಂಧಿಸಿದ್ದಲ್ಲ. ನಾನು ಸಶಸ್ತ್ರ ಪಡೆಗಳ ಹಿನ್ನೆಲೆಯಿಂದ ಬಂದವಳು. ಉದ್ಯಮದಲ್ಲಿ ನನ್ನ ಯಾವುದೇ ಕುಟುಂಬಸ್ಥರು ಇರಲಿಲ್ಲ. ನಾನು ನನ್ನ ಪರಿಶ್ರಮದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು, ಇಂದು ಸಾಕಷ್ಟು ಹೆಸರು ಮಾಡಿ ಗಳಿಸಿದ್ದೇನೆ, ನಾನು ಜವಬ್ದಾರಿಯುತ ಭಾರತೀಯ ನಾಗರಿಕಳಾಗಿ ನನ್ನ 20ನೇ ವಯಸ್ಸಿನಿಂದ ತೆರಿಗೆ ಪಾವತಿ ಮಾಡುತ್ತಾ ಬಂದಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'Rashmika ನಿತ್ಯ 10-15 ಸಲ ಐ ಲವ್ ಯೂ ಹೇಳ್ತಾರೆ'; ರಿಲೇಷನ್‌ಶಿಪ್ ಗುಟ್ಟು ಬಿಚ್ಚಿಟ್ಟ Vijay Deverakonda
'ವೈಯಕ್ತಿಕವಾಗಿ ಅಥವಾ ಯಾವುದೇ ನಿರ್ಮಾಣ ಸಂಸ್ಥೆಯ ಪರವಾಗಿ ನಾನು ಕಾನೂನು ಬಾಹಿರವಾಗಿ ವಿದೇಶಿ ವರ್ಗಾವಣೆಯಕಲ್ಲಿ ನಾನು ಭಾಗಿಯಾಗಿಲ್ಲ. ದೇಶದಲ್ಲಿ ಅಥವಾ ವಿದೇಶದಲ್ಲಿಯೂ ಬೇನಾಮಿ ಆಸ್ತಿಯನ್ನು ನಾನು ಹೊಂದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ' ಎಂದು ಸ್ಪಷ್ಟನೆ ಕೊಟ್ಟರು
'ಇಲ್ಲಿಯವರೆಗೂ ನಾನು ಯಾವುದೇ ದುಬಾರಿ ಆಸ್ತಿಯನ್ನು ಯಾರಿಗೂ ಉಡುಗೊರೆಯಾಗಿ ಕೊಟ್ಟಿಲ್ಲ, ಕೊಡೋದು ಇಲ್ಲ. ಜೊತೆಗೆ ಅಂತಹ ದುಬಾರಿ ವಸ್ತು, ಆಸ್ತಿಯನ್ನು ಪಡೆಯೋದು ಇಲ್ಲ ಇದು ನನ್ನ ಪಾಲಿಸಿ. ಸುಳ್ಳು ಮತ್ತು ದುರುದ್ದೇಶಪೂರಿತ ಊಹಾಪೋಹದ ಬಗ್ಗೆ ಪ್ರಕಟಿಸಿದ ಪ್ರತಿಯೊಬ್ಬರ ಬಳಿ ನಾನು ಕೇಳಿಕೊಳ್ಳುವುದು ಏನೆಂದರೆ ನನ್ನ ಬಗ್ಗೆ ಪ್ರಕಟಿಸಿದ ಇಲ್ಲಸಲ್ಲದ ಆರೋಪದ ಸುದ್ದಿಗಳನ್ನು ತೆಗೆದು ಸತ್ಯಾಂಶ ಪೋಸ್ಟ್ ಮಾಡಿ' ಎಂದಿದ್ದಾರೆ
'ಸುದ್ದಿ ಸಂಸ್ಥೆ ವ್ಯವಹಾರ ಹೊಂದಿರುವ ಪ್ರತಿಯೊಬ್ಬರು ತಮ್ಮದೇ ರೀತಿಯಲ್ಲಿ ಆರ್ಥಿಕವಾಗಿ ಒದ್ದಾಡುತ್ತಾರೆ. ಆದರೆ ಪ್ರಕಟಿಸುವ ಸುದ್ದಿ ಸತ್ಯದ ಪರವಿರಲಿ, ಯಾರದ್ದೋ ಜೀವನಕ್ಕೆ ಉದ್ದೇಶ ಪೂರ್ವಕವಾಗಿ ಕೆಡಕುಂಟಾಗದಂತೆ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ' ನಟಿ ರಕುಲ್ ಸಿಂಗ್, (ಏಜೆನ್ಸೀಸ್)