ಹೇಳುತ್ತಾ ಹೋದರು ರಕ್ಷಿತ್ ಶೆಟ್ಟಿ. ‘777 ಚಾರ್ಲಿ’ ಬಿಡುಗಡೆ ಹತ್ತಿರ ಬರುತ್ತಿದೆ. ಅದಕ್ಕೂ ಮುನ್ನ ಸೋಮವಾರ ಮಧ್ಯಾಹ್ನ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೇರೆ ಭಾಷೆಯ ಟ್ರೇಲರ್ಗಳನ್ನು ಅಲ್ಲಿನ ಸ್ಟಾರ್ ನಟರು ಇದ್ದಲ್ಲಿಂದಲೇ ಬಿಡುಗಡೆ ಮಾಡಿದರೆ, ಕನ್ನಡದ ಟ್ರೇಲರ್ನ್ನು ಒಂದು ವಿಶೇಷ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಇದುವರೆಗೂ ಚಿತ್ರದ ಬಗ್ಗೆ ಇಷ್ಟಿಷ್ಟೇ ಮಾತಾಡುತ್ತಿದ್ದ ರಕ್ಷಿತ್, ಮನಸ್ಸು ಬಿಚ್ಚಿ ಮಾತನಾಡಿದರು. ‘‘ಉಳಿದವರು ಕಂಡಂತೆ’ ನನ್ನ ಮುಗ್ಧತೆಯಾಗಿತ್ತು. ‘ಕಿರಿಕ್ ಪಾರ್ಟಿ’ ಅವಶ್ಯಕತೆಯಾಗಿತ್ತು. ‘ಅವನೇ ಶ್ರೀಮನ್ನಾರಾಯಣ’ ಕಲಿಕೆಯಾಗಿತ್ತು. ‘ಚಾರ್ಲಿ 777’ಯಲ್ಲಿ ಒಂದು ರೌಂಡು ಬಂದಿದ್ದೀನಿ. ಈ ಚಿತ್ರದಿಂದ ಎಮೋಷನಲಿ ತುಂಬಾ ಕಲಿತಿದ್ದೇನೆ. ಅದರಲ್ಲೂ ನನ್ನ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದವರಿಂದ ಕಲಿತಿದ್ದೇನೆ. ಈ ಜರ್ನಿ ನನಗೆ ಬಹಳ ಸಹಾಯ ಮಾಡಿದೆ. ಅದನ್ನು ಅಷ್ಟು ಸುಲಭವಾಗಿ ವಿವರಿಸುವುದು ಸಾಧ್ಯವಿಲ್ಲ. ಏಕೆಂದರೆ, ಇದೊಂದು ಎಮೋಷನಲ್ ಪ್ರಯಾಣ’ ಎನ್ನುತ್ತಾರೆ ರಕ್ಷಿತ್.
ಸಾಮಾನ್ಯವಾಗಿ ತಮ್ಮ ಎಲ್ಲ ಚಿತ್ರಗಳಲ್ಲೂ ಪ್ರತಿಯೊಂದು ವಿಷಯದಲ್ಲೂ ತೊಡಗಿಸಿಕೊಳ್ಳುತ್ತಿದ್ದರಂತೆ ರಕ್ಷಿತ್. ಇದರಲ್ಲಿ ಮಾತ್ರ ಯಾವುದೇ ವಿಚಾರದಲ್ಲೂ ತೊಡಗಿಸಿಕೊಳ್ಳಲು ಇಷ್ಟವಿರಲಿಲ್ಲ ಎಂದು ಹೇಳುತ್ತಾರೆ. ‘ಈ ಚಿತ್ರ ಒಪ್ಪಿದಾಗ ನನ್ನೊಳಗಿನ ಹುಡುಕಾಟದಲ್ಲಿದ್ದೆ. ಇದರಲ್ಲಿ ಕಿರಣ್ ಹೇಳಿದ್ದನ್ನು ಮಾಡಿದ್ದೇನೆ ಬಿಟ್ಟರೆ, ನನ್ನ ತಲೆ ಉಪಯೋಗಿಸಿ ನಾನೇನೂ ಮಾಡಿಲ್ಲ. ಇದು ಸಂಪೂರ್ಣ ಕಿರಣ್ ರಾಜ್ ಚಿತ್ರ. ನನಗೆ ಅವರಲ್ಲಿನ ಪ್ಯಾಶನ್ ಬಹಳ ಇಷ್ಟವಾಯಿತು. ತಮ್ಮ ಕೆಲಸವನ್ನು ಅಷ್ಟೊಂದು ನಿಷ್ಠರಾಗಿ ಮಾಡುವ ಯಾರನ್ನೂ ಇದುವರೆಗೂ ನಾನು ನೋಡಿರಲಿಲ್ಲ’ ಎಂದು ನಿರ್ದೇಶಕರ ಬೆನ್ನುತಟ್ಟಿದರು ರಕ್ಷಿತ್. ತಮ್ಮ ಬಗ್ಗೆ ಚಿತ್ರತಂಡದ ಹಲವರು ದೂರು ನೀಡಿದರೂ, ರಕ್ಷಿತ್ ಒಮ್ಮೆಯೂ ಏನೂ ಹೇಳಲಿಲ್ಲ ಎಂದ ಕಿರಣ್, ರಕ್ಷಿತ್ ಸಹಕಾರ ಮತ್ತು ಪ್ರೋತ್ಸಾಹ ಇಲ್ಲದಿದ್ದರೆ ಈ ಚಿತ್ರ ಸಾಧ್ಯವೇ ಇರಲಿಲ್ಲ ಎಂದರು.
https://www.vijayavani.net/actress-sunny-leone-admired-mandya-boys-and-said-oh-my-god/