ಸಿನಿವಾಣಿ

ಶೆರ್ಲಿನ್​ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ ರಾಖಿ ... ಯಾಕೆ ಹೇಳಿ?

ಮುಂಬೈ: ಬಾಲಿವುಡ್​ನಲ್ಲಿ ರಾಖಿ ಸಾವಂತ್​ ಮತ್ತು ಶೆರ್ಲಿನ್​ ಚೋಪ್ರಾ ಅವರದ್ದೇ ಸುದ್ದಿ. ಒಂದು ಕಾಲದ ಹಾಟ್​ ನಟಿಯರು, ಇದೀಗ ಸಿಕ್ಕಾಪಟ್ಟೆ ಜಗಳ ಆಡುತ್ತಿದ್ದಾರೆ. ಅದು ಯಾವ ಹಂತಕ್ಕೆ ಹೋಗಿದೆಯೆಂದರೆ, ಇಬ್ಬರೂ ಒಬ್ಬರ ಮೇಲೊಬ್ಬರು ಮಾನನಷ್ಟ ಮೊಕದ್ದಮೆಗಳನ್ನು ಕೂಡಾ ಹಾಕಿಕೊಂಡಿದ್ದಾರೆ.

ಇದೆಲ್ಲ ಶುರುವಾಗಿದ್ದು ಸಾಜಿದ್​ ಖಾನ್​ ಎಂಬ ನಟ ಮತ್ತು ನಿರ್ದೇಶಕನಿಂದ. ಮೀಟೂ ಚಳವಳಯಲ್ಲಿ ಸಾಜಿದ್​ ಖಾನ್​ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಆ ಸಂದರ್ಭದಲ್ಲಿ ಸಾಜಿದ್​ ಮಾಡುತ್ತಿದ್ದ ಎಲ್ಲ ಕೆಲಸಗಳನ್ನು ಕಳೆದುಕೊಂಡು ಮನೆಯಲ್ಲಿ ಕೂಡಬೇಕಾಯಿತು. ಈಗ ಕ್ರಮೇಣ ಮೀಟು ಚಳವಳಿಯ ಬಿಸಿ ಕಡಿಮೆಯಾಗಿರುವುದರಿಂದ, 'ಬಿಗ್​ ಬಾಸ್​' ಮನೆಗೆ ಸಾಜಿದ್​ ಹೋಗಿದ್ದಾರೆ. ಆ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಸಾಜಿದ್​ ಖಾನ್​ ಎಂಬ ಕಳಂಕಿತನಿಗೆ ಅವಕಾಶ ಕೊಡಬಾರದಿತ್ತು ಎಂದು ಸಲ್ಮಾನ್​ ಖಾನ್​ಗೂ ಕೆಲವು ನಟಿಯರು ಬೈದರು.

ಈ ಪೈಕಿ ಶರ್ಲಿನ್​ ಚೋಪ್ರಾ ಸಹ ಒಬ್ಬರು. 'ಬಿಗ್ ಬಾಸ್​' ಮನೆಗೆ ಹೋಗುವುದಕ್ಕೆ ಸಾಜಿದ್​ಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಶರ್ಲಿನ್​ ತಿರುಗಿಬಿದ್ದಿದ್ದಾರೆ. ಸಾಜಿದ್​ ಖಾನ್​ ಮತ್ತು 'ಬಿಗ್​ ಬಾಸ್​' ಇಬ್ಬರನ್ನೂ ಬೈದುಕೊ0ಡು ಓಡಾಡುತ್ತಿದ್ದಾರೆ. ಹೀಗಿರುವಾಗಲೇ, ಸಾಜಿದ್​ ಪರವಾಗಿ ರಾಖಿ ಸಾವಂತ್​ ನಿಂತಿದ್ದಾರೆ. ಅಲ್ಲಿಂದ ಶೆರ್ಲಿನ್​ ಕೆಂಗಣ್ಣು, ರಾಖಿ ಮೇಲೆ ನೆಟ್ಟಿದೆ. ಆಕೆಯ ವಿರುದ್ಧ ಹರಿಹಾಯ್ದಿರುವ ಶೆರ್ಲಿನ್​, ಆಕೆಯ ಬಗ್ಗೆ ಸಾಕಷ್ಟು ಆರೋಪಗಳನ್ನು ಹೊರಿಸಿದ್ದಾರೆ.

ಇದೆಲ್ಲದರಿಂದ ಬೇಸತ್ತಿರುವ ರಾಖಿ, ಶೆರ್ಲಿನ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಶೆರ್ಲಿನ್​ ತನಗೆ 10 ಬಾಯ್​ಫ್ರೆಂಡ್​ಗಳಿದ್ದಾರೆ ಎಂದು ಆರೋಪಿಸಿರುವುದರಿಂದ, ತನ್ನ ಬಾಯ್​ಫ್ರೆಂಡ್​ಗೆ ತನ್ನ ಮೇಲೆ ಸಂಶಯ ಮೂಡಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಶೆರ್ಲಿನ್​ ಒಬ್ಬ ಬ್ಲಾಕ್​ಮೇಲರ್​ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಖಿ, ಶೆರ್ಲಿನ್​ ಮೇಲೆ ಇನ್ನೊಂದು ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.

ಅಲ್ಲಿಗೆ ಇಬ್ಬರೂ ನಟಿಯರು ಪರಸ್ಪರ ಮಾನನಷ್ಟ ಮೊಕದ್ದಮೆಯನ್ನು ಹೂಡಿಕೊಂಡಿದ್ದಾರೆ. ಇದ್ಯಾವುದೂ ಗೊತ್ತಿಲ್ಲದ ಸಾಜಿದ್​ ಖಾನ್​, ಅತ್ತ 'ಬಿಗ್​ ಬಾಸ್​' ಮನೆಯಲ್ಲಿ ಆಟ ಆಡಿಕೊಂಡಿದ್ದಾರೆ. ಈ ಪ್ರಕರಣ ಯಾವ ರೂಪ ಪಡೆಯುತ್ತದೋ ಗೊತ್ತಿಲ್ಲ.