ನವದೆಹಲಿ: ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸಿ, ನೆಟ್ಟಿಗರಿಂದ ಟ್ರೋಲ್ಗೆ ಒಳಗಾಗುವ ಬಾಲಿವುಡ್ ನಟಿ ರಾಖಿ ಸಾವಂತ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನೆಟ್ಟಿಗರು ಬಿದ್ದುಬಿದ್ದು ನಗುತ್ತಿದ್ದಾರೆ.
ಸದ್ಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಗ್ಗೆಯೇ ಬಾಲಿವುಡ್ನಲ್ಲಿ ಮಾತು ಕೇಳಿಬರುತ್ತಿದೆ. ಉದಯೋನ್ಮುಖ ನಟನ ಸಾವಿನ ಬಗ್ಗೆ ಹಲವು ಗಣ್ಯರು ತಮ್ಮದೇ ಆದ ರೀತಿಯಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ಆದರೆ ರಾಖಿ ಸಾವಂತ್ ಮಾತ್ರ ಈ ವಿಚಾರದಲ್ಲಿ ಮತ್ತೆ ತಮ್ಮ ಅಸಹಜ ಮಾತುಗಳಿಂದ ಟೀಕೆಗೊಳಗಾಗಿದ್ದಾರೆ.
ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು ತಮ್ಮ ಕನಸಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಏನೂ ವಿಶೇಷ ಅನ್ನಿಸುತ್ತಿರಲಿಲ್ಲ. ಆದರೆ ಇದರೊಂದಿಗೆ ಮತ್ತೊಂದು ವಿಚಾರವನ್ನೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ಗಲಭೆಯಲ್ಲಿ ಪಾಲ್ಗೊಂಡು ಜೈಲು ಸೇರಿದ್ದ ಜಾಮಿಯಾ ವಿವಿಯ ಗರ್ಭಿಣಿ ವಿದ್ಯಾರ್ಥಿನಿಗೆ ಜಾಮೀನು…
ನಾನು ರಾತ್ರಿ ಮಲಗಿದ್ದೆ. ಒಮ್ಮೆಲೆ ಯಾರೋ ಬಂದ ಹಾಗೆ ಆಯಿತು. ನಾನು ಬೆಚ್ಚಿಬಿದ್ದೆ. ಯಾಕೆಂದರೆ ಸುಶಾಂತ್ ಸಿಂಗ್ ರಜಪೂತ್ ಬಂದಿದ್ದರು. ರಾಖಿ ನಾನು ನಿಮ್ಮ ಹೊಟ್ಟೆಯಲ್ಲಿ ಮಗನಾಗಿ ಹುಟ್ಟುತ್ತೇನೆ. ನನ್ನ ಅಭಿಮಾನಿಗಳಿಗೆ ಈ ವಿಚಾರವನ್ನು ಹೇಳಿ ಎಂದು ಹೇಳಿದ್ದಾರೆ. ನಾನು ಸುಳ್ಳು ಹೇಳುತ್ತಿಲ್ಲ. ಸುಶಾಂತ್ ನನ್ನ ಒಳ್ಳೆಯ ಸ್ನೇಹಿತನಾಗಿದ್ದ. ಅವನೀಗ ನನ್ನ ಕನಸಲ್ಲಿ ಬಂದು, ಮಗನಾಗಿ ಹುಟ್ಟುವುದಾಗಿ ಹೇಳಿದ್ದಾನೆ ಎಂದಿದ್ದನ್ನು ವಿಡಿಯೋದಲ್ಲಿ ಕೇಳಬಹುದು.
ಇದನ್ನು ನೋಡಿದ ನೆಟ್ಟಿಗರು ತುಂಬ ಕೋಪ ಮಾಡಿಕೊಂಡಿದ್ದಾರೆ. ರಾಖಿ..ನಿಮಗೆ ಕಿಂಚಿತ್ತೂ ಸಂವೇದನೆ ಎಂಬುದೇ ಇಲ್ಲ ಎಂದು ಬೈದಿದ್ದಾರೆ. ನಾವೆಲ್ಲರೂ ಸೇರಿ ರಾಖಿ ಸಾವಂತ್ ಅಕೌಂಟ್ನ್ನು ರಿಪೋರ್ಟ್ ಮಾಡೋಣ ಎಂದೂ ಓರ್ವರು ಕಾಮೆಂಟ್ ಮಾಡಿದ್ದಾರೆ. ಇಂಥ ಹೊತ್ತಲ್ಲಿ ಹೀಗೆಲ್ಲ ಮಾತನಾಡಲು ನಾಚಿಕೆ ಆಗುವುದಿಲ್ಲವಾ? ಎಂದೂ ಖಾರವಾಗಿ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)