ಸಿನಿವಾಣಿ

ಚಾರ್ಲಿಗೆ ರಜನಿ ಮೆಚ್ಚುಗೆ; ತಲೈವಾಗೆ ಥ್ಯಾಂಕ್ಸ್ ಹೇಳಿದ ರಕ್ಷಿತ್

‘777 ಚಾರ್ಲಿ’ ಚಿತ್ರವನ್ನು ಹಲವು ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಜಾನ್ ಅಬ್ರಹಾಂ, ಬೋನಿ ಕಪೂರ್ ಮುಂತಾದವರು ರಕ್ಷಿತ್ ಮತ್ತು ಚಿತ್ರತಂಡದವರಿಗೆ ಫೋನ್ ಮೂಲಕ, ಸೋಷಿಯಲ್ ಮೂಲಕ ಶುಭ ಹಾರೈಸಿದ್ದಾರೆ. ಈಗ ರಜನಿಕಾಂತ್ ಸಹ ಚಿತ್ರ ನೋಡಿ ರಕ್ಷಿತ್​ಗೆ ಫೋನ್ ಮಾಡಿ ಮಾತನಾಡಿದರಂತೆ. ಈ ವಿಷಯವನ್ನು ಸ್ವತಃ ರಕ್ಷಿತ್ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಕ್ಷಿತ್,

‘ರಜನಿ ಸಾರ್ ಫೋನ್ ಮಾಡಿದ್ದರು. ‘777 ಚಾರ್ಲಿ’ ನೋಡಿ ಅವರು ಬಹಳ ಖುಷಿ ಪಟ್ಟಿದ್ದಾರೆ. ಚಿತ್ರದ ಮೇಕಿಂಗ್, ಅದರಲ್ಲಿ ಅಡಗಿರುವ ಒಳಾರ್ಥಗಳು ಮತ್ತು ಕ್ಲೈಮ್ಯಾಕ್ಸ್ ಮೆಚ್ಚಿಕೊಂಡು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸೂಪರ್​ಸ್ಟಾರ್ ಒಬ್ಬರಿಂದ ಅಂತಹ ಮಾತುಗಳನ್ನು ಕೇಳಿದ್ದು ಬಹಳ ಖುಷಿಯಾಯಿತು. ಧನ್ಯವಾದಗಳು ರಜನಿ ಸಾರ್’ ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ.