ಸಿನಿವಾಣಿ

ಒಂದೇ ದಿನ 113 ಬಾರಿ ಬಿಡುಗಡೆಯಾದ ರಾಜಕುಮಾರ ಪಂಚಪದಿ

manjunathktgns

ಬೆಂಗಳೂರು: ಡಾ. ರಾಜಕುಮಾರ್​ ಕುರಿತು ಇದುವರೆಗೂ ಹಲವು ಪುಸ್ತಕಗಳು ಬಿಡುಗಡೆಯಾಗಿವೆ. ಈ ಸಾಲಿಗೆ 'ರಾಜಕುಮಾರ ಪಂಚಪದಿ' ಎಂಬ ಇನ್ನೊಂದು ಹೊಸ ಪುಸ್ತಕ ಸೇರ್ಪಡೆಯಾಗಿದ್ದು, ಇಂದು ಎರಡು ತಾಸಿನಲ್ಲಿ ದಾಖಲೆಯ 113 ಬಾರಿ ಬಿಡುಗಡೆಯಾಗಿದೆ.

'ರಾಜಕುಮಾರ ಪಂಚಪದಿ' ಪುಸ್ತಕದ ವಿಶೇಷವೆಂದರೆ, ಡಾ. ರಾಜಕುಮಾರ್​ ಅವರ ಮೊದಲ ಚಿತ್ರ 'ಬೇಡರ ಕಣ್ಣಪ್ಪ'ದಿಂದ ಪ್ರಾರಂಭಿಸಿ, ಕೊನೆಯ ಚಿತ್ರ 'ಶಬ್ಧವೇಧಿ'ಯವರೆಗೂ ಎಲ್ಲಾ ಚಿತ್ರಗಳ ತಾತ್ಪರ್ಯವನ್ನು ಕೇವಲ ಐದು ಸಾಲುಗಳಲ್ಲಿ ವಿವರಿಸಲಾಗಿದೆ. ಈ ಪುಸ್ತಕವನ್ನು ಮಂಜುನಾಥ್ ಹಾಲುವಾಗಿಲು ಅವರು ರಚಿಸಿದ್ದು, ಸ್ನೇಹ ಬುಕ್ ಹೌಸ್ನ ಪರಶಿವಪ್ಪ ಹೊರತಂದಿದ್ದಾರೆ. ಬರೀ ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಸಾಹಿತ್ಯದ ಇತಹಾಸದಲ್ಲೇ ಯಾವುದೇ ಪುಸ್ತಕವನ್ನು ಸಮಾಜದ ನೂರಾರು ಮಂದಿ ಗಣ್ಯರು 113 ಪ್ರತ್ಯೇಕ ಸ್ಥಳಗಳಲ್ಲಿ ಬಿಡುಗಡೆ ಮಾಡಿರುವುದು ವಿಶೇಷ.

ಶಿವರಾಜಕುಮಾರ್​, ಪುನೀತ್​ ರಾಜಕುಮಾರ್​, ಜಗ್ಗೇಶ್​, ಯುವ ರಾಜಕುಮಾರ್​, 'ನೆನಪಿರಲಿ' ಪ್ರೇಮ್​, ಧ್ರುವ ಸರ್ಜಾ ಮುಂತಾದವರು ಚಿತ್ರರಂಗದ ಕಡೆಯಿಂದ ಪುಸ್ತಕಗಳನ್ನು ಬಿಡುಗಡೆ ಮಾಡಿದರೆ, ಸಾಹಿತ್ಯ ಕ್ಷೇತ್ರದಿಂದ ಡಾ. ಬರಗೂರು ರಾಮಚಂದ್ರಪ್ಪ, ಪ್ರೊಫೆಸರ್ ಸಿದ್ಧಲಿಂಗಯ್ಯ, ಜರಗನಹಳ್ಳಿ ಶಿವಶಂಕರ್, ಅರಳುಮಲ್ಲಿಗೆ ಪಾರ್ಥಸಾರಥಿ, ಎಚ್​.ಎಸ್​. ವೆಂಕಟೇಶಮೂರ್ತಿ ಬಿಡುಗಡೆ ಮಾಡಿದ್ದಾರೆ.

ಉಪ ಮುಖ್ಯಮಂತ್ರಿ ಡಾll ಅಶ್ವಥ್ ನಾರಾಯಣ್, ಚಕ್ರವರ್ತಿ ಸೂಲಿಬೆಲೆ, ಸಿದ್ಧಗಂಗಾ ಶ್ರೀಗಳು, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ತೇಜಸ್ವಿನಿ ಅನಂತ್‍ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷರು ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾಗಿರುವ ಎನ್. ಆರ್. ರಮೇಶ್, ಮಾಜಿ ಮಹಾಪೌರ ಗೌತಮ್ ಕುಮಾರ್, ಮಾಜಿ ಬಿಬಿಎಂಪಿ ಸದಸ್ಯರಾಗಿರುವ ಎಸ್.ಕೆ. ನಟರಾಜ್, ಎಲ್. ಶ್ರೀನಿವಾಸ್, ಎ. ಹೆಚ್. ಬಸವರಾಜ್ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ನೂರಕ್ಕೂ ಹೆಚ್ಚು ಮಂದಿ ಮಹನೀಯರು “ರಾಜಕುಮಾರ ಪಂಚಪದಿ” ಕೃತಿಯನ್ನು ಅವರವರ ಫೇಸ್​ಬುಕ್​ಲೈವ್​ನಲ್ಲಿ ಲೋಕಾರ್ಪಣೆ ಮಾಡಿದ್ದಾರೆ.