ಸಿನಿವಾಣಿ

'ಟೋಬಿ' ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ನಟ ರಾಜ್.ಬಿ.ಶೆಟ್ಟಿ!

ಮೋಹನ್​ ಶೆಟ್ಟಿ

ಬೆಂಗಳೂರು: ಟೋಬಿ(Toby) ಚಿತ್ರದ ಬಗ್ಗೆ ನಟ, ನಿರ್ದೇಶಕ ರಾಜ್.ಬಿ.ಶೆಟ್ಟಿ(Raj B Shetty) ಕೆಲವು ಕುತೂಹಲಕಾರಿ ವಿಷಯಗಳನ್ನು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ(Vijayavani) ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ನಟ ರಾಜ್​.ಬಿ.ಶೆಟ್ಟಿ, "ಟೋಬಿ ಚಿತ್ರ ಟಿ.ಕೆ ದಯಾನಂದ್ ಅವರ ಕಥೆ. ಆ ಕಥೆಯ ಹೆಸರೇ ಟೋಬಿ! ಈ ಶೀರ್ಷಿಕೆ ನನಗೆ ಬಹಳ ಖುಷಿ ಅನಿಸಿತು. ಕಾರಣ ಕರೆಯುವುದಕ್ಕೆ ತುಂಬ ಸರಳವಾಗಿದೆ, ವಿಭಿನ್ನ ಹಾಗೂ ವಿಶೇಷವಾಗಿದೆ. ಹಾಗಾಗಿ ಸ್ಟೋರಿಯನ್ನು ಆಧರಿಸಿ ಅದನ್ನೇ ಟೈಟಲ್(Tittle) ಆಗಿ ಮುಂದುವರೆಸಲು ನಿರ್ಧರಿಸಿದೆ" ಎಂದು ಹೇಳಿದರು.

"ಚಿತ್ರದಲ್ಲಿ ಬರುವ ಪಾತ್ರದ ಹೆಸರನ್ನೇ ಟೈಟಲ್ ಆಗಿ ಬಳಸಿಕೊಂಡಿದ್ದೇವೆ. ಟೋಬಿ ಅಂತ ನಮ್ಮ ನಿರ್ದೇಶಕ ಟಿ.ಕೆ. ದಯಾನಂದ್ ಅವರು ಹೆಸರಿಟ್ಟರು, ನಮ್ಮ ಪೋಸ್ಟರ್​ ಸಾಕಷ್ಟು ಕುತೂಹಲ ಮೂಡಿಸಿದೆ. ಪೋಸ್ಟರ್​​ನಲ್ಲಿ(Poster) ಟಗರು ಇರುವುದು ಯಾಕಂದರೆ, ಅದು ಗುದ್ದಾಟಕ್ಕೆ ಹೆಚ್ಚು ಹೆಸರುವಾಸಿ. ಆದ್ರೆ ಅದು ಬಹಳ ಪಾಪ! ಅದಕ್ಕೆ ಗುದ್ದಾಟ ಮಾಡಬೇಕು ಎಂಬ ಉದ್ದೇಶವಿರುವುದಿಲ್ಲ. ಸುಖಾಸುಮ್ಮನೆ ಅದನ್ನು ಕೆಣಕಿದರೆ ಅದು ಖಂಡಿತ ಗುದ್ದದೇ ಬಿಡುವುದಿಲ್ಲ. ಈ ಮುಖ್ಯ ಕಾರಣದಿಂದಲೇ ಟಗರು ನಮ್ಮ ಪೋಸ್ಟರ್​ನಲ್ಲಿದೆ" ಎಂದು ಹೇಳುವ ಮೂಲಕ ಚಿತ್ರದ ಬಗ್ಗೆ ಮೊದಲ ಸುಳಿವನ್ನು ಬಿಟ್ಟುಕೊಟ್ಟರು.

ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ನಟ ರಾಜ್.ಬಿ.ಶೆಟ್ಟಿ ಅವರು ನಮ್ಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಸಂದರ್ಶನವನ್ನು ವೀಕ್ಷಿಸಲು ಕೆಳಗಿನ ಯೂಟ್ಯೂಬ್(Youtube) ಲಿಂಕ್ ಅನ್ನು ಕ್ಲಿಕ್ ಮಾಡಿ.