ಸಿನಿವಾಣಿ

ರಾಣನ ಜತೆಗೆ ರಾಗಿಣಿ ನೃತ್ಯ; ಐಟಂ ಸಾಂಗ್ ಅಲ್ಲ, ಆದರೆ..

ಬೆಂಗಳೂರು: ನಿರ್ದೇಶಕ ನಂದಕಿಶೋರ್ ಮತ್ತು ಶ್ರೇಯಸ್ ಮಂಜು ಕಾಂಬಿನೇಷನ್​ನಲ್ಲಿ ‘ರಾಣ’ ಸಿನಿಮಾ ಶೂಟಿಂಗ್ ಶುರುವಾಗಿದೆ. ಈ ಬಳಗಕ್ಕೀಗ ನಟಿ ರಾಗಿಣಿ ದ್ವಿವೇದಿ ಎಂಟ್ರಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರಿಗೇನು ಪಾತ್ರ? ಪಾತ್ರದ ಬದಲು ಹಾಡೊಂದಕ್ಕೆ ರಾಗಿಣಿ ಹೆಜ್ಜೆ ಹಾಕಲಿದ್ದಾರೆ. ಈ ಹಿಂದೆ ವಿಕ್ಟರಿ ಚಿತ್ರದ ‘ಯಕ್ಕಾ ನಿನ್ನ ಮಗಳು ...’ ಚಿತ್ರದ ಹಾಡನ್ನು ಬರೆದಿದ್ದ ಶಿವು ಭೇರ್ಗಿ ‘ರಾಣ’ ಚಿತ್ರದ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಆ ಹಾಡಿನಲ್ಲಿ ರಾಗಿಣಿ ಅವರೇ ಹೆಜ್ಜೆ ಹಾಕಿದ್ದರು. ಹಾಡು ಅಷ್ಟೇ ದೊಡ್ಡ ಮಟ್ಟದ ಹಿಟ್ ಸಹ ಆಗಿತ್ತು.

ಇದೀಗ ‘ರಾಣ’ ಸರದಿ. ಹಾಗಂತ ಇದು ಐಟಂ ಹಾಡೇನು ಅಲ್ಲ. ಬದಲಿಗೆ ವಿಶೇಷ ಹಾಡಾಗಿರಲಿದೆಯಂತೆ. ಕೆ ಮಂಜು ಅರ್ಪಿಸುತ್ತಿರುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ವಿುಸುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ, ಶೇಖರ್ ಚಂದ್ರು ಛಾಯಾಗ್ರಹಣ ಈ ಚಿತ್ರಕ್ಕೆ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಶ್ರೇಯಸ್​ಗೆ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ಜೋಡಿಯಾಗಿದ್ದಾರೆ.