ಬೆಂಗಳೂರು: ರಾಗಿಣಿ ಒಂದಿಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ 'ಸಾರಿ - ಕರ್ಮ ರಿಟರ್ನ್ಸ್' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. 'ಕಿಕ್' ಎಂಬ ತಮಿಳು ಚಿತ್ರದಲ್ಲಿ ಸಂತಾನಂ ಎದುರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಮಲಯಾಂನಲ್ಲೂ ಅವರು ನಟಿಸಿದ್ದಾರೆ. ಇವೆಲ್ಲದರ ಮಧ್ಯೆ ಅವರು ಕನ್ನಡದಲ್ಲಿ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.
ಅಂದಹಾಗೆ, ರಾಗಿಣಿ ಒಪ್ಪಿಕೊಂಡಿರುವ ಹೊಸ ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಶಂಕರ್ ಈಗಾಗಲೇ 'ಶಂಭೋ ಶಿವ ಶಂಕರ' ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಮಧ್ಯೆ, ಅವರು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಾರಂತೆ.
ಈ ಚಿತ್ರದ ಹೆಸರೇನು? ನಾಯಕ ಯಾರು? ನಿರ್ಮಿಸುತ್ತಿರುವವರು ಯಾರು? ಕಲಾವಿದರು ಮತ್ತು ತಂತ್ರಜ್ನರೆಲ್ಲ ಯಾರು? ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಸದ್ಯಕ್ಕೆ ಶಂಕರ್ ಎಲ್ಲ ಮಾಹಿತಿಯನ್ನು ರಹಸ್ಯವಾಗಿಟ್ಟಿದ್ದಾರೆ. ಚಿತ್ರವನ್ನು ನವೆಂಬರ್ನಲ್ಲಿ ಅವರು ಪ್ರಾರಂಭಿಸಲಿದ್ದು, ಹಂತಹಂತವಾಗಿ ಚಿತ್ರದ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರಂತೆ.