ಬೆಂಗಳೂರು: ರಕ್ತ ಮತ್ತು ಪ್ಲಾಸ್ಮಾ ಕೊರತೆ ಇರುವುದರಿಂದ, ಎಲ್ಲರೂ ಮುಂದೆ ಬಂದು ರಕ್ತದಾನ ಮಾಡಿ ಎಂದು ನಟಿ ರಾಗಿಣಿ ದ್ವಿವೇದಿ ಕರೆ ನೀಡಿದ್ದಾರೆ.
ವಾಸವಿ ಗ್ರೂಪ್ ಮತ್ತು ಲಯನ್ಸ್ ಇಂಟರ್ನ್ಯಾಷನಲ್ ಜಂಟಿಯಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ರಾಗಿಣಿ, ರಕ್ತದಾನ ಮಾಡುವುದರ ಜತೆಗೆ ಇತರರಿಗೂ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಾನು ಆಗಾಗ ರಕ್ತದಾನ ಮಾಡುತ್ತಲೇ ಇರುತ್ತೇನೆ. ಕೆಲವು ತಿಂಗಳ ಹಿಂದೆಯೂ ರಕ್ತದಾನ ಮಾಡಿದ್ದೆ. ನನ್ನ ಪ್ರಕಾರ ಇದೊಂದು ಅದ್ಭುತವಾದ ಕೆಲಸ. ಅದರಲ್ಲೂ ಈ ಸಮಯದಲ್ಲಿ ರಕ್ತದ ಅವಶ್ಯಕತೆ ಇದೆ. ಹಾಗಾಗಿ, ಎಲ್ಲರೂ ಮುಂದೆ ಬಂದು ರಕ್ತದಾನ ಮಾಡಿ. ಇದು ನಮ್ಮೆಲ್ಲರ ಕೆಲಸವೂ ಹೌದು ಎಂದು ರಾಗಿಣಿ ಹೇಳಿದ್ದಾರೆ.