ನಟಿ ರಾಗಿಣಿ ದ್ವಿವೇದಿ ಸದ್ಯ ಕನ್ನಡ, ಹಿಂದಿ, ತೆಲುಗು, ತಮಿಳು ಜತೆಗೆ ಮಲಯಾಳಂ ಭಾಷೆಗಳಲ್ಲೂ ಬಿಜಿಯಾಗಿದ್ದಾರೆ. ಅವರು ನಟಿಸಿರುವ ಮಲಯಾಳಂ ಮತ್ತು ಕನ್ನಡದಲ್ಲಿ ಮೂಡಿಬಂದಿರುವ "ಶೀಲ' ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಜತೆಗೆ ನಂದಕಿಶೋರ್ ನಿರ್ದೇಶಿಸುತ್ತಿರುವ "ವೃಷಭ', ಒಂದು ತೆಲುಗು, ತಲಾ ಎರಡು ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಬಿಜಿಯಿದ್ದಾರೆ. ಸದ್ಯದ ಸಿನಿಮಾ ಪಯಣದ ಬಗ್ಗೆ ರಾಗಿಣಿ ವಿಜಯವಾಣಿ ಜತೆ ಮನಬಿಚ್ಚಿ ಮಾತನಾಡಿದ್ದಾರೆ.
- "ಶೀಲ' ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?
ನಿರ್ದೇಶಕ ಬಾಲು ನಾರಾಯಣ್ ಒನ್ಲೈನ್ ಹೇಳಿದರು. ತಕ್ಷಣ ುಲ್ ನರೇಷನ್ ಮಾಡಿ ಎಂದೆ. ಪಾತ್ರ ಅಷ್ಟು ತೀಕ್ಷ$್ಣವಾಗಿತ್ತು. ಗ್ಲಾಮರಸ್, ಡಿಗ್ಲಾಮರಸ್, ಕ್ಯಾರಕ್ಟರ್ ರೋಲ್, ಆ್ಯಕ್ಷನ್ ಹೀಗೆ ಹಲವಾರು ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಈ ಪಾತ್ರದ ಬಗ್ಗೆ ಕೇಳಿ ಎಕ್ಸೈಟ್ ಆದೆ. ಒಂದೇ ಚಿತ್ರದಲ್ಲಿ ಹಲವು ರೀತಿಗಳಲ್ಲಿ ಪರ್ಫಾರ್ಮ್ ಮಾಡಲು ಸಿಗುವುದು ಕಲಾವಿದರಿಗೆ ಜಾಕ್ಪಾಟ್ ಸಿಕ್ಕಂತೆ. "ಶೀಲ' ಪಾತ್ರಕ್ಕೆ ಹಲವು ಶೇಡ್ಗಳಿವೆ.
- ನಿಮ್ಮ ಪಾತ್ರದ ಬಗ್ಗೆ…
ತುಂಬ ಚಾಲೆಂಜಿಂಗ್ ಆಗಿತ್ತು. ದ್ವೀತಿಯಾರ್ಧದಲ್ಲಿ ಹೆಚ್ಚು ಬೆಳಕು ಹಾಗೂ ಡೈಲಾಗ್ಸ್ ಎರಡೂ ಇರುವುದಿಲ್ಲ. ಟಾರ್ಚ್ ಲೈಟ್, ಲೈಟರ್, ಬೆಂಕಿ ಕಡ್ಡಿ ಬೆಳಕು ಅಷ್ಟೇ. ಒಬ್ಬಳೇ ಆ ಸನ್ನಿವೇಶಗಳನ್ನು ಕ್ಯಾರಿ ಮಾಡಬೇಕು. ನಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಡಬೇಕು. ನಾನು ನನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸಿಲ್ಲ ಅಂದರೆ, ಬಂದು ನಮ್ಮ ಸಿನಿಮಾ ನೋಡಿ ಎಂದು ಹೇಳಲೂ ಆಗುವುದಿಲ್ಲ. ಒಂದು ಪ್ರಯೋಗಾತ್ಮಕ ಚಿತ್ರ ಎನ್ನಬಹುದು. "ಕಾಂತಾರ', "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಹೀಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಬಗೆಯ ಚಿತ್ರಗಳು, ವಿಭಿನ್ನ ರೀತಿಯ ಕಂಟೆಂಟ್ಗಳು ಬರುತ್ತಿವೆ.
- ಶೂಟಿಂಗ್ ವೇಳೆ ನೀವು ಎದುರಿಸಿದ ಸವಾಲು?
ದ್ವೀತಿಯಾರ್ಧದಲ್ಲಿ ತುಂಬ ಚಳಿಯಲ್ಲಿ, ಚಪ್ಪಲಿ, ಶೂ ಇಲ್ಲದೇ ಬರಿಗಾಲಿನಲ್ಲಿ ಓಡಾಡಬೇಕಿತ್ತು. ಐದಾರು ಅದ್ಭುತ ಆ್ಯಕ್ಷನ್ ಸನ್ನಿವೇಶಗಳಿವೆ, ಅವುಗಳ ಚಿತ್ರೀಕರಣದ ವೇಳೆ ಗಾಯಗಳಾದವು. ಭಾವನಾತ್ಮಕವಾಗಿಯೂ ತುಂಬ ಕಷ್ಟದ ಪಾತ್ರ. ಪಾತ್ರವನ್ನು ಅರ್ಥ ಮಾಡಿಕೊಂಡು ಅನುಭವಿಸಿ ನಟಿಸಬೇಕಿತ್ತು. ಕೇರಳದ ಒಂದು ಟೀ ಎಸ್ಟೇಟ್ನಲ್ಲಿ ಒಂದೇ ತಿಂಗಳಲ್ಲಿ ಶೂಟ್ ಮಾಡಿದೆವು.
- ಮಲಯಾಳಂನಲ್ಲಿ "ಶೀಲ' ಚಿತ್ರ ಕಳೆದ ಶುಕ್ರವಾರವೇ ಬಿಡುಗಡೆಯಾಗಿದೆ.
ಹೌದು, ಚಿತ್ರಕ್ಕೆ ಮಲಯಾಳಂನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನನಗೆ ಸ್ಟಾರ್ಡಂನ ಹಸಿವಿಲ್ಲ. ರಾತ್ರೋ ರಾತ್ರಿ ಸ್ಟಾರ್ ಆಗುವ ಆಸೆಯೂ ಇಲ್ಲ. ಹೀಗಾಗಿಯೇ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಇದೀಗ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ಇಲ್ಲೂ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀೆಯಿದೆ.
- "ವೃಷಭ' ಚಿತ್ರಕ್ಕಾಗಿ ಸಿದ್ಧತೆ ಹೇಗೆ ನಡೆಯುತ್ತಿದೆ?
ಮೋಹನ್ ಲಾಲ್ ಸರ್ ಜತೆ ಎರಡನೇ ಬಾರಿ ನಟಿಸಲಿದ್ದೇನೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ತುಂಬ ಒಳ್ಳೆಯ ಪಾತ್ರ. ಆ್ಯಕ್ಷನ್ ಪ್ರಧಾನವಾಗಿದ್ದು ನಾನೂ ಸಮರಕಲೆ ತರಬೇತಿ ಪಡೆಯುತ್ತಿದ್ದೇನೆ.
- ಮುಂದಿನ ಸಿನಿಮಾಗಳು...
ತೆಲುಗಿನ ಸ್ಟಾರ್ ಜತೆ ಒಂದು ಸಾಂಗ್ ಮಾಡಿದ್ದೇನೆ. ಹಿಂದಿಯಲ್ಲಿ ಒಂದು ಚಿತ್ರದ ಚಿತ್ರೀಕರಣ ಮುಗಿದಿದೆ. ಅಕ್ಟೋಬರ್ನಲ್ಲಿ ಮತ್ತೊಂದು ಸಿನಿಮಾ ಪ್ರಾರಂಭವಾಗಲಿದೆ. ತಮಿಳಿನಲ್ಲಿ ಎರಡು ಚಿತ್ರ ಮಾಡಿದ್ದೇನೆ. ಕನ್ನಡದಲ್ಲಿ "ಬಿಂಗೋ' ಶೂಟಿಂಗ್ ಮುಗಿದಿದೆ. ಇನ್ನೂ ಒಂದೆರಡು ಸಿನಿಮಾಗಳಿವೆ.