ಸಿನಿವಾಣಿ

ರಾಧಿಕಾ ಪಂಡಿತ್ ‘ಫೇವರೇಟ್ ಬಾಯ್ಸ್​’ ಇವರೇ ...

ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಒಂದಿಷ್ಟು ಫೋಟೋಗಳನ್ನು ತಮ್ಮ ಅಭಿಮಾನಿಗಳ ಜತೆಗೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರು, ತಮ್ಮ ‘ಫೇವರೇಟ್ ಬಾಯ್ಸ’ನ ಒಂದು ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ.

ಇಷ್ಟಕ್ಕೂ ಆ ‘ಫೇವರೇಟ್ ಬಾಯ್ಸ್​’ ಎಂಬ ಪ್ರಶ್ನೆ ಬರುವುದು ಸಹಜವೇ. ಮತ್ತಿನ್ಯಾರು ಅಲ್ಲ, ಪತಿ ಯಶ್ ಮತ್ತು ಮುದ್ದಿನ ಮಗ. ಯಶ್ ತಮ್ಮ ಮಗನನ್ನು ಎತ್ತಿಕೊಂಡಿರುವ ಫೋಟೋ ಹಂಚಿಕೊಂಡಿರುವ ಅವರು, ಅದಕ್ಕೆ ‘ಫೇವರೇಟ್ ಬಾಯ್ಸ್​’ ಎಂಬ ಟ್ಯಾಗ್‌ಲೈನ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಅಪ್ಪನ ತೋಳಲ್ಲಿ ನಗುತ್ತಿರುವ ಮಗನನ್ನು ಕಾಣಬಹುದು. ಈಗಾಗಲೇ ಈ ಫೋಟೋ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಅಂದಹಾಗೆ, ಯಶ್ ಮತ್ತು ರಾಧಿಕಾ ಪಂಡಿತ್ ಮಗನಿಗೆ ಆರು ತಿಂಗಳು ತುಂಬಿದ್ದು, ಇತ್ತೀಚೆಗೆ ಮಗನ ಚಿತ್ರವನ್ನು ಸೋಷಿಯಲ್ ಮೀಡಿಯಾ ಮೂಲಕವೇ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಹಂಚಿಕೊಂಡಿದ್ದರು. ಇದೀಗ ರಾಧಿಕಾ ಪಂಡಿತ್, ತಮ್ಮ ಪತಿ ಮತ್ತು ಮಗನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಯಶ್ ಮತ್ತು ರಾಧಿಕಾ ದಂಪತಿಯ ಮಗಳಿಗೆ ಐರಾ ಎಂದು ನಾಮಕರಣ ಮಾಡಲಾಗಿತ್ತು. ಬಹುಶಃ ಲಾಕ್‌ಡೌನ್ ಇಲ್ಲದಿದ್ದರೆ, ಮಗನ ನಾಮಕರಣ ಸಹ ಮುಗಿದಿರುತಿತ್ತೇನೋ? ಆದರೆ, ಲಾಕ್‌ಡೌನ್‌ನಿಂದಾಗಿ ಸದ್ಯಕ್ಕೆ ನಾಮಕರಣ ಮಾಡಲಾಗಿತ್ತು. ಇನ್ನು ಮಗನಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಯಾವ ಹೆಸರಿಡುತ್ತಾರೆ ಎಂಬ ಕುತೂಹಲ, ಇಬ್ಬರ ಅಭಿಮಾನಿಗಳಲ್ಲೂ ಮನೆಮಾಡಿದೆ.