ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಥವಾ ಹಬ್ಬ, ಹರಿದಿನಗಳಲ್ಲಿ ಸಿನಿಮಾ ತಂಡಗಳು ತಮ್ಮ ಚಿತ್ರಗಳ ಕುರಿತ ಹೊಸ ಅಪ್ಡೇಟ್ ನೀಡುತ್ತಾರೆ. ಹಾಗೇ ತಾರೆಯರು ತಮ್ಮ ಹೊಸ ಚಿತ್ರದ ಕುರಿತು ಘೋಷಿಸಿಕೊಳ್ಳುತ್ತಾರೆ. ಆದರೆ, ರಚಿತಾ ರಾಮ್ ಮತ್ತು ದಿಗಂತ್ 77ನೇ ಸ್ವಾತಂತ್ರ್ಯ ದಿನವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಿದ್ದಾರೆ.
ರಂಗಪ್ಪನ ಬಳಿ ಕ್ಷಮೆ ಕೇಳಿದ ರಚಿತಾ
ಸೋಮವಾರ (ಆ. 14) ಲಾಲ್ಬಾಗ್ ಲಪುಷ್ಪ ಪ್ರದರ್ಶನಕ್ಕೆ ನಟಿ ರಚಿತಾ ರಾಮ್ ಅತಿಥಿಯಾಗಿ ಆಗಮಿಸಿದ್ದರು. ವಾಪಸ್ ತೆರಳುವಾಗ ಅವರ ಕಾರು ಸ್ಥಳದಲ್ಲೇ ಇದ್ದ ಪೌರಕಾರ್ಮಿಕ ರಂಗಪ್ಪ ಎಂಬುವರಿಗೆ ತಾಗಿತ್ತು. ಅದು ಗಮನಕ್ಕೆ ಬಾರದೇ ರಚಿತಾ ಅಲ್ಲಿಂದ ತೆರಳಿದ್ದರು. ಈ ಘಟನೆಯ ವಿಡಿಯೋ ವೈರಲ್ ಆಗಿ, ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಹೀಗಾಗಿಯೇ ಸ್ವಾತಂತ್ರ್ಯ ರಂಗಪ್ಪನನ್ನು ಖುದ್ದಾಗಿ ಭೇಟಿಯಾದ ರಚಿತಾ, ಕ್ಷಮೆ ಯಾಚಿಸಿದ್ದಾರೆ. "ಅದು ಆಕಸ್ಮಿಕವಾಗಿ ನಡೆದ ಟನೆ. ನನ್ನ ವಾಹನ ಇವರಿಗೆ ಟಚ್ ಆಗಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಬೇಕು ಅಂತ ಮಾಡಿದ್ದಲ್ಲ. ಆದರೆ, ನನ್ನ ಮತ್ತು ಚಾಲಕನ ಕಡೆಯಿಂದ ತಪ್ಪಾಗಿದೆ. ಹೀಗಾಗಿ ಅಣ್ಣನ ಬಳಿ ಮನಸಾರೆ ಕ್ಷಮೆ ಕೇಳುತ್ತೇನೆ. ಈ ಟನೆಯಿಂದ ಕಾರ್ಮಿಕರಿಗೆ ಬೇಸರವಾಗಿದ್ದರೆ ಕ್ಷಮಿಸಿ. ಇವತ್ತು ಸ್ವಾತಂತ್ರ್ಯ ದಿನಾಚರಣೆ, ಮೊದಲ ಬಾರಿಗೆ ವಿಶೇಷವಾಗಿ ಆಚರಿಸಿದ್ದೇನೆ. ಮತ್ತೊಮ್ಮೆ ಈ ರೀತಿಯ ಟನೆ ನಡೆಯದಂತೆ ಎಚ್ಚರವಹಿಸುತ್ತೇನೆ' ಎಂದು ರಂಗಪ್ಪನ ಬಳಿ ಕ್ಷಮೆಯಾಚಿಸಿ ವಿಡಿಯೋ ಶೇರ್ ಮಾಡಿದ್ದಾರೆ.
77 ಕಿಮೀ ದಿಗಂತ್ ಸೈಕಲ್ ಸವಾರಿ
ನಟ ದಿಗಂತ್ಗೆ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ. ಹೀಗಾಗಿಯೇ ಸಮಯ ಸಿಕ್ಕಾಗ ಸೈಕಲ್ ರೈಡ್, ಟ್ರೆಕ್ಕಿಂಗ್ ಹೋಗುತ್ತಿರುತ್ತಾರೆ. 77ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಅವರು 77 ಕಿಮೀ ಸೈಕಲ್ ರೈಡ್ ಮಾಡಿದ್ದಾರೆ. 209 ನಿಮಿಷಗಳಲ್ಲಿ 77 ಕಿಮೀ ಸೈಕಲ್ ರೈಡ್ ಮಾಡಿ ಫಿಟ್ನೆಸ್ ಕುರಿತ ಜಾಗೃತಿ ಮೂಡಿಸುವ ಮೂಲಕ ಸ್ವತಂತ್ರ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ.