ಸಿನಿವಾಣಿ

ನನಗೆ ಆ ಪದದ ಅರ್ಥ ಗೊತ್ತಿರಲಿಲ್ಲ... ವೈರಲ್​ ಆಗಿ ಟ್ರೋಲ್​ ಆದ ಬೆನ್ನಲ್ಲೇ ರಾಶಿ ಖನ್ನಾ ಸ್ಪಷ್ಟನೆ! Raashii Khanna

Raashii Khanna : ಸೂಪರ್​ ಹಿಟ್​ ಟಿಲ್ಲು ಚಿತ್ರದ ನಾಯಕ ಸಿದ್ದು ಜೊನ್ನಲಗಡ್ಡ ನಟನೆಯ ಹೊಸ ಸಿನಿಮಾ "ತೆಲುಸು ಕದ" ದೀಪಾವಳಿಗೆ ಬಿಡುಗಡೆಯಾಗಲಿದೆ. ವಸ್ತ್ರ ವಿನ್ಯಾಸಕ ಕೋನಾ ನೀರಜಾ ಎಂಬುವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ರಾಶಿ ಖನ್ನಾ ಮತ್ತು ಕನ್ನಡತಿ ಶ್ರೀನಿಧಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿರುವ ಈ ಚಿತ್ರ ಅ. 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಪ್ರಚಾರ ಜೋರಾಗಿ ನಡೆಯುತ್ತಿದೆ.

ಆದರೆ, ಇತ್ತೀಚೆಗೆ ಸಿನಿಮಾ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಾಶಿ ಖನ್ನಾ ಒಂದು ಪದವನ್ನು ಬಳಸಿದ್ದರು. ಅವರು ಹೇಳಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವರೆಲ್ಲ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಿತ್ತು ಅದನ್ನು ಕೇಳಿ ನಾನು ಹುಚ್ಚು ಮನುಷ್ಯನಂತೆ ನಗಾಡುತ್ತಿದ್ದೆ ಎಂದರು. ತೆಲುಗಿನ ಪಿಚ್ಚಿ ಮುಂಡ (ಹುಚ್ಚನಂತೆ) ಎಂಬ ಪದ ಬಳಸಿದ್ದರು. ಆ ಪದದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ, ಸಿಕ್ಕಾಪಟ್ಟೆ ಟ್ರೋಲ್​ ಕೂಡ ಆಗಿತ್ತು.

ಆದರೆ, ಇತ್ತೀಚೆಗೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿದ್ದ ನಾಯಕಿ ರಾಶಿ ಖನ್ನಾ ಈ ಬಗ್ಗೆ ಸ್ಪಷ್ಟನೆ ನೀಡಿದರು. ಅದೊಂದು ಅವಾಚ್ಯ ಶಬ್ದ ಎಂದು ನನಗೆ ತಿಳಿದಿರಲಿಲ್ಲ. ಬದಲಾಗಿ ಅದೊಂದು ಮುದ್ದಾದ ಪದವೆಂದು ನಾನು ಭಾವಿಸಿದ್ದೆ ಎಂದು ಹೇಳಿದರು.

ಇದೇ ವೇಳೆ ಚಿತ್ರದ ನಾಯಕ ಸಿದ್ದು ಜೊನ್ನಲಗಡ್ಡ ಕೂಡ ಸ್ಪಷ್ಟನೆ ನೀಡಿದರು. ಚಿತ್ರದಲ್ಲಿ ಅಜ್ಜಿಯ ಪಾತ್ರಕ್ಕೆ ಈ ಪದವನ್ನು ಬಳಸಲಾಗಿದೆ ಎಂದರು. ಅಜ್ಜಿ ಪಾತ್ರಧಾರಿ ರಾಶಿಯನ್ನು ಹಾಗೇ ಕರೆಯುತ್ತಾರೆ ಎಂದು ಹೇಳಿದರು. ಮೊದಲು ಅದೊಂದು ಮುದ್ದಾದ ಪದ ಎಂದು ಭಾವಿಸಿದ್ದೆ ಆದರೆ, ನಂತರ ಅದೊಂದು ಅವಾಚ್ಯ ಶಬ್ದ ಎಂದು ಅರಿತುಕೊಂಡೆ ಎಂದರು. ಪ್ರಸ್ತುತ, ರಾಶಿ ಖನ್ನಾ ಅವರ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. (ಏಜೆನ್ಸೀಸ್​)