ಸಿನಿವಾಣಿ

ರಣವೀರ್​ ಬೆನ್ನಲ್ಲೇ ನಟ ವಿಷ್ಣು ವಿಶಾಲ್​ ಬೆತ್ತಲೆ ಫೋಟೋಶೂಟ್​! ಪತ್ನಿಯೇ ಫೋಟೋಗ್ರಾಫರ್​​

ಚೆನ್ನೈ: ಬೆತ್ತಲೆ ಫೋಟೋಶೂಟ್​ ಮೂಲಕ ಬಾಲಿವುಡ್​ ನಟ ರಣವೀರ್​ ಸಿಂಗ್​ ಎಲ್ಲರ ಹುಬ್ಬೇರಿಸಿದ್ದಾರೆ. ಈ ವಿಚಾರ ಸಿನಿಮಾ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿರುವಾಗಲೇ ಮತ್ತೊಬ್ಬ ಸ್ಟಾರ್​ ನಟ ರಣವೀರ್​ ಅವರ ಹಾದಿಯನ್ನು ಅನುಸರಿಸಿದ್ದಾರೆ.

ಹೌದು, ತಮಿಳು ನಟ ವಿಷ್ಣು ವಿಶಾಲ್​ ಬೆತ್ತಲೆ ಫೋಟೋಗಳನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.​ ರಣವೀರ್​ ಮ್ಯಾಗಜಿನ್​ ಒಂದಕ್ಕೆ ಬೆತ್ತಲೆಯಾದರೆ, ಇಲ್ಲಿ ವಿಷ್ಣು ಅವರ ಬೆತ್ತಲೆ ಫೋಟೋಗಳನ್ನು ಅವರ ಪತ್ನಿ ಹಾಗೂ ಮಾಜಿ ಬ್ಯಾಡ್ಮಿಂಟನ್​ ಆಟಗಾರ್ತಿ ಜ್ವಾಲಾ ಗುಟ್ಟಾ ಅವರೇ ಸೆರೆಹಿಡಿದಿದ್ದಾರೆ. ವಿಷ್ಣು ಅವರು ರಣವೀರ್​ ಹಾದಿಯನ್ನು ಅನುಸರಿಸಿದ ಮೊದಲ ನಟ ಎನಿಸಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಫೋಟೋ ಶೇರ್​ ಮಾಡಿಕೊಂಡಿರುವ ವಿಷ್ಣು, ನಾನು ಕೂಡ ರಣವೀರ್​ ಸೃಷ್ಟಿ ಮಾಡಿದ ಟ್ರೆಂಡ್​ಗೆ ಸೇರಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಪತ್ನಿ, ಛಾಯಾಗ್ರಾಹಕಿ ಆದಾಗ ಎಂಬ ಶೀರ್ಷಿಕೆ ನೀಡಿದ್ದಾರೆ. ವಿಷ್ಣು ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾರೆ, ವಿಷ್ಣು ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರ ಮುಂದಿನ ಚಿತ್ರ 'ಮೋಹನ್​ದಾಸ್​' ಬಿಡುಗಡೆಗೆ ಸಿದ್ಧವಾಗಿದೆ. ಇದು ಸೈಕಾಲಜಿಕಲ್​ ಥ್ರಿಲ್ಲರ್​ ಸಿನಿಮಾ ಆಗಿದೆ. (ಏಜೆನ್ಸೀಸ್​)