ಹೈದರಾಬಾದ್: ಟಾಲಿವುಡ್ ಸೂಪರ್ಸ್ಟಾರ್ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಪ್ಯಾನ್ ಇಂಡಿಯಾ "ಲೈಗರ್" ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಬಿಡುಗಡೆಗೆ ತಯಾರಿ ನಡೆಸುತ್ತಿದೆ.
ಇತ್ತೀಚೆಗೆ ವಿಜಯ್ ಮತ್ತು ಅನನ್ಯಾ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅನನ್ಯಾ, ವಿಜಯ್ ಬಗ್ಗೆ ಅಚ್ಚರಿಯೆ ಕಾಮೆಂಟ್ ಮಾಡಿದ್ದಾರೆ. ವಿಜಯ್ ಓರ್ವ ಅತ್ಯುತ್ತಮ ಸಹನಟ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅನನ್ಯಾ, ಸಿನಿಮಾದಲ್ಲಿ ಕಾಣುವುದಕ್ಕಿಂತ ಸಿನಿಮಾದಿಂದಾಚೆಗೆ ವಿಜಯ್ ತುಂಬಾ ವಿಭಿನ್ನ ವ್ಯಕ್ತಿ.
ಒಮ್ಮೊಮ್ಮೆ ವಿಜಯ್ನನ್ನು ಕಂಡರೆ ಆಶ್ಚರ್ಯವಾಗುತ್ತದೆ. ಸಿನಿಮಾಗಳಲ್ಲಿ ಅವರ ಎಲ್ಲಾ ಪಾತ್ರಗಳು ಧೈರ್ಯಶಾಲಿಗಳು. ಆದರೆ, ಹೊರಗಡೆ ವಿಜಯ್ ಓರ್ವ ಅಂಜುಬುರುಕ. ಹೆದರಿಕೊಳ್ಳುವುದು ಜಾಸ್ತಿ. ಆದರೆ, ವಿಜಯ್ ಅವರು ಉತ್ತಮ ಸಹನಟ ಮತ್ತು ತನ್ನ ಜತೆ ಇರುವವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಾರೆ ಎಂದು ಹೇಳಿದರು.
ಇದೀಗ ವಿಜಯ್ ಕುರಿತು ಅನನ್ಯಾ ಹೇಳಿರುವ ಮಾತು ಹಾಟ್ ಟಾಪಿಕ್ ಆಗಿದೆ. ಅಂದಹಾಗೆ ಲೈಗರ್ ಸಿನಿಮಾವನ್ನು ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದು, ಧರ್ಮ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಆಗಸ್ಟ್ 25ರಂದು ಚಿತ್ರ ಬಿಡುಗಡೆ ಮಾಡಲು ಸಿನಿಮಾ ತಂಡ ಎದುರ ನೋಡುತ್ತಿದೆ. (ಏಜೆನ್ಸೀಸ್)