ಸಿನಿವಾಣಿ

ಈಕೆಯ ಅವತಾರ ಒಂದೆರಡಲ್ಲ... ಜೀನ್ಸ್​ ಮೇಲೆ ಒಳಉಡುಪು ಧರಿಸಿ ಬಂದ ಉರ್ಫಿ ಜಾವೇದ್​!

ಮುಂಬೈ: ಅತ್ಯಂತ ಕಡಿಮೆ ಉಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಪೋಸ್​ ಕೊಟ್ಟು ಖ್ಯಾತಿ ಗಳಿಸಲು ಹವಣಿಸುವ ಕೆಲವು ತಾರೆಗಳ ಪೈಕಿ ನಟಿ ಉರ್ಫಿ ಜಾವೇದ್‌ ಕೂಡ ಒಬ್ಬಳು.

ಇದಾಗಲೇ ಈಕೆ ತೊಟ್ಟಿರುವ ಡ್ರೆಸ್‌ಗಳಿಂದ ಟ್ರೋಲ್‌ ಆಗುತ್ತಿದ್ದಾಳೆ ಈ ಬೆಡಗಿ. ಆದರೆ ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಈಕೆಯದ್ದು ಎತ್ತಿದ ಕೈ. ಬಿಗ್​​ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಈಕೆ ಭಾರಿ ಪ್ರಸಿದ್ಧಿ ಪಡೆದಿದ್ದು, ಏನೇ ಮಾಡಿದರೂ ಸುದ್ದಿಯಾಗುತ್ತಿದ್ದಾಳೆ.

ಉರ್ಫಿ ಇದೀಗ ಮತ್ತೊಮ್ಮೆ ತನ್ನ ಬಟ್ಟೆಯಿಂದಲೇ ಸುದ್ದಿಯಾಗಿದ್ದಾಳೆ. ಏರ್​ಪೋರ್ಟ್​ನಲ್ಲಿ ಬಾಲಿವುಡ್​ ಫೋಟೋಗ್ರಾಫರ್ ಚಿತ್ರೀಕರಿಸಿದ ನಟಿಯ ವಿಡಿಯೋವನ್ನು​ ವೈರಲ್​ ಭಯಾನಿ ಎಂಬ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ ಉರ್ಫಿ, ಜೀನ್ಸ್​ ಮೇಲೆ ಪಾರದರ್ಶಕ ಒಳ ಉಡುಪು ಧರಿಸಿರುವುದನ್ನು ಕಾಣಬಹುದಾಗಿದೆ.

ಉರ್ಫಿಯ ವಿಚಿತ್ರ ಅವತಾರ ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಉರ್ಫಿ ಈ ರೀತಿ ಕೆಂಗಣ್ಣಿಗೆ ಗುರಿಯಾಗುವುದು ಇದೇ ಮೊದಲೇನಲ್ಲ. ಈ ಹಿಂದೆಯು ಅನೇಕ ಬಾರಿ ವಿಚಿತ್ರ ಉಡುಗೆ ತೊಟ್ಟು ಟೀಕಾಕಾರರ ಬಾಯಿಗೆ ಆಹಾರವಾಗಿದ್ದಾರೆ. (ಏಜೆನ್ಸೀಸ್​)