ಕೆಜಿಎಫ್​-2 ನೋಡಿದ ಅಭಿಮಾನಿಗೆ ಬಹುಮಾನವಾಗಿ ಸಿಕ್ತು ಬುಲೆಟ್​ ಬೈಕ್! ಯಶ್​ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ...

kgf
Published on

ಚಿಂತಾಮಣಿ: ಕೆಜಿಎಫ್​-2 ಸಿನಿಮಾ ನೋಡಿದ ಅಭಿಮಾನಿಯೊಬ್ಬರಿಗೆ ಬಹುಮಾನವಾಗಿ ಬುಲೆಟ್​ ಬೈಕ್​ ಒಲಿದಿದೆ. ಇದೀಗ ಯಶ್​ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ.

ಚಿಕ್ಕಬಳ್ಳಾಪುರದಲ್ಲಿ ನಗರದಲ್ಲಿ ಕೆಜಿಎಫ್​ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಮೊದಲ ಪ್ರದರ್ಶನದ ಟಿಕೆಟ್​ ಖರೀದಿ ಮಾಡಿದ ಚಿಂತಾಮಣಿಯ ಯಶ್​ ಅಭಿಮಾನಿ ಅಭಿಷೇಕ್​ ಅವರಿಗೆ ಬುಲೆಟ್​ ದ್ವಿಚಕ್ರವಾಹನ ಬಹುಮಾನವಾಗಿ ಲಭಿಸಿದೆ.

ಮೊದಲ ಪ್ರದರ್ಶನದ ಟಿಕೆಟ್​ ಖರೀದಿ ಮಾಡಿದವರಿಗೆ ಹಲವಾರು ಬಹುಮಾನಗಳನ್ನು ನೀಡುವ ಬಗ್ಗೆ ಚಿತ್ರತಂಡ ಘೋಷಣೆ ಮಾಡಿತ್ತು. ಅದರಂತೆ ಬುಧವಾರ(ಮೇ 4) ರಾತ್ರಿ ಬಂಪರ್​ ಬಹುಮಾನ ವಿತರಣೆ ಮಾಡಿದ್ದು, ಬೆಂಗಳೂರಿನ ವೈಟ್​ಪೀಲ್ಡ್​ನ ನಿವಾಸಿ ಯಶ್​ ಅಭಿಮಾನಿ ಅಭಿಷೇಕ್​ ಅವರು ಚಿಂತಾಮಣಿಗೆ ಬಂದು ಮೊದಲ ಪ್ರದರ್ಶನವನ್ನು ನೋಡಿದ್ದು, ಇದೀಗ ಅವರಿಗೆ ಬುಲೆಟ್​ ವಾಹನ ಲಭಿಸಿದೆ.

ಅಂಜನಿ ಚಿತ್ರಮಂದಿರ ಮಾಲೀಕರಾದ ವೆಂಕಟರೆಡ್ಡಿ ಮತ್ತು ಕಾರ್ತಿಕ್​ ಅವರು ಅಭಿಷೇಕ್​ ಅವರಿಗೆ ಬೈಕ್​ನ ಕೀ ವಿತರಿಸಿ ಶುಭ ಕೋರಿದರು.
ಅಂಜನಿ ಚಿತ್ರಮಂದಿರ ಮಾಲೀಕರಾದ ವೆಂಕಟರೆಡ್ಡಿ ಮತ್ತು ಕಾರ್ತಿಕ್​ ಅವರು ಅಭಿಷೇಕ್​ ಅವರಿಗೆ ಬೈಕ್​ನ ಕೀ ವಿತರಿಸಿ ಶುಭ ಕೋರಿದರು.

ಅಂಜನಿ ಚಿತ್ರಮಂದಿರ ಮಾಲೀಕರಾದ ವೆಂಕಟರೆಡ್ಡಿ ಮತ್ತು ಕಾರ್ತಿಕ್​ ಅವರು ವಿಜೇತರಿಗೆ ಬೈಕ್​ನ ಕೀ ವಿತರಿಸಿ ಶುಭ ಕೋರಿದ್ದಾರೆ. ಯಶ್​ ಅಭಿಮಾನಿಗಳ ಸಂಘದ ಜನಾರ್ದನ್​, ಕುಮಾರ್​, ಶಿವರಾಜ್​ ಮತ್ತು ಅಂಜನಿ ಚಿತ್ರಮಂದಿರದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net