ಸಿನಿವಾಣಿ

ಸಿಂಬು ಮದುವೆ ಫಿಕ್ಸ್​! ಶೀಘ್ರದಲ್ಲೇ ದಿನಾಂಕ ಘೋಷಣೆ... ಕಾಲಿವುಡ್​ ನಟನ ಮನಸ್ಸು ಗೆದ್ದು ಚೆಲುವೆ ಯಾರು?

ಚೆನೈ: ತಮಿಳು ಚಿತ್ರರಂಗದ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಸಿಂಬು ಮತ್ತೆ ಪ್ರೀತಿಯಲ್ಲಿದ್ದಾರೆ ಎಂಬ ಮಾತು ಕೆಲವು ದಿನಗಳಿಂದ ಕೇಳಿಬರುತ್ತಿದೆ. ಈ ಹಿಂದೆಯೇ ನಯನತಾರಾ, ಹನ್ಸಿಕಾ, ಸನಾ ಖಾನ್, ವರಲಕ್ಷ್ಮಿ, ತ್ರಿಶಾ, ಆಂಡ್ರಿಯಾ ಜತೆ ಸಿಂಬು ಹೆಸರು ಕೇಳಿಬಂದಿತ್ತು. ಆದರೆ, ಕಾಲಾನಂತರ ಅದು ಮರೆಯಾಯಿತು. ಇದೀಗ ಸಿಂಬು ಅವರ ಹೆಸರು ಮತ್ತೊಂದು ನಾಯಕಿಯ ಜತೆಗೆ ತುಳುಕು ಹಾಕಿಕೊಂಡಿದೆ.

ಇತ್ತೀಚೆಗೆ, ನಟ ಸಿಂಬು ಅವರ ‘ಈಶ್ವರನ್‘ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನಿಧಿ ಅಗರ್ವಾಲ್ ನಟಿಸಿದ್ದರು. ಇನ್ನು, ಈ ಚಿತ್ರವೇ ಇವರಿಬ್ಬರ ನಡುವಿನ ಪ್ರೀತಿಗೆ ಬುನಾದಿ ಎನ್ನಲಾಗಿದೆ. ಚಿತ್ರದ ಬಿಡುಗಡೆಯ ನಂತರ ಇವರಿಬ್ಬರು ಒಟ್ಟಗೆ ಓಡಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಜೋಡಿ ಈಗಾಗಲೇ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದು, ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ನಿಧಿ ಕುಟುಂಬ ಈ ವಿಚಾರವನ್ನು ತಳ್ಳಿಹಾಕಿತ್ತು.

ಆದರೆ, ತಾಜಾ ಬೆಳವಣಿಗೆ ಏನೆಂದರೆ, ಸಿಂಬು ಮತ್ತು ನಿಧಿ ಅಗರ್ವಾಲ್ ತಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಬ್ಬರು ಮದುವೆಯಾಲಿದ್ದಾರೆ ಎಂಬ ಮಾತುಗಳು ಕಾಲಿವುಡ್​ ಸಿನಿ ಗಲ್ಲಿಯಲ್ಲಿ ಕೇಳಿಬರುತ್ತಿದೆ.

ಶೀಘ್ರದಲ್ಲೇ ಇಬ್ಬರು ಮದುವೆ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ. 2022ರಲ್ಲೇ ಇಬ್ಬರು ವೈವಾಹಿಕ ಜೀವನವನ್ನು ಆರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿಂಬು ಅಭಿಮಾನಿಗಳು ಮದುವೆ ದಿನಾಂಕ ಘೋಷಣೆಗೆ ಎದುರು ನೋಡುತ್ತಿದ್ದಾರೆ. ಒಂದು ವೇಳೆ ಇದು ನಿಜವಾದರೆ, ಇದುವರೆಗೂ ಹರಿದಾಡಿದ್ದ ವದಂತಿ ನಿಜವಾಗಲಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ ಬಿಡುಗಡೆಯಾದ ವೆಂಕಟ್​ ಪ್ರಭು ನಿರ್ದೇಶನದ ಮಾನಾಡು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದಲ್ಲದೆ, ವಿಭಿನ್ನ ಕಥಾಹಂದರದ ಮೂಲಕ ಸಿನಿ ಪ್ರೇಮಿಗಳ ಮನಸ್ಸನ್ನು ಕದ್ದಿದೆ. ಸಾಕಷ್ಟು ಸೋಲುಗಳನ್ನು ಕಂಡಿದ್ದ ಸಿಂಬುಗೆ ಮಾನಾಡು ಸಿನಿಮಾ ಒಳ್ಳೆಯ ಕಮ್​ ಬ್ಯಾಕ್​ ನೀಡಿದೆ. ಸದ್ಯ ಸಿಂಬು ಅವರು ಗೌತಮ್​ ವಾಸುದೇವ್​ ಮೆನನ್​ ನಿರ್ದೇಶನದ "ವೆಂಧು ಥನಿಂದತು ಕಾದು" ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)