ಸಿನಿವಾಣಿ

ಬಿಕಿನಿ ಫೋಟೋ-ವಿಡಿಯೋ ಹರಿಬಿಟ್ಟ ನಟಿ ಶ್ವೇತಾ ಪ್ರಸಾದ್​! ನೆಟ್ಟಿಗರ ಕಾಮೆಂಟ್ ಹೀಗಿದೆ ನೋಡಿ

ಬೆಂಗಳೂರು: ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿ ಸಿನಿಮಾದಲ್ಲಿಯೂ ಗುರುತಿಸಿಕೊಂಡಿರುವ ನಟಿ ಶ್ವೇತಾ ಪ್ರಸಾದ್ ಅವರ ಹಾಟ್​ ಬಿಕಿನಿ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಶ್ವೇತಾ ಆಗಾಗ ತಮ್ಮ ಹಾಟ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಕಡಲ ಕಿನಾರೆ ಒಂದರಲ್ಲಿ ಕಿತ್ತಳೆ ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋವನ್ನು ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಶ್ವೇತಾ ಹರಿಬಿಟ್ಟಿದ್ದಾರೆ. ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈವರೆಗೂ 25 ಸಾವಿರಕ್ಕೂ ಹೆಚ್ಚು ಲೈಕ್ಸ್​​ಗಳು ಬಂದಿವೆ.

ಬಿಕಿನಿ ವಿಡಿಯೋವನ್ನೂ ಶ್ವೇತಾ ಹರಿಬಿಟ್ಟಿದ್ದಾರೆ. ಈಗಾಗಲೇ 21 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನಟಿಯ ಹಾಟ್​ ಅವತಾರ ಕಂಡು ಅಭಿಮಾನಿಗಳು ಮೂಕವಿಸ್ಮಿತರಾಗಿದ್ದಾರೆ. ಅಲೆಗು ಇಷ್ಟ ನಿನ್ನ ಮುತ್ತಿಟ್ಟು ಹೋಗೋದು, ಅದೃಷ್ಟವೇನೋ ಅಲೆಗಳದು. ಆದರೆ, ಕಂಗಾಲು ಹೃದಯ ನಮ್ಮ ಹುಡುಗರುದು ಎಂದು ನೆಟ್ಟಿಗರೊಬ್ಬರು ಶ್ವೇತಾ ಮೈಮಾಟ ನೋಡಿ ಕಾಮೆಂಟ್​ ಮಾಡಿದ್ದಾರೆ. ಆ ನೀರು ನಾನಾದ್ರೂ ಆಗಬಾರದಿತ್ತ ಅಂತಾ ಮತ್ತೊಬ್ಬ ನೆಟ್ಟಿಗ ಕಮೆಂಟಿಸಿದ್ದಾರೆ.

ಅಂದಹಾಗೆ ಶ್ವೇತಾ ಅವರು ಕಿರಿತೆರೆ ಮತ್ತು ಹಿರಿತೆರೆ ಎರಡರಲ್ಲೂ ಖ್ಯಾತಿ ಗಳಿಸಿದ್ದಾರೆ. ಜೀ ಕನ್ನಡದಲ್ಲಿ ಮೂಡಿಬಂದ ಶ್ರೀರಸ್ತು ಶುಭಮಸ್ತು ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ರಾಧಾ ರಮಣ ಧಾರವಾಹಿಯಲ್ಲಿ ತಮ್ಮ ಪಾತ್ರದ ಮೂಲಕವೇ ಶ್ವೇತಾ ಮನೆ ಮಾತಾದಾರು. ಕಳ್ಬೆಟ್ಟದ ದರೋಡೆಕೋರರು ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 2019ರ ಬಿಗ್​ಬಾಸ್​ ಸೀಸನ್​ನಲ್ಲಿ ಸೆಲೆಬ್ರಿಟಿ ಸ್ಪರ್ಧಿಯಾಗಿದ್ದರು. ಶ್ವೇತಾ ಅವರು ಆರ್​ಜೆ ಪ್ರದೀಪ್​ ಅವರ ಮುದ್ದಿನ ಮಡದಿಯಾಗಿದ್ದಾರೆ.