ಸಿನಿವಾಣಿ

ನೀವು ಒಂಟಿಯಾಗೇ ಸಾಯುತ್ತೀರಿ... ನೆಟ್ಟಿಗನ ಕಾಮೆಂಟ್​ಗೆ ಸಮಂತಾ ಕೊಟ್ಟ ಖಡಕ್​ ಉತ್ತರ ಹೀಗಿತ್ತು...

ಹೈದರಾಬಾದ್​: ನಟ ನಾಗಚೈತನ್ಯ ಜತೆ ಡಿವೋರ್ಸ್​ ಪಡೆದುಕೊಂಡಾಗಿನಿಂದ ಸೌತ್​ ಬ್ಯೂಟಿ ಸಮಂತಾ ಆಗಾಗ ಅನೇಕ ಕಾರಣಗಳಿಂದಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ಸಮಂತಾ ಅವರು ಟ್ರೋಲಿಗರ ಟಾರ್ಗೆಟ್​ ಆಗಿದ್ದಾರೆ ಎಂಬಂತೆ ಕಾಣುತ್ತಿದೆ. ಏಕೆಂದರೆ, ಯಾವುದೇ ವಿಚಾರ ಬಂದಾಗಲೂ ಟ್ರೋಲಿಗರು ಸುಖಾಸುಮ್ಮನೇ ಸಮಂತಾರನ್ನು ಕೆಣಕುತ್ತಿರುತ್ತಾರೆ. ಆದರೆ, ಸ್ಯಾಮ್​ ಏನೋ ಸುಮ್ಮನೇ ಕೂರುವುದಿಲ್ಲ. ಅವರು ಕೂಡ ಖಡಕ್​ ತಿರುಗೇಟು ನೀಡುತ್ತಿರುತ್ತಾರೆ.

ಸಮಂತಾರ ಬಟ್ಟೆ, ಸಿನಿಮಾ ಸೇರಿದಂತೆ ವೈಯಕ್ತಿಕ ಜೀವನವನ್ನು ಟಾರ್ಗೆಟ್​ ಮಾಡಿ ಟ್ರೋಲ್​ ಮಾಡಲಾಗುತ್ತಿದೆ. ಇದೀಗ ಇನ್ನಷ್ಟು ಕೀಳುಮಟ್ಟಕ್ಕೆ ಇಳಿದಿರುವ ಟ್ರೋಲಿಗರು "ಸಮಂತಾ ಅವರು ಒಂಟಿಯಾಗೇ ಸಾಯುತ್ತಾರೆ" ಎಂದು ಟ್ರೋಲ್​ ಮಾಡಿದ್ದಾರೆ.

ನಿನ್ನೆ (ಮೇ.27) ಸಮಂತಾ ಅವರು ವರ್ಕೌಟ್​ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ತಮ್ಮ ಶ್ವಾನ ಜೊತೆಗಿದ್ದಾರೆ. ಫೋಟೋಗೆ ಮುಂಜಾನೆ ಏಳುವುದು ಮತ್ತು ಪ್ರೀತಿಸುವುದನ್ನು ತಪ್ಪಿಸಿಕೊಂಡಿದ್ದೇನೆ" ಎಂಬ ಅಡಿಬರವನ್ನು ನೀಡಿದ್ದಾರೆ.

ಸಮಂತಾ ಅವರ ಪೋಸ್ಟ್​ಗೆ ಸಾಕಷ್ಟು ಮಂದಿ ಮೆಚ್ಚುಗೆಯ ಕಾಮೆಂಟ್​ ಹಾಕಿದ್ದಾರೆ, ಓರ್ವ ಮಾತ್ರ ನೀವು ನಾಯಿ ಮತ್ತು ಬೆಕ್ಕಿನೊಂದಿಗೆ ಜೀವನವನ್ನು ಅಂತ್ಯಗೊಳಿಸುತ್ತೀರಾ ಎಂದಿದ್ದಾನೆ. ಇದರರ್ಥ ನೀವು ಒಂಟಿಯಾಗಿಯೇ ಸಾಯುತ್ತೀರಾ ಎಂದು ನೆಟ್ಟಿಗ ಹೇಳಿದ್ದಾನೆ. ಇದಕ್ಕೆ ಖಡಕ್​ ಪ್ರತಿಕ್ರಿಯೆ ನೀಡಿರುವ ಸಮಂತಾ, ಒಂದು ವೇಳೆ ಹಾಗೇ ನಡೆದರೆ, ನನ್ನಷ್ಟಕ್ಕೆ ನಾನು ಅದೃಷ್ಟವಂತೆ ಎಂದು ಪರಿಗಣಿಸುತ್ತೇನೆ ಎಂದಿದ್ದಾರೆ. ಸಮಂತಾರ ಉತ್ತರ ನೋಡಿ ಅನೇಕರು ಫಿದಾ ಆಗಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.

ಸಮಂತಾ ಉತ್ತರ ನೀಡಿದ ಕೆಲವೇ ನಿಮಿಷಗಳಲ್ಲಿ ಹೆದರಿದ ನೆಟ್ಟಿಗ ತನ್ನ ಕಾಮೆಂಟ್​ ಟ್ವೀಟ್ ಅನ್ನೇ ಡಿಲೀಟ್​ ಮಾಡಿದ್ದಾನೆಂದು ವರದಿಯಾಗಿದೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಮಂತಾ ಅವರು ಇತ್ತೀಚೆಗೆ ವಿಜಯ್ ದೇವರಕೊಂಡ ಅವರೊಂದಿಗೆ ಮುಂಬರುವ "ಕುಶಿ" ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. (ಏಜೆನ್ಸೀಸ್​)