More

    ವಿವಿ ವಿಶೇಷ: ವರ್ಷಕ್ಕೊಬ್ಬರಿಗೆ ಶಿಕ್ಷೆ!  ವಿಚಾರಣೆ ಹಂತದಲ್ಲೇ ಕೊಳೆಯುವ ಇ.ಡಿ ಪ್ರಕರಣಗಳು- ದಾಳಿ ಭರ್ಜರಿ ಶಿಕ್ಷೆ ಡೋಂಟ್​ವರಿ!

    | ಕೀತಿರ್ನಾರಾಯಣ ಸಿ. ಬೆಂಗಳೂರು

    ದಾಳಿಗಳ ಮೇಲೆ ದಾಳಿಗಳ ನಡೆಸುವ ಮೂಲಕ ಕಪ್ಪುಹಣ ದಂಧೆಕೋರರ ಎದೆಯಲ್ಲಿ ಭಯ ಹುಟ್ಟಿಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ), ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಮಾತ್ರ ವಿಲವಾಗಿದೆ. ಅಕ್ರಮ ಆಸ್ತಿ ಸಂಪಾದನೆ ಹಾಗೂ ಹಣ ವರ್ಗಾವಣೆ ಕುರಿತಂತೆ ಇಡಿ ಕಳೆದ 22 ವರ್ಷಗಳಲ್ಲಿ ಸಾವಿರಾರು ಪ್ರಕರಣ ದಾಖಲಿಸಿದ್ದರೂ, ಕಾರಾಗೃಹ ಸಜೆಯಾಗಿರುವುದು 23 ಜನರಿಗೆ ಮಾತ್ರ!

    ಜಾರಿ ನಿರ್ದೇಶನಾಲಯ 2005 ಜು.1ರಿಂದ 2022ರ ಫೆ. 28ರವರೆಗೆ ಬರೋಬ್ಬರಿ 3086 ಕಡೆ ದಾಳಿ ನಡೆಸಿ, ಶೋಧ ನಡೆಸಿದೆ. 4,964 ಇಸಿಐಆರ್​ (ಎನ್​ಫೋರ್ಸ್​ಮೆಂಟ್​ ಕೇಸ್​ ಇನ್ಫಮೇರ್ಷನ್​ ರಿಪೋರ್ಟ್​) ದಾಖಲಿಸಿದೆ. ಪ್ರಾಸಿಕ್ಯೂಷನ್​ 943 ಮೊಕದ್ದಮೆಗಳನ್ನು ಹೂಡಿದ್ದು, ಈ ಎಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ಬೇರೆಬೇರೆ ಹಂತದಲ್ಲಿ ವಿಚಾರಣೆಯಲ್ಲಿವೆ. ಈವರೆಗೆ 23 ಆರೋಪಿಗಳಿಗಷ್ಟೇ ಶಿಕ್ಷೆಯಾಗಿದ್ದು, 1 ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಮೆರಿಟ್​ ಮೇಲೆ ಆರೋಪಿಯನ್ನು ಖುಲಾಸೆ ಮಾಡಲಾಗಿದೆ.

    ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್​ಎ) ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಎಂಎ) ಅನ್ವಯ ಇಡಿ ತನಿಖೆ ನಡೆಸುತ್ತದೆ. ಆದಾಯ ತೆರಿಗೆ ಇಲಾಖೆ, ಸಿಬಿಐ ಸೇರಿ ಸ್ಥಳಿಯ ತನಿಖಾ ಸಂಸ್ಥೆಗಳು ಪತ್ತೆಹಚ್ಚುವ ಯಾವುದೇ ಅಪರಾಧ ಪ್ರಕರಣಗಳಲ್ಲಿ ಅಕ್ರಮ ಹಣ ವಹಿವಾಟು ನಡೆದಿರುವುದು ಕಂಡು ಬಂದರೆ ಇಡಿ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಎಂಟ್ರಿ ಕೊಟ್ಟು ಪ್ರಕರಣದ ತನಿಖೆ ನಡೆಸಲು ಅವಕಾಶ ಇದೆ.

    18,000 ೆಮಾ ಕೇಸ್​: ಅಕ್ರಮ ಹಣಕಾಸು ವರ್ಗಾವಣೆಗಿಂತ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ (ಎಎಫ್​ಇಎಂಎ) 2011ರ ಏ.1ರಿಂದ 2020ರ ಮಾ.31ರವರೆಗೆ 18,003 ಪ್ರಕರಣಗಳನ್ನು ಇಡಿ ತನಿಖೆ ನಡೆಸಿದೆ. 4,312 ಕೋಟಿ ರೂ. ದಂಡ ವಿಧಿಸಿದೆ. 2017-18ರಲ್ಲಿ 3,622, 2019-20ರಲ್ಲಿ 3,360 ಹಾಗೂ 2020-21ರಲ್ಲಿ 2,774 ಪ್ರಕರಣ ದಾಖಲಾಗಿವೆ. ಕೋವಿಡ್​ ಕಾರಣಕ್ಕೆ 2020-21ರಲ್ಲಿ ತನಿಖಾ ಸಂಸ್ಥೆಗಳು ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿತ್ತು.

    5,551 ಕೋಟಿ ಜಪ್ತಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಶಿಓಮಿ ಟೆಕ್ನಾಲಜಿ ಇಂಡಿಯಾ ಸಂಸ್ಥೆಗೆ ಸೇರಿದ 5,551.27 ಕೋಟಿ ರೂ.ಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಇಡಿ ಜಪ್ತಿ ಆದೇಶ ಪ್ರಶ್ನಿಸಿ ಶಿಓಮಿ ಹೈಕೋರ್ಟ್​ ಮೆಟ್ಟಿಲೇರಿದ್ದು, ಮುಟ್ಟುಗೋಲು ಪ್ರಕ್ರಿಯೆಗೆ ಜೂ.1ರವರೆಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ.

    ಇಡಿ ಎಲ್ಲೆಲ್ಲಿದೆ?: ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಮುಂಬೈ, ಚೆನ್ನೈ, ಚಂಡೀಗಢ, ಕೋಲ್ಕತ್ತಾದಲ್ಲಿ ಪ್ರಾದೇಶಿಕ ಕಚೇರಿಗಳಿವೆ. ಬೆಂಗಳೂರು, ಅಹಮದಾಬಾದ್​, ಕೊಚ್ಚಿ, ಪಣಜಿ, ಗುವಾಹಟಿ, ಹೈದರಾಬಾದ್​, ಜೈಪುರ, ಜಲಂಧರ್​, ಲಖನೌ, ಪಟನಾ ಹಾಗೂ ಶ್ರೀನಗರದಲ್ಲಿ ವಲಯ ಕಚೇರಿಗಳಿವೆ.

    1 ಲ ಕೋಟಿ ರೂ. ಆಸ್ತಿ ಜಪ್ತಿ
    2004ರಿಂದ 2014ರವರೆಗೆ ವಿವಿಧೆಡೆ ಶೋಧ ನಡೆಸಿರುವ ಇಡಿ, 5,346 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡು, 104 ಪ್ರಾಸಿಕ್ಯೂಷನ್​ ಮೊಕದ್ದಮೆಗಳನ್ನು ಹೂಡಿದೆ. 2014 ರಿಂದ 2022ರವರೆಗೆ 2,974 ಕಡೆ ಶೋಧ ನಡೆಸಿದ್ದು, ಬರೋಬ್ಬರಿ 95,432 ಕೋಟಿ ಸ್ವತ್ತು ಜಪ್ತಿ ಮಾಡಿದ್ದು, 839 ಪ್ರಾಸಿಕ್ಯೂಷನ್​ ಪ್ರಕರಣಗಳನ್ನು ದಾಖಲು ಮಾಡಿದೆ. ಒಟ್ಟಾರೆಯಾಗಿ 2004ರಿಂದ 2022ರ ಅವಧಿಯಲ್ಲಿ 3,086 ಕಡೆ ದಾಳಿ ನಡೆಸಿ, 1,00,778 ಕೋಟಿ ಚರ ಮತ್ತು ಸ್ತಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

    ಹಳೆಯ ಕೇಸ್​ ಹೆಚ್ಚಳ
    * 2014ರ ನಂತರ ಇಡಿ ಹೆಚ್ಚು ಸಕ್ರಿಯವಾಗಿದ್ದು, ಆರೋಪಿಗಳ ಮೇಲಿನ ದಾಳಿ ಸಂಖ್ಯೆ ಹೆಚ್ಚಾಗಿದೆ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಅಕ್ರಮ ಹಣಕಾಸು ವಹಿವಾಟು ನಿಯಂತ್ರಣಕ್ಕೆ ಹೆಚ್ಚಿನ ನಿಗಾ

    * ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತನಿಖಾ ಏಜೆನ್ಸಿ ಜತೆ ನಿರಂತರವಾಗಿ ಮಾಹಿತಿ ವಿನಿಮಯ, ಒಂದೇ ಪ್ರಕರಣದಲ್ಲಿ ಹಲವರು ಭಾಗಿಯಾಗಿ ರುವುದರಿಂದ ಸಾಕ್ಷ್ಯ ಸಂಗ್ರಹ ಕಠಿಣ

    * ಆರೋಪಿಗಳಿಗೆ ಸೇರಿದ ಸ್ಥಳಗಳ ಗುರುತಿಸಿ, ಹಲವು ಬಾರಿ ದಾಳಿ ನಡೆಸಿ ಅಧಿಕಾರಿಗಳಿಂದ ಪರಿಶೀಲನೆ

    ಶಿಕ್ಷೆಯಾಗದಿರಲು ಕಾರಣವೇನು?
    * ತ್ವರಿತ ಹಾಗೂ ಪರಿಣಾಮಕಾರಿ ತನಿಖೆಗೆ ಅಗತ್ಯವಿರುವ ಅಧಿಕಾರಿ, ಸಿಬ್ಬಂದಿ ಕೊರತೆ, ಆರೋಪ ಸಾಬೀತುಪಡಿಸಲು ಗಟ್ಟಿ ಸಾಾಧಾರ ಸಂಗ್ರಹಿಸುವಲ್ಲಿ ವೈಲ್ಯ
    * ಆಡಳಿತಾರೂಢರು ಪ್ರತಿಪಗಳನ್ನು ಹತ್ತಿಕ್ಕಲು ಬಳಕೆ ಆರೋಪ
    * ಪ್ರತ್ಯೇಕ ಇಡಿ ನ್ಯಾಯಾಲಯವಿದ್ದರೂ ನಿಧಾನಗತಿ ವಿಚಾರಣೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ ತನಿಖಾ ಸಂಸ್ಥೆಗಳಿಂದ ಪೂರಕ ಸಹಕಾರ ಕೊರತೆ
    ಇಡಿ ಕೆಲಸವೇನು?
    * ರಾಜ್ಯ, ಕೇಂದ್ರ ಗುಪ್ತಚರ ಇಲಾಖೆ ಮೂಲಕ ಫೆಮಾ ಕಾಯ್ದೆ ಉಲ್ಲಂ ನೆಯ ಬಗ್ಗೆ ಮಾಹಿತಿ ಪಡೆದು ದೂರು ದಾಖಲಿಸಿಕೊಳ್ಳುವುದು
    * ವಿದೇಶಿ ವಿನಿಮಯದ ಹವಾಲಾ ದಂಧೆ, ಬ್ಲ್ಯಾಕ್​ಮನಿ ವಹಿವಾಟಿನ ಬಗ್ಗೆ ನಿರಂತರವಾಗಿ ನಿಗಾ ವಹಿಸುವುದು
    * ಪಿಎಂಎಲ್​ಎ, ಎಫ್ಇಎಂಎ ಅನ್ವಯ ಆರೋಪಿಗಳ ಪತ್ತೆ, ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ, ಆಸ್ತಿ ಜಪ್ತಿ, ಆರೋಪಿಗಳ ಬಂಧಿಸುವುದು
    * ಆಥಿರ್ಕ ಕಾನೂನು ಉಲ್ಲಂನೆಯಾಗಿ ರುವುದು ತಿಳಿದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ

    ರಾಜ್ಯದ ಕೇಸ್​ಗಳ ಇಡಿ ತನಿಖೆ

    = ದೆಹಲಿ ಸಪ್ಧರ್​ಜಂಗ್​ ಫ್ಲ್ಯಾಟ್‌ನಲ್ಲಿ 8.59 ಕೋಟಿ ರೂ. ಪತ್ತೆಯಾದ ಡಿ.ಕೆ.ಶಿವಕುಮಾರ್​ ಕೇಸ್​
    = ಉದ್ಯಮಿ ವಿಜಯ್​ ಮಲ್ಯ ಬ್ಯಾಂಕ್​ಗಳಿಂದ 9,000 ಕೋಟಿ ಸಾಲ ಪಡೆದು ಪರಾರಿ ಪ್ರಕರಣ
    = ಅಂತಾರಾಷ್ಟ್ರೀಯ ಹ್ಯಾಕರ್​ ಶ್ರೀಕೃಷ್ಣನ ಬಹುಕೋಟಿ ಬಿಟ್​ ಕಾಯಿನ್​ ವರ್ಗಾವಣೆ ಹಗರಣ
    = 107 ಕೋಟಿ ಅಕ್ರಮ ಹಣ ವರ್ಗಾವಣೆ. ಅಲಯನ್ಸ್​ ವಿವಿ ಮಧುಕರ್​ ಅಂಗೂರ್​ ಪ್ರಕರಣ
    = ಗುರುರಾವೇಂದ್ರ ಕೋ ಆಪರೇಟಿವ್​ ಬ್ಯಾಂಕ್​ ಹಗರಣ. 45 ಕೋಟಿ ಚರ-ಸ್ತಾರಸ್ತಿ ಜಪ್ತಿ
    = ಐಎಂಎ ಬಹುಕೋಟಿ ವಂಚನೆ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts