ಹೈದರಾಬಾದ್: ನಟ ನಾಗಚೈತನ್ಯ ಜತೆ ಡಿವೋರ್ಸ್ ಪಡೆದುಕೊಂಡಾಗಿನಿಂದ ಸೌತ್ ಬ್ಯೂಟಿ ಸಮಂತಾ ಭಾರೀ ಸುದ್ದಿಯಲ್ಲಿದ್ದಾರೆ. ಅವರ ಪ್ರತಿಯೊಂದು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸ್ಯಾಮ್ ಏನೇ ಮಾಡಿದರೂ ಅದು ತಕ್ಷವೇ ಸುದ್ದಿಯಾಗುತ್ತಿದೆ.
ಡಿವೋರ್ಸ್ ಬಳಿಕ ಸಂಪೂರ್ಣ ಸಿನಿಮಾ ಕಡೆ ಸಮಂತಾ ದೃಷ್ಟಿ ನೆಟ್ಟಿದ್ದು, ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಆದರೆ, ಇದೀಗ ಸಮಂತಾ ಮಾಡಿರುವ ಟ್ವೀಟ್ ಒಂದು ನೆಟ್ಟಿಗರ ಜತೆಗೆ ಸಿನಿ ಮಂದಿಯ ತಲೆಗೂ ಹುಳ ಬಿಟ್ಟಿದೆ. ಸಮಂತಾ ಸದ್ಯ ಟ್ರೋಲ್ ಸಹ ಆಗಿಲ್ಲ ಮತ್ತು ಯಾವುದೇ ವಿವಾದವೂ ಆಗಿಲ್ಲ. ಆದರೂ, ಸಮಂತಾ ಈ ರೀತಿ ಟ್ವೀಟ್ ಯಾಕೆ ಮಾಡಿದ್ರೂ ಅಂತಾ ನೆಟ್ಟಿಗರು ಗೊಂದಲಕ್ಕೀಡಾಗಿದ್ದಾರೆ. ‘
ನನ್ನ ಮೌನವೇ ನನ್ನ ಅಜ್ಞಾನ ಎಂದು ಭಾವಿಸಬೇಡಿ. ನಾನು ಮೌನವಾಗಿದ್ದರೆ ಎಲ್ಲವನ್ನು ಸ್ವೀಕರಿಸುತ್ತೇನೆಂಬ ಅರ್ಥವಲ್ಲ ಮತ್ತು ನನ್ನ ದಯಯೇ ನನ್ನ ದುರ್ಬಲವಲ್ಲ. ಕರುಣೆಗೆ ಒಂದು ಕೊನೆ ಇರುತ್ತದೆ. ಇದನಷ್ಟೇ ಹೇಳಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದೀಗ ಸಮಂತಾ ಅವರ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಾರನ್ನು ಉದ್ದೇಶಿಸಿ ಈ ಟ್ವೀಟ್ ಮಾಡಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ. ಯಾರಾದರೂ ಸಮಂತಾರನ್ನು ಮತ್ತೆ ಟ್ರೋಲ್ ಮಾಡಿದ್ದಾರಾ? ಯಾರಾದರೂ ಸಮಂತಾಗೆ ಏನಾದರೂ ಹೇಳಿದರಾ? ಎಂದು ಸಮಂತಾ ಟ್ವೀಟ್ ಅನ್ನು ಶೇರ್ ಮಾಡುವ ಮೂಲಕ ಭಾರೀ ಚರ್ಚೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್)