ನವದೆಹಲಿ: ನಟಿ ಜೆನಿಲಿಯಾ ಡಿಸೋಜಾರನ್ನು "ಅಶ್ಲೀಲ ಆಂಟಿ" ಎಂದು ಕರೆದ ನೆಟ್ಟಿಗನಿಗೆ ಜೆನಿಲಿಯಾ ಪತಿ ನಟ ರಿತೇಶ್ ದೇಶ್ಮುಖ್ ನೀತಿ ಪಾಠ ಮಾಡಿದ್ದಾರೆ.
ತಾರಾ ದಂಪತಿ ಇತ್ತೀಚೆಗಷ್ಟೇ ಅರ್ಬಾಜ್ ಖಾನ್ ಅವರ 'ಪಿಂಚ್' ಟಾಕ್ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ಅರ್ಬಾಜ್ ಖಾನ್ ರಿತೇಶ್ ಮತ್ತು ಜೆನಿಲಿಯಾ ಅವರ ಸಾಮಾಜಿಕ ಜಾಲತಾಣ ಖಾತೆಯಲ್ಲಿನ ಕೆಲ ಕಾಮೆಂಟ್ಸ್ಗಳನ್ನು ಓದಿದರು. ಅದರಲ್ಲಿ ಒಂದು ಕಾಮೆಂಟ್ನಲ್ಲಿ ಜೆನಿಲಿಯಾರ ವಯಸ್ಸನ್ನು ಗುರಿಯಾಗಿಸಿ ಆಕೆಯನ್ನು ಆಂಟಿ ಎಂದು ಕರೆಯಲಾಗಿತ್ತು. ಅಲ್ಲದೆ, ಯಾವಾಗಲೂ ಓವರ್ ಆ್ಯಕ್ಟಿಂಗ್ ಮಾಡುತ್ತಾರೆಂದು ಟೀಕಿಸಲಾಗಿತ್ತು.
ಕಾಮೆಂಟ್ ಮಾಡಿದವನನ್ನು ಉದ್ದೇಶಿಸಿ ಉತ್ತರಿಸಿದ ಜೆನಿಲಿಯಾ, ಅವರು ಮನೆಯಲ್ಲಿ ಒಳ್ಳೆಯ ದಿನವನ್ನು ಹೊಂದಿದ್ದಾರೋ ನನಗೆ ತಿಳಿದಿಲ್ಲ. ಅಸಭ್ಯವಾದ ಪಾತ್ರಗಳಲ್ಲಿ ನಾನೇನು ಹೆಚ್ಚಾಗಿ ನಟಿಸಿಲ್ಲ. ನಾನು ಯಾವಾಗಲೋ ಮದುವೆಯಾಗಿದ್ದೇನೆ, ನೀವು ಮನೆಗೆ ಕರೆದುಕೊಂಡು ಹೋಗಲು ಇಷ್ಟಪಡುವಂತಹ ಸಭ್ಯ ಹುಡುಗಿ ನಾನು ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ರಿತೇಶ್ ಕೂಡ ಪ್ರತಿಕ್ರಿಯೆ ನೀಡಿದರು. ಅದಕ್ಕು ಮುನ್ನ ನೆಟ್ಟಿಗನ ಹೆಸರೇನು ಎಂದು ಕೇಳಿದರು. ಯೋಗದ ಪ್ರೊಫೈಲ್ ಚಿತ್ರದೊಂದಿಗೆ ಶಾರ್ಟ್ ನೇಮ್ ಇದೆ ಎಂದು ಅರ್ಬಾಜ್ ಉತ್ತರಿಸಿದರು. ಚಿತ್ರದಲ್ಲಿರುವಂತೆ ಯೋಗವನ್ನು ಅವರು ಪ್ರತಿದಿನ ಅಭ್ಯಾಸ ಮಾಡುವುದು ಒಳಿತು. ಅದರಲ್ಲೂ ಕಪಾಲಭಾತಿ ಮತ್ತು ಶವಾಸನವನ್ನು ಮರೆಯಬೇಡಿ ಎನ್ನುವ ಮೂಲಕ ನಿಮ್ಮ ಮನಸ್ಸಿನಲ್ಲಿರುವ ಕೊಳಕನ್ನು ತೆಗೆಯಿರಿ ಎಂದು ನೆಟ್ಟಿಗನಿಗೆ ರಿತೇಶ್ ನೀತಿ ಪಾಠ ಮಾಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಜೆನಿಲಿಯಾ ಡಿಸೋಜಾ ಅವರು ತುಜೆ ಮೇರಿ ಕಸಮ್, ಸಾಂಬಾ, ಚೆನ್ನೈ ಕಾದಲ್, ಸಂತೋಷ್ ಸುಬ್ರಮಣ್ಯಂ, ಜಾನೆ ತು ಯಾ ಜಾನೆ ನಾ ಮತ್ತು ತೇರೇ ನಾಲ್ ಲವ್ ಹೋ ಗಯಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ರಿತೀಶ್ ದೇಶಮುಖ್ ಕೊನೆಯದಾಗಿ ಭಾಗಿ 3ರಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)