ಸಿನಿವಾಣಿ

ಜಾಲತಾಣದಲ್ಲಿ ಮಲಯಾಳಂ ನಟಿ ರೆಮ್ಯಾ ಸುರೇಶ್ ನಕಲಿ ಪೋರ್ನ್ ವಿಡಿಯೋ ವೈರಲ್..!

ತಿರುವನಂತಪುರಂ: ತನ್ನ ಮುಖವನ್ನು ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಶ್ಲೀಲ ವಿಡಿಯೋ ವಿರುದ್ಧ ಮಲಯಾಳಂ ನಟಿ ರೆಮ್ಯಾ ಸುರೇಶ್​ ಸೈಬರ್​ ಕ್ರೈಂಗೆ ದೂರು ನೀಡಿದ್ದಾರೆ.

ಜಾಲತಾಣದಲ್ಲಿ ಹರಿದಾಡುತ್ತಿರುವ ಪೋರ್ನ್​ ವಿಡಿಯೋದಲ್ಲಿರುವ ಮಹಿಳೆಯ ಮುಖ ರೆಮ್ಯಾ ಸುರೇಶ್​ ರೀತಿ ಕಾಣುವಂತೆ ಎಡಿಟ್​ ಮಾಡಲಾಗಿದೆ. ವೈರಲ್​ ಆಗಿರುವುದು ಗಮನಕ್ಕೆ ಬರುತ್ತಿದ್ದಂತೆ ಸಂತ್ರಸ್ತ ನಟಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಘಟನೆ ಸಂಬಂಧ ಆಲಪ್ಪುಳ ಪೊಲೀಸ್​ ವರಿಷ್ಠಾಧಿಕಾರಿಗೆ ಮತ್ತು ಸೈಬರ್​ ಕ್ರೈಂಗೆ ರೆಮ್ಯಾ ದೂರು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ರೆಮ್ಯಾ, ಅಧಿಕಾರಿಗಳು ದೂರನ್ನು ಸ್ವೀಕರಿಸಿದ್ದು, ತನಿಖೆ ಆರಂಭಿಸಿದ್ದಾರೆ. ವಾಟ್ಸ್​ಆ್ಯಪ್​ ಗ್ರೂಪ್​ ಡೇಟಾವನ್ನು ತಕ್ಷಣ ಕಲೆಹಾಕಿದ್ದಾರೆ. ಗ್ರೂಪ್​ನ ಅಡ್ಮಿನ್​ ಬಗ್ಗೆಯೂ ಮಾಹಿತಿ ಕಲೆಹಾಕಿದ್ದಾರೆಂದು ತಿಳಿಸಿದ್ದಾರೆ. ಎಷ್ಟು ಮಂದಿ ಈ ವಿಡಿಯೋ ನೋಡಿದ್ದಾರೆಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಹೇಗೆ ತಲುಪಬಹುದು ಮತ್ತು ಆ ವೀಡಿಯೊ ಕ್ಲಿಪ್‌ನಲ್ಲಿ ಅವರು ನನ್ನನ್ನು ನೋಡುತ್ತಿಲ್ಲ ಎಂದು ಹೇಗೆ ಹೇಳಬಹುದು? ಈ ವಿಡಿಯೋ ನನ್ನ ಮಾನಸಿಕ ಅನಾರೋಗ್ಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ. (ಏಜೆನ್ಸೀಸ್​)